ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಮಗಳ ಗರ್ಭಪಾತ ಮಾಡಿಸಿದರಾ?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 3: ಕಾಂಗ್ರೆಸ್ ಮುಖಂಡ ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ವಿರುದ್ಧ ತಮ್ಮ ಪುತ್ರಿ ಇಫಾ ಅವರಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿ ಬಂದಿರುವುದು ಮಾಧ್ಯಮದಲ್ಲಿ ವರದಿಯಾಗಿದೆ.

ಸಿ.ಎಂ. ಇಬ್ರಾಹಿಂ ಅವರು ಪುತ್ರಿ ನಾಲ್ಕುವರೆ ತಿಂಗಳ ಗರ್ಭಿಣಿಗೆ ಇಫಾಗೆ ಕುಡಿಯುವ ಜ್ಯೂಸ್ ನಲ್ಲಿ ಗರ್ಭಪಾತದ ಮಾತ್ರೆ ಬೆರೆಸಿ ಕೊಟ್ಟಿರುವುದಾಗಿ ಸ್ವತಃ ಆಕೆಯೇ ಆರೋಪಿಸಿದ್ದು ವರದಿಯಲ್ಲಿ ಕೇಳಿಬಂದಿದೆ.[ಸಿಎಂ ಇಬ್ರಾಹಿಂನ ಕಾಂಗ್ರೆಸ್ ನಿಂದ ಉಚ್ಚಾಟಿಸಿ: ಪೂಜಾರಿ]

CM Ibrahim has been accused of forcing his daughter to have an abortion

ಏಳು ತಿಂಗಳ ಹಿಂದೆ ಇಬ್ರಾಹಿಂ ವಿರೋಧವಿದ್ದರೂ ಪುತ್ರಿ ಇಫಾ ಅವರು ಇಬ್ರಾಹಿ ಸಹೋದರ ಪುತ್ರನ ಜೊತೆ ಪ್ರೇಮ ವಿವಾಹವಾಗಿದ್ದರು. ನಾಲ್ಕುವರೆ ತಿಂಗಳ ನಂತರ ಗರ್ಭಿಣಿಯಾದ ಇಫಾ ಮನೆಗೆ ಬಂದಾಗ ಕಾಂಗ್ರೆಸ್ ಮುಖಂಡ ಮಗಳಿಗೆ ಜ್ಯೂಸಿನಲ್ಲಿ ಗರ್ಭಪಾತದ ಮಾತ್ರೆ ಬೆರಸಿಕೊಟ್ಟಿರುವುದಾಗಿ ಸ್ವತಃ ಮಗಳೇ ತಿಳಿಸಿರುವುದು ಇಬ್ರಾಹಿಂಗೆ ಉರುಳಾಗಿ ಪರಿಣಮಿಸಿದೆ.

CM Ibrahim has been accused of forcing his daughter to have an abortion

ಸೋಮವಾರ ಮುಂಜಾನೆ ಇಫಾ ತಾಯಿ ಇಪಾಗೆ ಹಣ್ಣಿನ ರಸ ಕುಡಿಸಿದ್ದರು. ಜ್ಯೂಸ್ ಕುಡಿದ ನಂತರ ಇಫಾಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಾಗ ವೈದ್ಯರು ಗರ್ಭಪಾತ ಮಾಡಿರುವುದು ತಿಳಿದುಬಂದಿದೆ. ಹೀಗಾಗಿ ಇಫಾ ತವರು ಮನೆಯಲ್ಲಿಯೇ ಹಣ್ಣಿನ ರಸ ಕುಡಿಸಿ ಗರ್ಭಪಾತ ಮಾಡಿಸಿರುವುದಾಗಿ ಆರೋಪ ಮಾಡಿದ್ದಾರೆ. ಅಲ್ಲದೆ ಅಪ್ಪನಿಗೆ ತನ್ನ ಪ್ರೇಮವಿವಾಹದ ಬಗ್ಗೆ ಮೊದಲಿನಿಂದಲೂ ವಿರೋಧವಿದ್ದು ಈಗ ಅವರೇ ಮಾಡಿಸಿದ್ದಾರೆ ಎಂದು ಇಫಾ ಮಾಧ್ಯಮದ ಮುಂದೆ ಆರೋಪಿಸಿದ್ದಾರೆ.

ಇನ್ನು ಈ ಸಂಬಂಧ ಇಬ್ರಾಹಿಂ ಅವರು ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ. ಅದರೆ ಮಗಳ ಆರೋಪದ ಬಿಸಿ ತುಪ್ಪ ನುಂಗಲೂ ಆಗಿದೆ ಉಗಿಯಲೂ ಆಗದ ಸ್ಥಿತಿ ಅವರದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Karnataka minister CM Ibrahim has been accused of forcing his daughter to have an abortion, as she had got married against his wishes.
Please Wait while comments are loading...