ಪೌರ ಕಾರ್ಮಿಕರಿಗೆ ಸಿಎಂ ಆಗುವರೇ ಅನ್ನದಾತ ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 8: ಬರುವ ಮಾರ್ಚ್ ಒಳಗೆ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಕಟಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿನ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಇದೇ ಮೊದಲ ಬಾರಿಗೆ ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆಯನ್ನು ಉದ್ಘಾಟಿಸಿದರು.

ನಂತರ ಮಾತನಾಡಿ, ಪೌರ ಕಾರ್ಮಿಕರನ್ನು ಕಾಯಂ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಹಾಗಾಗಿ ಮಧ್ಯವರ್ತಿಗಳ ಜಾಲಕ್ಕೆ ಒಳಗಾಗಬಾರದು ಎಂದರು.[ಬ್ರಿಟನ್ ಪ್ರಧಾನಿ ತೆರೆಸಾ ಅವರನ್ನು ಸ್ವಾಗತಿಸಿದ ಸಿದ್ದರಾಮಯ್ಯ]

cm civilian workers permanent worker on march

ಬಿಸಿಯೂಟದ ವಿಶೇಷವೇನು?
ಪೌರ ಕಾರ್ಮಿಕರಿಗೆ ಮಂಗಳವಾರದಿಂದಲೇ ಉಚಿತ ಬಿಸಿಯೂಟಕ್ಕೆ ಚಾಲನೆ ನೀಡಿದ್ದು, 32,704 ಪೌರ ಕಾರ್ಮಿಕರಿಗೆ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿನ 44 ವಾರ್ಡ್ ಗಳಲ್ಲಿ ಆರಂಭ ಮಾಡಲಾಗಿದ್ದು, ಒಂದು ತಿಂಗಳಲ್ಲಿ 8 ವಲಯಗಳಲ್ಲಿ ಜಾರಿ ಮಾಡಲು ಚಿಂತಿಸಲಾಗಿದೆ. 600 ಪ್ರದೇಶಗಳಲ್ಲಿ ಇಸ್ಕಾನ್ ನಿಂದ ಬಿಸಿಯೂಟ ಹಂಚಿಕೆ ಮಾಡಲು ವ್ಯವಸ್ಥೆಗೊಳಿಸಲಾಗಿದೆ. ಇಸ್ಕಾನ್ ಗೆ ಪ್ರತಿ ಊಟಕ್ಕೆ 20 ರೂ. ನೀಡಲು ಚಿಂತಿಸಲಾಗಿದೆ.

ವೇತನ ಹೆಚ್ಚಳ:
ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗಾಗಿ 85 ಸಾವಿರ ಕೋಟಿ ರೂ. ಹಣ ತೆಗೆದಿಡಲಾಗಿದೆ. ಶೇ. 24.1ರ ಮೀಸಲಾತಿಯಂತೆ ಈಗಾಗಲೇ ಈ ವರ್ಷ 19,542 ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.[ಟಿಪ್ಪು ಜಯಂತಿ: ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆಗೆ ಅವಕಾಶವಿಲ್ಲ]

ನಗರದ ಪೌರ ಕಾರ್ಮಿಕರಿಗೆ ಒಂದೇ ಬಾರಿಗೆ 5,075 ರೂ. ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದ ಒಟ್ಟು 12 ಸಾವಿರ ರೂ. ಪ್ರತಿ ತಿಂಗಳು ಪೌರ ಕಾರ್ಮಿಕರಿಗೆ ವೇತನ ಸಿಗಲಿದೆ ಎಂದು ಅವರು ತಿಳಿಸಿದರು.

ಹೆಚ್ಚು ಮಾಡಿದ ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ ತಮ್ಮ ಕುಟುಂಬದ ಅಭಿವೃದ್ದಿಗೆ ಬಳಸಿಕೊಳ್ಳಿ, ಸಾಲದ ಶೂಲಕ್ಕೆ ಬಲಿಯಾಗಬೇಡಿ ಎಚ್ಚರವಹಿಸಿ ಎಂದರು.

cm civilian workers permanent worker on march

ಉಚಿತ ಪ್ಲಾಟ್:
ನಗರದ ಪೌರ ಕಾರ್ಮಿಕರಿಗೂ ವಸತಿ ಒದಗಿಸಲು 4 ಸಾವಿರ ಫ್ಲ್ಯಾಟ್ ಗಳನ್ನು ಉಚಿತವಾಗಿ ನೀಡಲು ಆದೇಶಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಈ ವರ್ಷ 3 ಸಾವಿರ ಕೋಟಿ ರೂ. ಗಳ ತೆರಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈವರೆಗೆ 1,960 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದ ಸಿಎಂ, ಸರ್ಕಾರ, ಬಿಬಿಎಂಪಿಗೆ 7,300 ಕೋಟಿ ರೂ.ಗಳ ಅನುದಾನವನ್ನು ಒದಗಿಸಿದೆ. ಈ ಹಣ ಸದ್ಬಳಕೆಯಾಗಬೇಕು ಎಂದರು.

ಮುಲಾಜಿಲ್ಲದೆ ತೆರವು:
ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಬಡವರಿರಲಿ, ಶ್ರೀಮಂತರಿರಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದರು.[ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ನಂ.1: ಪ್ರಶಸ್ತಿ ಸ್ವೀಕರಿಸಿದ ಸಿದ್ದರಾಮಯ್ಯ]

ಸರ್ಕಾರ ಯೋಜನೆಗಳಿಗೆ ಪ್ರೇರೇಪಿಸುವವರು ಪ್ರತಿಪಕ್ಷಗಳು ಅದನ್ನು ಕಾರ್ಯರೂಪಕ್ಕೆ ತಂದಾಗ ಅದನ್ನು ವಿರೋಧಿಸುವವರು ಅವರೇ ಎಂದು ತರಾಟೆಗೆ ತೆಗೆದುಕೊಂಡರು

ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, ಪೌರ ಕಾರ್ಮಿಕರ ವೇತನ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸೇರಿಸಲಾಗುವುದು. 4 ಸಾವಿರ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಆದೇಶಿಸಲಾಗಿದೆ ಎಂದರು.

ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜ್, ಮೇಯರ್ ಪದ್ಮಾವತಿ, ಉಪಮೇಯರ್ ಆನಂದ್, ಆಡಳಿತ ಪಕ್ಷದ ನಾಯಕ ಮಹಮ್ಮದ್ ರಿಜ್ವಾನ್ ನವಾಬ್ ಮುಂತಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
permanent civilian workers into the March said form Chief Minister Siddaramaiah, provied the Bisiyuta programe to established on bengaluru
Please Wait while comments are loading...