ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಕುಮಾರಸ್ವಾಮಿಗೆ ಅನಾರೋಗ್ಯ: ಎಲ್ಲ ಕಾರ್ಯಕ್ರಮ ರದ್ದು

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಗೆ ಅನಾರೋಗ್ಯ | ಎಲ್ಲಾ ಕಾರ್ಯಕ್ರಮಗಳು ರದ್ದು | Oneindia Kannada

ಬೆಂಗಳೂರು, ಅಕ್ಟೋಬರ್ 24: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಅನಾರೋಗ್ಯ ಕಾಣಿಸಿಕೊಂಡ ಪರಿಣಾಮ ಬುಧವಾರದ ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಕುಮಾರಸ್ವಾಮಿಯವರಿಗೆ ಉದರ ಬೇನೆ ಕಾಣಿಸಿಕೊಂಡಿದ್ದು ಎಲ್ಲಾ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ, ವಾಲ್ಮೀಕಿ ಜಂತಿ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಬೇಕಿದ್ದ ಕಾರ್ಯಕ್ರಮಕ್ಕೂ ಕುಮಾರಸ್ವಾಮಿ ಗೈರಾಗಿದ್ದಾರೆ. ಇದು ವಾಲ್ಮೀಕಿ ಸಮುದಾಯದ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.

CM cancels program following illness

ಕಾರ್ಯಕ್ರಮದ ವೇದಿಕೆ ಮೇಲೆ ಹಾಕಲಾಗಿದ್ದ ಸಿಎಂ ಫೋಟೊ ತೆಗೆಯುವಂತೆ ಒತ್ತಾಯಿಸಿದ್ದಾರೆ, ಎಸಮುದಾಯದ ಒತ್ತಡಕ್ಕೆ ಮಣಿದು ಆಯೋಜಕರು ಫೋಟೊವನ್ನು ತೆಗೆದಿದ್ದಾರೆ.

ಜನತಾ ದರ್ಶನ: 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, 50% ಇತ್ಯರ್ಥಜನತಾ ದರ್ಶನ: 17 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕಾರ, 50% ಇತ್ಯರ್ಥ

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಭಾಗಿಯಾಗಿದ್ದರು.

ಕುಮಾರಸ್ವಾಮಿ ಧರ್ಮಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಬೇಕಿತ್ತು, ಹಾಗೂ 2.5 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡುವವರಿದ್ದರು. ಹಾಗೆಯೇ ಮಧ್ಯಾಹ್ನ 12 ಗಂಟೆಗೆ ಕೈಗಾರಿಕಾ ಉದ್ದೇಶಕ್ಕೆ ಉಪಯೋಗಿಸುವ ನೀರಿನ ದರದ ಪರಿಷ್ಕರಣೆ ಕುರಿತಂತೆ ಸಭೆ ನಿಗದಿಯಾಗಿತ್ತು.

ನವೆಂಬರ್ 01ರಿಂದ ಸುಸ್ಥಿರ ಕೃಷಿ ಕ್ರಾಂತಿಗೆ ಮುನ್ನುಡಿ : ಎಚ್ಡಿಕೆನವೆಂಬರ್ 01ರಿಂದ ಸುಸ್ಥಿರ ಕೃಷಿ ಕ್ರಾಂತಿಗೆ ಮುನ್ನುಡಿ : ಎಚ್ಡಿಕೆ

ಮಧ್ಯಾಹ್ನ 1 ಗಂಟೆಗೆ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್, ಕೆಜಿಎಫ್ ಕಂಪನಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ಸಭೆ ನಡೆಯಬೇಕಿತ್ತು.

ಮಧ್ಯಾಹ್ನ 3 ಗಂಟೆಗೆ ಕೆಪಿಸಿ ಬೋರ್ಡ್ ಮೀಟಿಂಗ್, 3.45ಕ್ಕೆ ಬಿಇಎಂಎಲ್ ವತಿಯಂದ ಮುಖ್ಯಮಂತ್ರಿಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಚೆಕ್ ಸಲ್ಲಿಕೆ, ಕೆಎಎಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಭೇಟಿ ಹಾಗೆಯೇ ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಇದೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಲಸಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

English summary
Due to gastrointestinal issues chief minister H.D.Kumaraswamy has canceled his all programs which were scheduled in Bangalore and Dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X