ಸೆ.16 ರಂದು ಬೆಂಗಳೂರಿನಲ್ಲಿ 'ಕ್ಲೋಸ್ ಟು ಮೈ ಹಾರ್ಟ್' ಗಾನ ಬಜಾನ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ಕನ್ನಡ, ಹಿಂದಿ ಹಳೆಯ ಹಾಡುಗಳು ಮತ್ತು ಗಜಲ್ ಗಳ ರಸದೌತಣವನ್ನು ನೀಡಲು ಪ್ರಸಿದ್ಧ ಹಿಂದೂಸ್ತಾನಿ ಗಾಯಕ ರಾಮಚಂದ್ರ ಹಡಪದ ಮತ್ತವರ ತಂಡ ಸಿದ್ಧವಾಗಿದೆ.

ಬೆಂಗಳೂರು: ಸೆ.13 ರಂದು ಸಮೃದ್ಧ ಸಾಹಿತ್ಯದ 2 ಪುಸ್ತಕ ಲೋಕಾರ್ಪಣೆ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೆ. 16 ರಂದು ಸಂಜೆ 6 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಪ್ರಸಿದ್ಧ ಗಾಯಕರೂ, ಸಂಗೀತಗಾರರೂ ಆದ ರಾಮಚಂದ್ರ ಹಡಪದ, ಶ್ವೇತಾ ಪ್ರಭು, ಶ್ರುತಿ ವಿ.ಎಸ್. 'ಕ್ಲೋಸ್ ಟು ಮೈ ಹಾರ್ಟ್' ಎಂಬ ಈ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಗಾನ ರಸದೌತಣ ಉಣಬಡಿಸಲಿದ್ದಾರೆ.

Close to my heart programme on Sep 16th

ಕೀಬೋರ್ಡ್ ಮೂಲಕ ಸಂಗೀತ ಥಾಮಸ್, ರಿದಮ್ ಮೂಲಕ ಪ್ಯಾಡ್ ಪ್ರಕಾಶ್, ವೈಯೋಲಿನ್ ನಿಂದ ರಾಜನ್ ಕುಮಾರ್, ಕೊಳಲು ನಾದದಿಂದ ಸಂದೀಪ್, ಡೊಲಾಕ್ ಮೂಲಕ ಪ್ರದ್ಯುಮ್ನ, ತಬಲದಿಂದ ಜಲೀಲ್ ಪಾಶಾ ಕಾರ್ಯಕ್ರಮದಲ್ಲಿ ಮೋಡಿ ಮಾಡಲಿದ್ದಾರೆ.

ಕಾರ್ಯಕ್ರಮದ ನಿರೂಪಣೆಯನ್ನು ನೀತು ಸೈನಿ ಮತ್ತು ರಾಜಾ ಶಶಿಧರ್ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಪಾಸ್ ಶುಲ್ಕ ರೂ.200/-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A singing programme named close to my heart by Ramachandra Hadapad and team will be taking place on Sep 16th, 6 pm in Ravindra Kalakshetra Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ