ವಿದ್ಯಾರ್ಥಿಗಳ ಕೌಶಲ್ಯ ಗುರುತಿಸುವ ಸ್ಪೆಲ್ಲಿಂಗ್ ಸ್ಪರ್ಧೆ!

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 12 : ಐಟಿಸಿ ಕ್ಲಾಸ್ ಮೇಟ್ ವತಿಯಿಂದ, ರೇಡಿಯೋ ಮಿರ್ಚಿ ಸಹಯೋಗದಲ್ಲಿ ಸ್ಪೆಲ್ಲಿಂಗ್ ಸ್ಪರ್ಧೆಯ ಸ್ಪೆಲ್ ಬೀ 10 ನೇ ಆವೃತ್ತಿಯನ್ನು ಆಯೋಜಿಸಿದೆ.

ಈ ವಿಶಿಷ್ಟ ಸ್ಪರ್ಧೆ ದೇಶದ ಅತ್ಯುತ್ತಮ ಸ್ಪೆಲ್ಲರ್ ಗಳಿಗೆ ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳಲು ವೇದಿಕೆ ಸೃಷ್ಟಿಸುವುದಲ್ಲದೆ ಅವರ ವಿಶಿಷ್ಟ ಸ್ಪೆಲ್ಲಿಂಗ್ ಕೌಶಲ್ಯಗಳನ್ನು ಗುರುತಿಸುತ್ತದೆ. ಈ ಸ್ಪೆಲ್ಲಿಂಗ್ ಅಸಾಮಾನ್ಯ ಕಾರ್ಯಕ್ರಮವಾಗಿದ್ದು , ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಅನುಭವ ನೀಡಲಿದೆ.

ಕ್ಲಾಸ್ ಮೇಟ್ ಸ್ಪೆಲ್ ಬೀ 30 ನಗರಗಳ ಒಂದು ಸಾವಿರ ಶಾಲೆಗಳಿಗೂ ಹೆಚ್ಚು ಸಂಚತಿಸಲಿದ್ದು, ಭಾರತದಾದ್ಯಂತ 5 ರಿಂದ 9 ನೇ ತರಗತಿಯ 3 ಲಕ್ಷ ವಿದ್ಯಾರ್ಥಿಗಳನ್ನು ತಲುಪಲಿದೆ. ಅಲ್ಲದೇ ಆನ್ ಲೈನ್ ನಲ್ಲಿಯೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆಯ ಶ್ರೇಷ್ಠ 10 ಅಭ್ಯರ್ಥಿಗಳು ತಮ್ಮ ಕೌಶಲ್ಯಗಳನ್ನು ಡಿಸ್ಕವರ್ ಚಾನೆಲ್, ಡಿಸ್ಕವರಿ ಕಿಡ್ಸ್ ಮತ್ತು ಡಿಸ್ಕವರಿ ತಮಿಳು ಚಾನೆಲ್‍ಗಳಲ್ಲಿ ಪ್ರದರ್ಶಿಸುತ್ತಾರೆ. ಕ್ಲಾಸ್‍ಮೇಟ್ ಪ್ರತಿಯೊಂದು ಮಗುವೂ ವಿಶಿಷ್ಟ ಎಂದು ನಂಬುತ್ತದೆ.

Classmate SpellBee is back with its 10th Season

ಕ್ಲಾಸ್‍ಮೇಟ್ ಸ್ಪೆಲ್ ಬೀ ಸೀಸನ್ 10ರ ವಿವರಗಳು: ಕ್ಲಾಸ್‍ಮೇಟ್ ಸ್ಪೆಲ್ ಬೀ ಸೀಸನ್ 10ರ ರಾಷ್ಟ್ರೀಯ ಚಾಂಪಿಯನ್ 2 ಲಕ್ಷ ರೂ ಬಹುಮಾನ ಪಡೆಯುವುದಲ್ಲದೆ ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯುವ ಪ್ರತಿಷ್ಠಿತ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ 2018ರಲ್ಲಿ ಎಲ್ಲ ವೆಚ್ಚಗಳನ್ನೂ ಪಾವತಿಸಿದ ಪ್ರವಾಸಕ್ಕೆ ಅವಕಾಶ ಪಡೆಯುತ್ತಾರೆ. 4 ಸೆಮಿ-ಫೈನಲಿಸ್ಟ್ ಗಳು ತಲಾ 50 ಸಾವಿರ ರೂ. ನಗದು ಬಹುಮಾನ ಪಡೆಯುತ್ತಾರೆ. ಮ್ಮ ತಮ್ಮ ಶಾಲೆಗಳಲ್ಲಿ ನಡೆಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು, ಅಥವಾ ಆನ್ ಲೈನ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಸ್ಪರ್ಧೆಯ ಪ್ರಾರಂಭಿಕ ಹಂತದಲ್ಲಿ ಶಾಲೆಗಳಲ್ಲಿ ಸ್ಪೆಲ್ಲಿಂಗ್ ಟೆಸ್ಟ್‍ ಗಳನ್ನು ನೀಡಲಾಗುತ್ತದೆ. ಶಾಲಾ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದವರು ಸಿಟಿ ಅಂತಿಮ ಸುತ್ತಿನಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು ಸೆಮಿ-ಫೈನಲ್ಸ್ ಪ್ರವೇಶಿಸುತ್ತಾರೆ. ಪ್ರತಿ ನಗರದ ಶ್ರೇಷ್ಠ 10 ವಿದ್ಯಾರ್ಥಿಗಳು ಆನ್‍ಲೈನ್ ಪರೀಕ್ಷೆಗೆ ಹಾಜರಾಗುತ್ತಾರೆ. ಇದರಲ್ಲಿ ಭಾರತದಾದ್ಯಂತ 16 ಶ್ರೇಷ್ಠ ಸ್ಪೆಲ್ಲರ್‍ಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳು ನಂತರ ಕ್ಲಾಸ್‍ಮೇಟ್ ಸ್ಪೆಲ್ ಬೀ ಚಾಂಪಿಯನ್ ಶೀರ್ಷಿಕೆಗೆ ಗ್ರಾಂಡ್ ಫೈನಲ್‍ನಲ್ಲಿ ಹಣಾಹಣಿ ನಡೆಸುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's No.1 Note book Brand, Classmate from ITC, in collaboration with Radio Mirchi is organising Season 10 India's largest spelling competition for school students, Spell Bee.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ