ಅದಿತಿಯಿಂದ ಮಾರ್ಚ್ 20ರಂದು ಭರತನಾಟ್ಯ ರಂಗಪ್ರವೇಶ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 19 : ಭರತನಾಟ್ಯ ಪ್ರವೀಣ ವಿದ್ವಾನ್ ಗುರುನಂದನ್ ಅವರ ಬಳಿ ಶಿಷ್ಯವೃತ್ತಿ ಮಾಡುತ್ತಿರುವ ಕುಮಾರಿ ಅದಿತಿ ಎಸ್. ಪದಕಿ ಅವರ ಭರತನಾಟ್ಯ ರಂಗಪ್ರವೇಶ ಮಾರ್ಚ್ 20, ಭಾನುವಾರ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ನಡೆಯುತ್ತಿದೆ.

ಅಭಿವ್ಯಕ್ತಿ ಡಾನ್ಸ್ ಸೆಂಟರ್ ಮತ್ತು ಹಂಸ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅರ್ಪಿಸುತ್ತಿರುವ ಅದಿತಿ ಅವರ ಭರತನಾಟ್ಯ ರಂಗಪ್ರವೇಶ ಭಾರತೀಯ ವಿದ್ಯಾ ಭವನದಲ್ಲಿ ಭಾನುವಾರ ಬೆಳಿಗ್ಗೆ 10.15ಕ್ಕೆ ಆರಂಭವಾಗಲಿದೆ.

ಡಾ. ತುಳಸಿ ರಾಮಚಂದ್ರ, ನಿರ್ದೇಶಕ, ನೃತ್ಯಾಲಯ ಟ್ರಸ್ಟ್, ಮೈಸೂರು, ಪ್ರೊ. ಎಂ.ಆರ್. ಹೊಳ್ಳ, ಅಧ್ಯಕ್ಷ, ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಜಾನುಕುಂಟೆ, ಜಯಂತಿ ಶ್ರೀಶುಕ, ನಿರ್ದೇಶಕರು, ಹಂಸ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಯಲಹಂಕ ಇವರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. [ರಂಗದ ರಂಗೇರಿಸಿದ ಸಂಜನಾ, ರಿನಿಜಾ ರಂಗಪ್ರವೇಶ]

Classical dance (Rangapravesha) of Adithi Padaki

ಅದಿತಿ ಬಗ್ಗೆ : ವತ್ಸಲಾ ಮತ್ತು ಶ್ರೀನಿವಾಸ ಪದಕಿ ಅವರ ಮಗಳಾಗಿರುವ ಅದಿತಿ 3ನೇ ವಯಸ್ಸಿನಿಂದಲೇ ಸಂಗೀತದ ಗುಂಗು ಹಿಡಿಸಿಕೊಂಡರು. ಅದಿತಿ ಕಾಲಿಗೆ ಗೆಜ್ಜೆ ಕಟ್ಟಲು ಆರಂಭಿಸಿದ್ದು 8ನೇ ವಯಸ್ಸಿಗೆ. 2011ರಲ್ಲಿ ರಾಜ್ಯ ಸರಕಾರ ನಡೆಸುವ ಭರತನಾಟ್ಯದಲ್ಲಿ ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, 2016ರಲ್ಲಿ ನಡೆಸಲಿರುವ ಸೀನಿಯರ್ ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ.

ಪ್ರಸ್ತುತ, ರಾಜಾನುಕುಂಟೆಯಲ್ಲಿರುವ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಡಿಗ್ರಿ ಓದುತ್ತಿರುವ ಅದಿತಿ, ನೃತ್ಯ ಮೇಧ, ನೃತ್ಯ ವೈವಿಧ್ಯಮ್, ಬರೋಡಾದಲ್ಲಿ ನಡೆದ ವಿಶ್ವ ನೃತ್ಯ ದಿನ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ತಿರುಪತಿಯಲ್ಲಿಯೂ ನಾದ ನೀರಜನಮ್ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದರು. [ಬೆಂಗಳೂರಿನಲ್ಲಿ ಸಿಂಗಪುರದ ಮೇಘ್ನಾಳ ರಂಗ ಪ್ರವೇಶ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Adithi Padaki’s solo Bharatanatyam recital with live music at Bharatiya Vidya Bhavan, Bengaluru, on 20th March 2016 at 10 AM.
Please Wait while comments are loading...