ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳಲ್ಲಿ ಕೀಳರಿಮೆ, ತಾರತಮ್ಯ ಮೂಡಿಸುವ ಮಾನಿಟರ್ ಪದ್ಧತಿ ಬೇಕೆ?

By Nayana
|
Google Oneindia Kannada News

ಬೆಂಗಳೂರು, ಜು.12: ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಿರುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ, ನಾವು ಮಕ್ಕಳಿಗೆ ಈ ವಿಚಾರ ಹೇಳಿದರೆ ಬೇಜಾರಾಗಬಹುದು ಎಂದು ಕೊಂಡರೆ ಅದನ್ನು ಸುಲಭವಾಗಿ ಸ್ವೀಕರಿಸುತ್ತಾರೆ ಕೆಲವೊಂದು ಸಣ್ಣಪುಟ್ಟ ವಿಚಾರಗಳಿಗೆ ಮುನಿಸಿಕೊಳ್ಳುತ್ತಾರೆ.

ಆದರೆ ಬೆಂಗಳೂರಲ್ಲಿ ನಡೆದಿರುವ ಒಂದು ಘಟನೆ ಪೋಷಕರನ್ನು ಬೆಚ್ಚಿ ಬೀಳಿಸುತ್ತದೆ, ಕ್ಲಾಸ್‌ ಮಾನಿಟರ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ರಾಜರಾಜೇಶ್ವರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ

ಐಡಿಯಲ್‌ ಹೋಂ ಲೇಔಟ್‌ನ ಚಿತ್ರಾ ಅಪಾರ್ಟ್‌ಮೆಂಟ್‌ನಲ್ಲಿ ನೆಲಡಸಿರುವ ರಾಜೇಶ್‌ ಮತ್ತು ದಿವ್ಯಾ ದಂಪತಿಯ ಪುತ್ರ ದ್ರುವರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ, ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದ ಈತ ತಂದೆ, ತಾಯಿ ಮಲಗಿದ ನಂತರ ಎದ್ದು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Class leader issue: Teacher denies, student suicide

ದ್ರುವರಾಜ್‌ ಸ್ವಭಾವದಲ್ಲಿ ಮುಂಗೋಪಿಯಾಗಿದ್ದ ಆದರೆ ತುಂಬಾ ಪ್ರತಿಭಾವಂತನಾಗಿದ್ದ, ಖುಷಿ ಖುಷಿಯಿಂದಲೇ ಶಾಲೆಗೆ ಹೋಗಿದ್ದ, ಸಂಜೆ ಮರಳುವಾಗ ತುಂಬಾ ಬೇಸರದಲ್ಲಿದ್ದ ತನ್ನನ್ನು ಕ್ಲಾಸ್‌ ಮಾನಿಟರ್‌ ಮಾಡಲಿಲ್ಲ ಎನ್ನುವ ಬೇಸರವನ್ನು ವ್ಯಕ್ತಪಡಿಸಿದ್ದ, ಆದರೆ ರಾತ್ರಿ ಊಟ ಮಾಡಿ ಮಲಗಿದ ನಂತರ ಎದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗ್ಗೆ ಪೋಷಕರು ಎದ್ದು ಮಗನನ್ನು ಎಬ್ಬಿಸಲು ಹೋದಾಗ ಪೋಷಕರಿಗೆ ಈ ವಿಷಯ ಗೊತ್ತಾಗಿದೆ. ಮಕ್ಕಳಲ್ಲಿ ಕೀಳರಿಮೆ, ತಾರತಮ್ಯ ಭಾವನೆ ಮೂಡಿಸುವ ಈ ಮಾನಿಟರ್‌ ಪದ್ಧತಿಯನ್ನು ರದ್ದುಗೊಳಿಸಲು ಪೋಷಕರು ಒತ್ತಾಯಿಸಿದ್ದಾರೆ.

English summary
In a strange incident a student of ninth standard has committed suicide because he was denied as becoming class leader by his teacher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X