ಮೀಟರ್ ಬಡ್ಡಿ ವ್ಯವಹಾರ : ಬೆಂಗಳೂರಲ್ಲಿ ಇಬ್ಬರ ಹತ್ಯೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 01 : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಸರಬಂಡೆಪಾಳ್ಯ ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ರಾತ್ರಿ ಅಸ್ಗರ್ (32) ಮತ್ತು ಆತನ ಸ್ನೇಹಿತ ಅಸ್ಲಂ (33) ಎಂಬುವವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಫ್ಜಲ್ ಖಾನ್ ಮತ್ತು ಆತನ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಪ್ರಕರಣದ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.[ಬೆಂಗಳೂರು ಪೊಲೀಸರ ಗಸ್ತಿಗೆ ಹೈಟೆಕ್ ವಾಹನಗಳು]

police

ಮೀಟರ್ ಬಡ್ಡಿ ವ್ಯವಹಾರ : ಅಸ್ಗರ್ ಮತ್ತು ಅಸ್ಲಂ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಸಾಲ ಕೊಟ್ಟವರ ಬಳಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದರು. ಸಾಲ ವಾಪಸ್ ಕೊಡದ ಜನರ ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದರು. ಮನೆಯಲ್ಲಿರುವ ಮಹಿಳೆಯರ ಬಳಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು.[ಬೆಂಗಳೂರಲ್ಲಿ ರೌಡಿಗಳ ಕಾಳಗ, ಪರ್ವೇಜ್‌ ಹತ್ಯೆ]

ಸರಬಂಡೆಪಾಳ್ಯದಲ್ಲಿ ಅಸ್ಗರ್ ಕಿರುಕುಳದ ಕುರಿತು ಜನರು ಅಫ್ಜಲ್‌ಗೆ ಮಾಹಿತಿ ನೀಡಿದ್ದರು. ಮೂಲತಃ ಸಿದ್ದಾಪುರದ ಅಸ್ಗರ್ ಹಾಗೋ ಅಫ್ಜಲ್ ನಡುವೆ ಹಳೆಯ ದ್ವೇಷವೂ ಇತ್ತು. ಭಾನುವಾರ ಸರಬಂಡೆಪಾಳ್ಯದಲ ಹರಿಕಾಲೋನಿಯಲ್ಲಿರುವ ಮನೆಗೆ ಜಗಳವಾಡಲು ಅಸ್ಗರ್ ಮತ್ತು ಆತನ ಸ್ನೇಹಿತ ಅಸ್ಲಂ ಹೋಗಿದ್ದರು.

ಇಬ್ಬರ ನಡುವೆ ಅಲ್ಲಿ ಜಗಳ ನಡೆದಿದ್ದು, ಆಗ ಅಫ್ಜಲ್ ಸ್ನೇಹಿತರು ರಾಡು ಮತ್ತು ಮಾರಕಾಸ್ತ್ರಗಳಿಂದ ಅಸ್ಗರ್ ಮತ್ತು ಅಸ್ಲಂ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two persons were killed in a clash between rival groups at Kumaraswamy layout police station limits, Bengaluru on Sunday, July 31, 2016.
Please Wait while comments are loading...