ಪೊಲೀಸ್ ಪರೀಕ್ಷೆ ಪತ್ರಿಕೆ ಸೋರಿಕೆ, ನಾಲ್ವರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜುಲೈ 17: ಕರ್ನಾಟಕ ರಾಜ್ಯಾದ್ಯಾಂತ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಹೊಂದಿರುವುದಾಗಿ ಪರೀಕ್ಷಾರ್ಥಿಗಳನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆಯಲು ಯತ್ನಿಸಿದ್ದ 4 ಜನರನ್ನು ಬೆಂಗಳೂರು ನಗರ ಸಿಸಿಬಿ ಅಧಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ.

1) ವಿನಯಗೌಡ 28ವರ್ಷ, ಶಿರಾ ತಾಲ್ಲೋಕ್, ತುಮಕೂರು ಜಿಲ್ಲೆ- ಪಾರ್ಟ್ ಟೈಂ ಟ್ಯೂಷನ್ ಮಾಸ್ಟರ್
2) ನರೇಂದ್ರ ಬಾಬು. ಟಿ.ಎಲ್. 31ವರ್ಷ, ಕೊರಟಗೆರೆ ತಾಲ್ಲೋಕ್, ತುಮಕೂರು ಎನ್.ಜಿ.ಒ.ನಲ್ಲಿ ಕೆಲಸ
3) ಮಂಜುಗೌಡ 29 ವರ್ಷ, ಹುಣಸೂರು ತಾಲ್ಲೋಕ್, ಮೈಸೂರು ಜಿಲ್ಲೆಎನ್.ಜಿ.ಒ..ನಲ್ಲಿ ಕೆಲಸ
4) ಗುರುಮೂರ್ತಿ. ಎನ್ ಬಿನ್ ನರಸಿಂಹಯ್ಯ-46ವರ್ಷ, ಹಾಸನ ಜಿಲ್ಲೆ. ಡಿ.ಎ.ಆರ್.ನಲ್ಲಿ ಮುಖ್ಯಪೇದೆ.

ಇವರುಗಳ ವಿಚಾರಣೆಯಿಂದ ತಿಳಿದುಬಂದಿರುವುದೇನಂದರೆ ಈ ಆರೋಪಿಗಳು ಸುಮಾರು ಒಂದು ತಿಂಗಳಿನಿಂದ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ಸ್ ಹುದ್ದೆಯ ಆಕಾಂಕ್ಷಿಗಳಾಗಿರುವ ಕೆಲವು ಪರೀಕ್ಷಾರ್ಥಿಗಳನ್ನು ಸಂಪರ್ಕಿಸಿ ಅವರುಗಳಿಗೆ ಪರೀಕ್ಷೆಗೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆಯನ್ನು ಸರಬರಾಜು ಮಾಡುವುದಾಗಿ ನಂಬಿಸಿ ಪ್ರತಿ ಅಭ್ಯರ್ಥಿಯಿಂದ ತಲಾ 3,00,000/- ಗಳಷ್ಟು ಹಣ ಪಡೆದು ತಲೆಮರೆಸಿಕೊಳ್ಳುವ ಹುನ್ನಾರದಲ್ಲಿದ್ದರೆಂದು ತಿಳಿದು ಬಂದಿರುತ್ತದೆ.

Civil Constable Exam Paper leak case Four arrested by CCB Police

ಈ ಸಂಚಿನ ಭಾಗವಾಗಿ ಆರೋಪಿ ವಿನನ್ ಗೌಡ, ಈತನು ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಇತರೆ ಆರೋಪಿತರ ಸಹಾಯದಿಂದ ಪರೀಕ್ಷಾರ್ಥಿಗಳನ್ನು ಸಂಪರ್ಕಿಸಿದ್ದಾರೆ.

ಅವರಿಗೆ ತಮ್ಮ ಬಳಿ ದಿನಾಂಕ.17/07/2016 ರಂದು ನಿಗದಿಯಾಗಿರುವ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇರುವುದಾಗಿ ನಂಬಿಸಿ ಅಭ್ಯರ್ಥಿಗಳಿಗೆ ವಂಚಿಸುವ ಪ್ರಯತ್ನದಲ್ಲಿರುವ ಖಚಿತ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ.

ಸಕಾಲದಲ್ಲಿ ಸದರಿ ಕೊಠಡಿಯ ಮೇಲೆ ದಾಳಿ ನಡೆಸಿ ಆರೋಪಿತ ವಿನಯ್ ಗೌಡನನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದಾಗ ಈ ವಂಚಕರ ಬಳಿ ಯಾವುದೇ ಪ್ರಶ್ನೆ ಪತ್ರಿಕೆ ಇಲ್ಲದೆ ಇದ್ದರೂ ಮುಗ್ದ ಪರೀಕ್ಷಾರ್ಥಿಗಳನ್ನು ನಂಬಿಸಿ ಅವರಿಂದ ಮುಂಗಡ ಹಣ ಪಡೆದು ಪರಾರಿಯಾಗಿ ವಂಚಿಸುವ ಹುನ್ನಾರ ಮಾಡಿರುವುದು ಬೆಳಕಿಗೆ ಬಂದಿರುತ್ತದೆ.

ಈ ಆರೋಪಿತರುಗಳಿಂದ 6 ಮೊಬೈಲ್ ಪೋನ್ ಗಳು, 2,500/-ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ದ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೊಂದಣಿಯಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರು (ಅಪರಾಧ).ಕೆ.ವಿ.ಶರತ್ ಚಂದ್ರ ರವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಹೆಚ್.ಡಿ.ಆನಂದ್ ಕುಮಾರ್ ರವರ ನೇತೃತ್ವದಲ್ಲಿ ಸಿ.ಸಿ.ಬಿ ಎ.ಸಿ.ಪಿ.ಗಳಾದ ವಿ.ಜೆ.ಸಜೀತ್, ಡಾ:ಹೆಚ್.ಎನ್.ವೆಂಕಟೇಶ್ ಪ್ರಸನ್ನ, ಜಯಮಾರುತಿ, ಇನ್ಸ್ ಪೆಕ್ಟರ್ .ಎಸ್.ಆರ್.ವೀರೇಂದ್ರಪ್ರಸಾದ್, ರಮೇಶ್ ರಾವ್, ಆನಂದ ಕಬ್ಬೂರಿ, ಭಾನುಪ್ರಸಾದ್, ಮತ್ತು ಸಿಬ್ಬಂದಿಗಳ ತಂಡ ನಡೆಸಿರುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Civil Constable Exam Paper leak case : Four arrested by CCB Police. The accused used to charge Rs 3,00,000 per person for each question paper
Please Wait while comments are loading...