ಕರ್ನಾಟಕಕ್ಕೆ ಎರಡು ಸೆಮಿ ಹೈಸ್ಪೀಡ್ ರೈಲು: ಸುರೇಶ್ ಪ್ರಭು

Posted By:
Subscribe to Oneindia Kannada

ಬೆಂಗಳೂರು, ಮೇ 15: ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಎಂದು ಪೂರ್ಣ ಹೆಸರಿನ ನಾಮಕರಣ, ಅಧಿಕೃತ ಘೋಷಣೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಂದ ನೆರವೇರಿತು.

ಇದಲ್ಲದೆ ಕರ್ನಾಟಕದಲ್ಲಿ ಎರಡು ಸೆಮಿ ಹೈಸ್ಪೀಡ್ ರೈಲು ಓಡಿಸಲು ಕೇಂದ್ರ ಸರ್ಕಾರದ ಚಿಂತನೆ ನಡೆಸಲಿದೆ ಎಂದು ಶುಭ ಸುದ್ದಿಯನ್ನು ನೀಡಿದರು. ಬೆಂಗಳೂರು ರೈಲು ನಿಲ್ದಾಣ ಇನ್ಮುಂದೆ ಸಂಗೊಳ್ಳಿ ರಾಯಣ್ಣ ನಿಲ್ದಾಣ ಪೂರ್ಣ ಹೆಸರಿನಿಂದ ಕರೆಯಲ್ಪಡುತ್ತದೆ.

ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಮೈಸೂರು ನಡುವೆ ಸೆಮಿ ಹೈಸ್ಪೀಡ್ ರೈಲು ಆರಂಭಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಕರ್ನಾಟಕ ಸರ್ಕಾರದೊಡನೆ ಚರ್ಚೆ ನಡೆಸಲಾಗುತ್ತದೆ ಎಂದು ಸುರೇಶ್ ಪ್ರಭು ಹೇಳಿದರು. [ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(1798-1831)]

City railway station was officially renamed as Krantiveera Sangolli Rayanna

ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಮರುನಾಮಕರಣ, ದ್ವಿಪಥೀಕರಣ ಮತ್ತು ಮೇಲ್ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುರೇಶ್ ಪ್ರಭು ಪಾಲ್ಗೊಂಡರು.[ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

* ಬೆಂಗಳೂರು-ಹುಬ್ಬಳ್ಳಿ ರೈಲ್ವೆ ದ್ವಿಪಥ ಮಾರ್ಗವನ್ನು ಮುಂದಿನ ಮೂರು ವರ್ಷದೊಳಗೆ ಮುಗಿಸಿದರೆ ಪ್ರಯಾಣದ ಅವಧಿ 7 ಗಂಟೆಯಿಂದ ನಾಲ್ಕೂವರೆ ಗಂಟೆಗೆ ಇಳಿಯಲಿದೆ.

* ಬೆಂಗಳೂರು- ಹಾಸನ ನಡುವಿನ 165 ಕಿ.ಮೀ ಹೊಸ ಮಾರ್ಗ 2016ರೊಳಗೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
* ಬೆಂಗಳೂರು -ಮೈಸೂರು ಮಾರ್ಗದ ಡಬ್ಲಿಂಗ್ ಕಾರ್ಯ ಕೂಡಾ ಶೀಘ್ರವೇ ನಡೆಯಲಿದೆ.
* ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ವಿವಿಧ ಯೋಜನೆಗಳಿಗಾಗಿ 7,000 ಕೋಟಿ ರು ಹೂಡಿಕೆ ಮಾಡಲಾಗಿದೆ.

* ಕರ್ನಾಟಕದ ಸಮಗ್ರ ರೈಲ್ವೆ ಯೋಜನೆಗಳ ಅನುಷ್ಠಾನ ಮತ್ತು ಹೊಸ ಯೋಜನೆಗಳ ಜಾರಿ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಸೇರಿ ಹೊಸ ಕಂಪನಿಯನ್ನು ಆರಂಭಿಸುವುದಾಗಿ ತಿಳಿಸಿದರು. ['ಸಬ್ ಅರ್ಬನ್ ರೈಲ್ವೆಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್]

ಯಲಹಂಕ ಪೆನುಕೊಂಡ(120 ಕಿ.ಮೀ) , ಅರಸೀಕೆರೆ-ತುಮಕೂರು(96 ಕಿ.ಮೀ), ಹುಬ್ಬಳ್ಳಿ-ಚಿಕ್ಕಜಾಜೂರು (190 ಕಿ.ಮೀ) ಡಬ್ಲಿಂಗ್ ಯೋಜನೆಗೆ ಶಿಲಾನ್ಯಾಸ ಕಾರ್ಯ ನೆರವೇರಿಸಲಾಯಿತು. ದಾವಣಗೆರೆ ಹಾಗೂ ಕೊಪ್ಪಳ ರೈಲ್ವೆ ವಿಭಾಗಕ್ಕೆ ಸೇರಿದ ಕೆಲ ಯೋಜನೆಗಳಿಗೆ ರಿಮೋಟ್ ಬಳಸಿ ವರ್ಚ್ಯುಯಲ್ ತಂತ್ರಜ್ಞಾನದ ಮೂಲಕ ಉದ್ಘಾಟಿಸಿದರು.

ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ, ದಾವಣಗೆರೆಯ ಯೋಜನೆಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸುವುದು ಸಂಭ್ರಮವನ್ನು ಹತ್ತಿಕ್ಕಿದ್ದಂತಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರಿಯಾದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಟ್ಟಿರುವುದು ನಮ್ಮ ನಾಡಿನ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರಿಗೆ ಗೌರವ ನೀಡಿದಂತೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ಸಚಿವರಾದ ವೆಂಕಯ್ಯನಾಯ್ಡು, ಸದಾನಂದಗೌಡ, ಜಿ ಪರಮೇಶ್ವರ್, ರೋಷನ್ ಬೇಗ್, ಕೆ ಜೆ ಜಾರ್ಜ್ ಮತ್ತು ಸಂಸದರು ಹಾಗೂ ಶಾಸಕರು, ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು: ಬೆಂಗಳೂರು-ಮೈಸೂರು ಉಪನಗರ ರೈಲು ಯೋಜನೆ (ಸಬ್ ಅರ್ಬನ್)ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಯೋಜನೆಗೆ ಚಾಲನೆ ದೊರೆಯಲಿದೆ.[ಮಲ್ಯ ಫಾರ್ಮ್ ಮಧ್ಯದಲ್ಲೇ ಓಡಲಿದೆ ರೈಲು]

ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ: ಹಾಸನ-ಬೆಂಗಳೂರು ರೈಲು ಮಾರ್ಗ ಕಾಮಗಾರಿ ಆರಂಭಗೊಂಡು 20 ವರ್ಷಗಳು ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಈ ವರ್ಷವಾದರೂ ಮುಗಿಸಬೇಕು. ರಾಜ್ಯ ಸರ್ಕಾರ ಆರೇಳು ಎಕರೆ ಜಾಗವನ್ನು ರೈಲ್ವೆ ಇಲಾಖೆಗೆ ನೀಡಬೇಕಿದೆ, ಶೀಘ್ರವೇಈ ಬಗ್ಗೆ ಸರ್ಕಾರ ಗಮನ ಹರಿಸಿದರೆ, ಕಾಮಗಾರಿ ಆರಂಭಗೊಳ್ಳಬಹುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Railway Minister Suresh Prabhu laid the foundation stone on Sunday for the Yelahanka-Penukonda, Arisikere-Tumakuru and Hubballi-chikkajajur doubling projects. The City (Bengaluru) railway station was officially renamed as Krantiveera Sangolli Rayanna station.
Please Wait while comments are loading...