ಸಣ್ಣ ಹುಡುಗನ ಸೆಲ್ಯೂಟ್‌ಗೆ ಗೌರವ ಸಲ್ಲಿಸಿದ ಪೊಲೀಸ್ ಕಮಿಷನರ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11: ದಾರಿಯಲ್ಲಿ ಹೋಗುತ್ತಿದ್ದ ಆ ಪುಟ್ಟ ಬಾಲಕನಿಗೆ ಅವರನ್ನು ನೋಡಿ ಏನೆನ್ನಿಸಿತೋ ಏನೋ ಕ್ಷಣ ನಿಂತು ಶಿಸ್ತಿನಿಂದ ಕೈ ಎತ್ತಿ ಸೆಲ್ಯೂಟ್ ಮಾಡಿದ. ಸೆಲ್ಯೂಟ್ ಮಾಡಿಸಿಕೊಂಡ ವ್ಯಕ್ತಿಯೂ ಸಹ ಕೈಲಿದ್ದ ಬ್ಯಾಟನ್‌ (ದಂಡ) ಅನ್ನು ಬಗಲಿಗೆ ಹಾಕಿ ಶಿಸ್ತಿನಿಂದ ಪ್ರತಿ ಸೆಲ್ಯೂಟ್ ಮಾಡಿದರು. ಹೀಗೆ ಸಣ್ಣ ಹುಡುಗನಿಗೆ ಸೆಲ್ಯೂಟ್ ಮಾಡಿದ ವ್ಯಕ್ತಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್!

ಲೋಕಾಯುಕ್ತರಿಗೆ ಇರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು, ಕಾರ್ಯ ಮುಗಿಸಿ ಹೊರ ಬರಬೇಕಾದರೆ ಅವರ ಮುಂದೆ ಶಾಲೆಗೆ ಹೋಗುತ್ತಿದ್ದ ಹುಡುಗನೊಬ್ಬ ನಿಂತು ಪೊಲೀಸ್ ಶೈಲಿಯಲ್ಲಿ ಸೆಲ್ಯೂಟ್ ಮಾಡಿದ, ಆ ಹುಡುಗನ ಸೆಲ್ಯೂಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿದ ಆಯುಕ್ತರು ಶಿಸ್ತು ಬದ್ಧವಾಗಿ ಸೆಲ್ಯೂಟ್ ಮಾಡಿದರು. ಪೊಲೀಸರ್ ಅಧಿಕಾರಿಯಿಂದ ಗೌರವ ಪಡೆದ ಆ ಹುಡುಗ ಅಲ್ಲಿಂದ ಮುಂದುವರೆದ.

ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಣ್ಣ ಹುಡುಗ ನೀಡಿದ ಗೌರವಕ್ಕೂ ಪ್ರತಿಗೌರವ ಸೂಚಿಸಿದ ದೊಡ್ಡ ಪೊಲೀಸ್ ಅಧಿಕಾರಿಯ ದೊಡ್ಡತನವನ್ನು ಸಾಮಾಜಿಕ ಜಲತಾಣ ಕೊಂಡಾಡುತ್ತಿದೆ.

city Police commissioner salutes a school boy

ವಿಡಿಯೋ ವೈರಲ್ ಆದ ನಂತರ ಮಾಧ್ಯಮದೊಂದಿಗೆ ಮಾತನಾಡಿರುವ ಸುನಿಲ್ ಕುಮಾರ್ ಅವರು ಆ ಹುಡುಗನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
city Police commissioner T.Sunil Kumar salutes back a school boy saluted him. While Sunil Kumar walking back from the Malya hospital a school boy stood front of him and salutes, in quick response commissioner also salutes him back. the video of the incident gone viral on social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ