ಬೆಂಗಳೂರು ಬಜೆಟ್ ಸಿದ್ಧತೆ: ಸಾರ್ವಜನಿಕರಿಂದ ಅಹವಾಲು ಆಹ್ವಾನ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 27: ಚೇಂಜ್ ಮೈ ಸಿಟಿ ಸಂಸ್ಥೆಯಿಂದ 2018-19ನೇ ಸಾಲಿನ ಬೆಂಗಳೂರು ನಗರದ ಬಜೆಟ್ ಸಿದ್ಧತೆ ಕುರಿತಂತೆ ಅಹವಾಲನ್ನು ಆಹ್ವಾನಿಸಲಾಗಿದೆ.

ಕಳೆದ ವರ್ಷ 2017-18ರ ಬಜೆಟ್ ಸಂದರ್ಭದಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 69,114 ಸಾವಿರಕ್ಕೂ ಹೆಚ್ಚು ಸಲಹೆ ಸೂಚನೆಗಳನ್ನು ನೀಡಿದ್ದರು. ಬೆಂಗಳೂರು ನಗರದ ಆರ್ಥಿಕ ಹಾಗೂ ಮೂಲ ಸೌಕರ್ಯ ಸಬಲೀಕರಣಕ್ಕಾಗಿ ನಾಗರೀಕರಿಂದ ಹಾಗೂ ವಿವಿಧ ನಾಗರೀಕ ಸಂಘಟನೆಗಳಿಂದ ಅಹವಾಲು ಆಹ್ವಾನಿಸಲಾಗುತ್ತಿದೆ.

City budget: citizens can take part

ಜಾಗೃತ ನಾಗರೀಕರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಕೋರಲಾಗಿದೆ. ಸಾರ್ವಜನಿಕರು ಸರ್ಕಾರವು ಒಟ್ಟಿಗೆ ಕೆಲಸಮಾಡಿದಾಗ ಸಮಾಜದಲ್ಲಿ ಹಲವಾರು ಬದಲಾವಣೆಯನ್ನು ತರಬಹುದು ಎಂಬ ನಂಬಿಕೆಯೊಂದಿಗೆ ಬಿಬಿಎಂಪಿ ಜತೆಗೆ ಪಾಲುದಾದರಾಗಿರುವ ಚೇಂಜ್ ಮೈ ಸಿಟಿ ಸಂಸ್ಥೆಯು ಸಾರ್ವಜನಿಕರಿಂದ ಬಜೆಟ್ ಕುರಿತಂತೆ ಅಹವಾಲನ್ನು ಆಹ್ವಾನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru citizens can be submitted their suggestions and views on budget preparations for the year 2018-19 through campaign MyCity Budget.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ