ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟರ್ಫ್ ಕ್ಲಬ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಟರ್ಫ್ ಕ್ಲಬ್‌ನ(ಬಿಟಿಸಿ) ರೇಸ್ ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು 61ನೇ ಸೆಷನ್ಸ್ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ನ್ಯಾಯಾಲಯಕ್ಕೆ 600ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ಬಿಟಿಸಿ ಸಿಇಒ ಆಗಿದ್ದ ಎಸ್. ನಿರ್ಮಲ್ ಪ್ರಸಾದ್ ಎ1 ಆರೋಪಿಯಾಗಿದ್ದಾರೆ. ಬಿಟಿಸಿ ಮುಖ್ಯ ಸ್ಟೆಫಂಡರಿ ಸ್ಟೀವರ್ಡ್ ಪ್ರದ್ಯುಮ್ನ ಸಿಂಗ್, ಸ್ಟೀವರ್ಡ್ ಅರ್ಜುನ್ ಸಜನಾನಿ, ಕ್ವೀನ್ ಲತೀಫಾ ಕುದುರೆ ಮಾಲೀಕ ವಿವೇಕ್ ಉಭಯ್‌ಕರ್, ಕುದುರೆ ತರಬೇತುದಾರ ನೀಲಲ್ ದರಾಶ ಹಾಗೂ ಬಿಟಿಸಿ ಉಪ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎಚ್.ಎಸ್. ಮಹೇಶ್ ಕ್ರಮವಾಗಿ 2ರಿಂದ 6 ಆರೋಪಿಗಳಾಗಿದ್ದಾರೆ.

 ಬೆಂಗಳೂರು ಟರ್ಫ್ ಕ್ಲಬ್ ಕಾರ್ಮಿಕರ ಪ್ರತಿಭಟನೆ ಬೆಂಗಳೂರು ಟರ್ಫ್ ಕ್ಲಬ್ ಕಾರ್ಮಿಕರ ಪ್ರತಿಭಟನೆ

2017ರ ನಾ.5 ರಂದು ನಡೆದಿದ್ದ ರೇಸ್‌ನಲ್ಲಿ 3 ವರ್ಷದ ಕ್ವೀನ್ ಲತೀಫಾಗೆ ಡ್ರಗ್ಸ್ ಪ್ರೋಕೇನ್ ಕೊಟ್ಟಿದ್ದರಿಂದ ಗೆಲುವು ಸಾಧಿಸಿತ್ತು. ಪರಿಣಾಮ ರೇಸ್‌ನಲ್ಲಿ 2ಮತ್ತು 3 ನೇ ಕುದುರೆಗಳ ಮೇಲೆ ಬಾಜಿ ಕಟ್ಟಿದ್ದ 73,053 ಜನರಿಗೆ 7.30 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಲಾಗಿತ್ತು.

CID submits charge sheet against Bengaluru Turf club

2017ರ ಏಪ್ರಿಲ್ 14ರಂದು ನಡೆದ ಊಟಿ ರೇಸ್‌ಗೆ ಫೇವರಿಟ್ ಆಗಿದ್ದ ಕ್ವೀನ್ ಲತೀಫಾ ಗೆಲ್ಲುವ ಕುದುರೆ ಎಂದು ಬಿಂಬಿಸಲಾಗಿತ್ತು. 32,013 ಜನರು 1ನೇ ಅಥವಾ 2ನೇ ಸ್ಥಾನದಲ್ಲಿ ಗೆಲ್ಲಬಹುದು ಎಂದು 3.20 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದರು. ಅಧೃಏ 4 ನೇ ಸ್ಥಾನಕ್ಕೆ ಕುಸಿದಿತ್ತು. ಬೆಟ್ಟಿಂಗ್ ಕಟ್ಟಿದವರಿಗೆ ಮೋಸಲ ಮಾಡಲಾಗಿದೆ. ಒಳಸಂಚು ರೂಪಿಸಿ ಸಾವಿರಾಋಉ ಜನರಿಗೆ ಆರೋಪಿಗಳು ಮೋಸ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

English summary
Crime Investigation Department has submitted a 600 pages charge sheet against Bengaluru Turg club and named six officials of the club including S.Nirmal prasad. CEO of the club as accused. The CID said in Charge sheet that doping was proved in medical reports against queen Latifa, the racing horse and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X