ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದ ಕ್ರೆಡಿಟ್ ಕಾರ್ಡ್ ವಂಚಕರು

Subscribe to Oneindia Kannada

ಬೆಂಗಳೂರು, ಮೇ. 06: ಸ್ಕಿಮ್ಮಿಂಗ್ ಯಂತ್ರದ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ನ ಮಾಹಿತಿಯನ್ನು ಪಡೆದುಕೊಳ್ಳುವ ವಂಚಕರು ಅದನ್ನು ಬಳಕೆ ಮಾಡಿಕೊಂಡು ನಕಲಿ ಕ್ರೆಡಿಟ್ ಕಾರ್ಡ್ ತಯಾರು ಮಾಡುತ್ತಾರೆ. ನಂತರ ಅಂತರ್ಜಾಲ ಮತ್ತು ಎಟಿಎಂ ಮೂಲಕ ನಿಮ್ಮ ಹಣ ಎಗರಿಸುತ್ತಾರೆ.

ಹೌದು.. ಇಂಥದ್ದೊಂದು ನಕಲಿ ಕ್ರೆಡಿಟ್ ಕಾರ್ಡ್ ಜಾಲ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ಈ ಮೊದಲು ಇಂಥದ್ದೇ ಆರೋಪದಡಿ ಪೊಲೀಸರಿಗೆ ಸೆರೆ ಸಿಕ್ಕಿದ್ದ ಚೆನ್ನೈ ಮೂಲದ ಮನೋಜ್‌ ಕುಮಾರ್‌ನ ತಂಡ ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದೆ.[ಕ್ರೆಡಿಟ್ ಕಾರ್ಡ್ ಇದ್ದರೆ ಸಿಗುವ 6 ಲಾಭಗಳು ಯಾವವು?]

creidit card

ತಲಘಟ್ಟಪುರದ ಡಿ.ಕೆ. ಕಿರಣ್‌ ಹಾಗೂ ಕಸುವನಹಳ್ಳಿ ನಿವಾಸಿಯಾಗಿರುವ ಮನೋಜ್‌ ಪತ್ನಿ ನೀತಾ ಎಂಬುವರನ್ನು ಬಂಧಿಸಲಾಗಿದ್ದು ತಂಡದ ನಾಯಕ ಮನೋಜ್‌ ತಲೆಮರೆಸಿಕೊಂಡಿದ್ದಾನೆ.

ನಕಲಿ ಕ್ರೆಡಿಟ್‌ ಕಾರ್ಡ್‌ ಸೃಷ್ಟಿಸಿದ ಆರೋಪದ ಮೇಲೆ ಮನೋಜ್‌ ಮತ್ತು ಆತನ ಪತ್ನಿ ಕಳೆದ ಡಿಸೆಂಬರ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಮತ್ತೆ ತಮ್ಮ ದಂಧೆ ಮುಂದುವರಿಸಿದ್ದರು. ಆದರೆ, ಪೊಲೀಸರು ದಂಪತಿಯ ಬಗ್ಗೆ ಕಣ್ಣಿಟ್ಟಿದ್ದರಿಂದ ಮತ್ತೆ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ ನಕಲಿ ಕ್ರೆಡಿಟ್‌ ಕಾರ್ಡ್‌ ತಯಾರಿಕೆಗೆ ಬಳಸುತ್ತಿದ್ದ ಯಂತ್ರಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.[ಹಣ ಪಾವತಿಗೆ ನಿಮ್ಮ ಆಯ್ಕೆ ಯಾವುದು? ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್]

creidit card

ಮನೋಜ್‌ ವಿರುದ್ಧ ತಮಿಳುನಾಡು, ರಾಜಸ್ಥಾನ ಹಾಗೂ ಕರ್ನಾಟಕ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿದ್ದು, ಚೆನ್ನೈ ಪೊಲೀಸರು ಮನೋಜ್‌ ಮೇಲೆ ಗೂಂಡಾ ಕಾಯ್ದೆ ಹೂಡಿದ್ದರು. ಪ್ರಮುಖ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಸಿಐಡಿ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Criminal Investigation Department officials have arrested two of three accused in an international credit and debit card fraud case from Kudlu gate area in Bengaluru on Thursday. Thirty-three-year-old Neeta and Kiran were arrested, while the other accused Neeta's husband Manoj Kumar alias Rajshekar is absconding.
Please Wait while comments are loading...