ಡಿಸೆಂಬರ್ 31 ರಂದು ಚರ್ಚ್ ಸ್ಟ್ರೀಟ್ ಅರ್ಧ ಓಪನ್!

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 29 : ಹೊಸ ವರ್ಷದಂದು ಚರ್ಚ್ ಸ್ಟ್ರೀಟ್ ನಲ್ಲಿ ಕೇವಲ ಸಾರ್ವಜನಿಕರ ಓಡಾಟಕ್ಕೆ ಮಾತ್ರ ಅನುವು ಮಾಡಿಕೊಡಲಾಗುತ್ತದೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ಮೊದಲ ಹಂತದ ಕಾಮಗಾರಿಯನ್ನು ಡಿ.31ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ : ಬಿಬಿಎಂಪಿಗೆ 3ನೇ ಗಡುವು!

ಕಳೆದೊಂದು ವರ್ಷದಿಂದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿ ಅಂತಿಮ ಹಂತದಲ್ಲಿದೆ. 9.02 ಕೋಟಿ ರೂ. ಹಣ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನ ಮಾಡಲಾಗುತ್ತಿದ್ದು, ಈಗಾಗೇ ಮೊದಲ ಹಂತದ ೪೮೦ ಮೀಟರ್ ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.

Church street partially open on this Sunday!

ಬೀದಿ ದೀಪ ಅಳವಡಿಕೆ ಹಾಗೂ ಪಾದಚಾರಿ ಮಾರ್ಗದ ಸ್ಲ್ಯಾಬ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇದ್ದು , ಡಿ.31 ರೊಳಗೆ ಪೂರ್ಣಗೊಳ್ಳಲಿದೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಕಸೂತಿ ಮಾದರಿಯ ವಿನ್ಯಾಸದಲ್ಲಿ ಕಾಬಲ್ ಸ್ಟೋನ್ ಅಳವಡಿಸಲಾಗುತ್ತಿದ್ದು ಸದ್ಯ480 ಮೀಟರ್ ರಸ್ತೆಯಲ್ಲಿ ಪೂರ್ಣಗೊಂಡಿದೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ 15 ಸಾವಿರ ಪೊಲೀಸರ ಪಹರೆ!

ಉಳಿದಂತೆ ಎರಡನೇ ಹಂತದ ರಸ್ತೆಯಲ್ಲಿಯೂ ವಿವಿಧ ಸೇವಾ ಜಾಲಗಳ ಸ್ಥಳಾಂತರ ಕಾಮಗಾರಿ ಮುಗಿದಿದೆ. ಹೊಸ ವರ್ಷಕ್ಕೆ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಮಾತ್ರ ಮುಕ್ತಗೊಳಿಸಿ, ಜನವರಿ ಎರಡನೇ ವಾರದಲ್ಲಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Work of Tender sure was taken in Church street for the last one year half of the road was completed now. BBMP officials are confident that the half of the road will be open from December 31.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ