ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್ ಸ್ಟ್ರೀಟ್ ನಲ್ಲಿ ನಡೆಯಿರಿ ಇಂಪಾದ ಸಂಗೀತ ಕೇಳಿರಿ

|
Google Oneindia Kannada News

ಬೆಂಗಳೂರು, ಮಾರ್ಚ್ 1: ನಗರದ ವಾಣಿಜ್ಯ ಚಟುವಟಿಕೆಗಳ ಪ್ರದೇಶಗಳಲ್ಲಿ ಒಂದಾಗಿರುವ ಚರ್ಚ್ ಸ್ಟ್ರೀಟ್ ರಸ್ತೆಗಳು ಇದೀಗ ಸಾರ್ವಜನಿಕರಿಗೆ ಮುಕ್ತವಾಗಿದೆ. ಅಲ್ಲಿನ ರಸ್ತೆಗಳು ಹೊಸ ಲುಕ್ ನಿಂದ ಕಂಗೊಳಿಸುತ್ತಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ರಸ್ತೆಗೆ ಅಳವಡಿಸಿರುವ ಗ್ರಾನೈಟ್ ಕಾಬಲ್ ಸ್ಟೋನ್ ಗಳ ಅಳವಡಿಕೆ , ಅದರಿಂದ ಮೂಡಿಬಂದಿರುವ ಚಿತ್ತಾರಗಳು, ವಿಶಾಲವಾದ ಪಾದಚಾರಿ ಮಾರ್ಗಗಳು ಮತ್ತು ಸಂಗೀತದ ನಿನಾದ ಎಲ್ಲರನ್ನು ಮನಸೂರೆಗೊಳಿಸುತ್ತಿದೆ.

ಬ್ರಿಗೇಡ್ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆವರೆಗಿನ 715 ಮೀಟರ್ ಉದ್ದದ ರಸ್ತೆಯನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ವಿಶಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಗ್ರಾನೈಟ್ ಕಾಬಲ್ ಸ್ಟೋನ್ ಬಳಸಿ ರಸ್ತೆ ನಿರ್ಮಿಸಿರುವುದು ಇಲ್ಲಿ ಮಾತ್ರ. ಹೀಗಾಗಿ,ಐಷಾರಾಮಿ ಮಳೀಗೆಗಳು, ಬಾರ್ ಅಂಡ್ ರೆಸ್ಟೋರೆಂಟ್ ಗಳು, ಹೋಟೆಲ್ ಗಳು, ಪಬ್ ಗಳನ್ನು ಒಳಗೊಂಡಿರುವ ಚರ್ಚ್ ಸ್ಟ್ರೀಟ್ ರಸ್ತೆಯು ವಿಶೇಷ ಮೆರುಗು ಪಡೆದುಕೊಂಡಿದೆ.

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

ಈ ಮೊದಲು ಎಂಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ಅಡ್ಡಾಡಲು ಮುಗಿಬೀಳುತ್ತಿದ್ದ ಜನರನ್ನು ಚರ್ಚ್ ಸ್ಟ್ರೀಟ್ ತನ್ನತ್ತ ಸೆಳೆದುಕೊಳ್ಳಲಿದೆ. ರಸ್ತೆಯ ಇಕ್ಕೆಲಗಳಲ್ಲಿ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿನ ಓಡಾಟವು ಖುಷಿ ಕೊಡುತ್ತಿದೆ. ಫುಟ್ ಪಾತ್ ಗಳಲ್ಲಿ ಅನಧಿಕೃತ ವಾಹನ ಸಂಚಾರ ನಿರ್ಭಂಧಿಸುವ ಸಲುವಾಗಿ ಅಲ್ಲಲ್ಲಿ ಕಬ್ಬಿಣದ ಕಂಬಗಳನ್ನು ನೆಡಲಾಗಿದೆ.

Church street new attraction of Bengaluru

ಕಾರು ದ್ವಿಚಕ್ರ ವಾಹನ ಮತ್ತು ಸೈಕಲ್ ನಿಲುಗಡೆಗೆ ಪ್ರತ್ಯೇಕ ಬೇ ಗಳನ್ನು ನಿರ್ಮಿಸಲಾಗಿದೆ. 103 ದ್ವಿಚಕ್ರ ವಾಹನ, 16 ಕಾಡು ಹಾಗೂ 20 ಸೈಕಲ್ ಗಳ ನಿಲುಗಡೆ ಗೆ ಅನುವುಮಾಡಿಕೊಡಲಾಗಿದೆ. ಸೈಕಲ್ ಗಳಿಗೆ ಬೀಗ ಹಾಕಿ ನಿಲ್ಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಎಂಪೈರ್ ಹೋಟೆಲ್ ಐ ಲ್ಯಾಂಡ್ ನಿರ್ಮಿಸಿದ್ದು, ಗಮನ ಸೆಳೆಯುತ್ತಿದೆ. ರಸ್ತೆಯಲ್ಲಿ ಓಡಾಡುವವರ ಮನರಂಜನೆಗಾಗಿ ವಿದ್ಯುದ್ದೀಪದ ಕಂಬಗಳಲ್ಲಿ ಸ್ಪೀಕರ್ ಅಳವಡಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಸಂಗೀತದ ಇಂಪು ಕೇಳಿಬರಲಿದೆ.

ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ : ಬಿಬಿಎಂಪಿಗೆ 3ನೇ ಗಡುವು!ಚರ್ಚ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ : ಬಿಬಿಎಂಪಿಗೆ 3ನೇ ಗಡುವು!

ಚರ್ಚ್ ಸ್ಟ್ರೀಟ್ ರಸ್ತೆಯ ಅಂದ ಹೆಚ್ಚಿಸಲಿವೆ ಗ್ರಾನೈಟ್!ಚರ್ಚ್ ಸ್ಟ್ರೀಟ್ ರಸ್ತೆಯ ಅಂದ ಹೆಚ್ಚಿಸಲಿವೆ ಗ್ರಾನೈಟ್!

English summary
Reopened church street road has become new attraction of central Bengaluru adter tender sure model development has been done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X