ಬೆಂಗಳೂರು ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟಕ್ಕೆ ಒಂದು ವರ್ಷ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26 : ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟಗೊಂಡು ಒಂದು ವರ್ಷ ಕಳೆದಿದೆ. ಒಬ್ಬರು ಅಮಾಯಕ ಮಹಿಳೆ ಬಾಂಬ್ ಸ್ಫೋಟದಿಂದ ಮೃತಪಟ್ಟಿದ್ದರು. ಬೆಂಗಳೂರು ಪೊಲೀಸರು ನಂತರ, ಎನ್‌ಐಎ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ಇದುವರೆಗೂ ಸ್ಫೋಟ ನಡೆಸಿದವರು ಯಾರು? ಎಂಬ ಮಾಹಿತಿ ಲಭ್ಯವಾಗಿಲ್ಲ.

2014ರ ಡಿಸೆಂಬರ್ 28ರಂದು ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆ ಗುಂಗಿನಲ್ಲಿದ್ದ ಉದ್ಯಾನಗರಿಯ ಜನರು ಬಾಂಬ್ ಸ್ಫೋಟದ ಸುದ್ದಿ ಕೇಳಿ ಆತಂಕಗೊಂಡಿದ್ದರು. ಬೆಂಗಳೂರು ಪೊಲೀಸರು ಮೊದಲು ಬಾಂಬ್ ಸ್ಫೋಟದ ತನಿಖೆ ಆರಂಭಿಸಿದರು. ಕೆಲವು ದಿನಗಳ ನಂತರ ರಾಷ್ಟ್ರೀಯ ತನಿಖಾದಳ (ಎನ್‌ಐಎ) ಸ್ಫೋಟದ ತನಿಖೆಯನ್ನು ಆರಂಭಿಸಿತು.[ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟ ತನಿಖೆಗೆ ಎಳ್ಳು-ನೀರು!]

church street

25 ತಂಡಗಳಿಂದ ತನಿಖೆ : ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟ ನಡೆಸಿದವರು ಯಾರು? ಎಂಬ ಬಗ್ಗೆ ಒಂದು ಚಿಕ್ಕ ಸುಳಿವು ಕೂಡಾ ಇದುವರೆಗೂ ಪತ್ತೆಯಾಗಿಲ್ಲ. ಎನ್‌ಐಎ ಇದುವರೆಗೂ ಸುಮಾರು 3000 ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. 2 ಕೋಟಿಗೂ ಅಧಿಕ ಪೋನ್‌ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದೆ. [ಬೆಂಗಳೂರು ಸ್ಫೋಟ : ತನಿಖೆ ಆರಂಭಿಸಿದ NIA]

ಮೊದಲು ಸ್ಫೋಟದ ತನಿಖೆ ಆರಂಭಿಸಿದ ಬೆಂಗಳೂರು ಪೊಲೀಸರು 25 ತಂಡಗಳನ್ನು ರಚನೆ ಮಾಡಿದ್ದರು. ಈ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೂ ಭೇಟಿ ನೀಡಿ ಸ್ಫೋಟದ ಕುರಿತು ಮಾಹಿತಿ ಸಂಗ್ರಹಿಸಲು ಪ್ರಯತ್ನ ನಡೆಸಿದರು. ಆದರೆ, ಖಾಲಿ ಕೈಯಲ್ಲಿ ಮರಳಿದರು. [ಭಟ್ಕಳದ ಶಂಕಿತರಿಂದ ಬಯಲಾಗುತ್ತಾ ಉಗ್ರರ ಜಾಲ?]

ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ ಈ ಬಾಂಬ್ ಸ್ಫೋಟದ ಹಿಂದೆ ಸಿಮಿ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಶಂಕಿಸಿದೆ. ಪಾಟ್ನಾದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿದ ಇಬ್ಬರ ಉಗ್ರರ ವಿಚಾರಣೆಯನ್ನು ಎನ್‌ಐಎ ನಡೆಸಿದೆ. ಪಾಟ್ನಾ ಮತ್ತು ಬೆಂಗಳೂರು ಸ್ಫೋಟದ ನಡುವೆ ಸಾಮ್ಯತೆ ಇದೆ ಎಂದು ಎನ್‌ಐಎ ಹೇಳುತ್ತಿದೆ.

ಬೆಂಗಳೂರು ಪೊಲೀಸರು ಭಟ್ಕಳದಲ್ಲಿ ಕೆಲವು ಯುವಕರನ್ನು ಬಂಧಿಸಿ ಸ್ಫೋಟದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದರು. ಆದರೆ, ಯುವಕರಿಗೂ ಸ್ಫೋಟಕ್ಕೂ ಸಂಬಂಧವಿಲ್ಲ ಎಂಬುದು ಕೊನೆಗೆ ತಿಳಿದುಬಂದಿತು. ಎನ್‌ಐಎ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಸಮೀಪದಲ್ಲಿಯೇ ಅದನ್ನು ಜೋಡಿಸಲಾಗಿತ್ತು ಎಂಬ ಮಾಹಿತಿ ಸಂಗ್ರಹಣೆ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is almost an year since a blast took place at Church Street in Bengaluru which claimed the life of an innocent mother. On December 28th 2014 at around 8.33 PM, a bomb went off at Church Street which claimed one life. National Investigating Agency which till date is clueless about who carried out this attack and why.
Please Wait while comments are loading...