ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಹಾರ್ : ವಿಶಿಷ್ಟ ಅರ್ಥಪೂರ್ಣ ಸಂಗೀತ ಸಂಜೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 09: "ಚಿತ್ರಹಾರ್",ಇದು 1960, 70, 80 ಮತ್ತು 90ರ ಹಿಂದಿ ಚಲನ ಚಿತ್ರಗೀತೆಗಳ ಸುಂದರ ಸಂಗೀತ ಸಂಜೆ. ಈ ಸಂಗೀತ ಸಂಜೆಯನ್ನು ರಾಮಚಂದ್ರ ಗ್ರಾಮೀಣ ವಿದ್ಯಾ ವಿಕಾಸ ಕೇಂದ್ರ ಟ್ರಸ್ಟ್ ರವರ ಸಹಾಯಾರ್ಥವಾಗಿ ಏರ್ಪಡಿಸಲಾಗಿದೆ.

ಈ ಸಂಗೀತ ಸಂಜೆಯಲ್ಲಿ ಹಿಂದಿ ಚಲನಚಿತ್ರದ ಸುಪ್ರಸಿದ್ಧ ಗಾಯಕರ ಪ್ರಖ್ಯಾತ ಹಾಗೂ ಅವಿಸ್ಮರಣೀಯ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.
'ಮುಜ್ರಾ' ದಿಂದ ಹಿಡಿದು ವೇಗದ ಗತಿಯ ಗೀತೆಗಳು ಸೇರಿದಂತೆ ಹಲವು ವಿಧದ ಚಿರಸ್ಮರಣೀಯ ಸುಪ್ರಸಿದ್ಧ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.

ಕಾರ್ಯಕ್ರಮ : ಚಿತ್ರ ಹಾರ್
ದಿನಾಂಕ : 11/06/2016
ಸ್ಥಳ: ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
ಸಮಯ: ಸಂಜೆ 6 ಗಂಟೆ ನಂತರ
ಹೆಚ್ಚಿನ ಮಾಹಿತಿಗೆ ಭೇಟಿ ಕೋಡಿ: talkofthetown.in / Call : 80959 04455

ಈ ಕಾರ್ಯಕ್ರಮದ ರೂವಾರಿ ಹಾಗೂ ಮುಖ್ಯ ಗಾಯಕಿಯಾದ ಸಮನ್ವಿತ ಶರ್ಮ ರವರು ಬೆಂಗಳೂರಿನ ಸಾಂಸ್ಕ್ರತಿಕ ವಲಯದಲ್ಲಿ ಒಬ್ಬ ಪ್ರತಿಷ್ಠಿತ, ಸುಪ್ರಸಿದ್ಧ ಹಾಗೂ ಹೆಸರಾಂತ ಗಾಯಕಿ. ಇವರು ಕನ್ನಡ ಚಲನಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿದ್ದು ಇತ್ತೀಚಿನ ಚಿತ್ರ "ಜೆಸ್ಸಿ" ಯಲ್ಲಿನ 'ಮಳೆ ಬಂತು' ಈ ಸುಪ್ರಸಿದ್ಧ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.

Chitrahaar Bollywood musical evening in Bengaluru

ಹಲವಾರು ಕಲೆಗಳಲ್ಲಿ ಪರಿಣತಿ ಹೊಂದಿರುವ ಇವರು ಗಾಯಕಿಯಾಗಿ, ನಿರೂಪಕಿಯಾಗಿ, ಶಾಸ್ತ್ರೀಯ ನೃತ್ಯಗಾರ್ತಿಯಾಗಿ, ಸಂಗೀತ ಸಂಯೋಜಕಿಯಾಗಿ ಹಾಗೂ ಒಬ್ಬ ಕಲಾ ಉದ್ಯಮಿಯಾಗಿ ಲೋಕಪ್ರಿಯರಾಗಿರುವರು.

ಈ ಉತ್ಸಾಹಪೂರ್ಣ ಸಂಗೀತ ಸಂಜೆಯಲ್ಲಿ ಪಾಲ್ಗೊಳ್ಳುವ ಇತರ ಗಾಯಕ ಗಾಯಕಿಯರು - ಹ್ಯಾರಿಸ್ ಕಾರೊತ್, ಸುಬ್ರತ್ ಸಾಹೂ, ಅನಿಕೇತ್ ಪ್ರಭು, ಗೋವಿಂದ್ ಕರ್ನೂಲ್ ಹಾಗೂ ರೋಹಿಣಿ ಪ್ರಭುನಂದನ್.

ಬಾಲಿವುಡ್ ನಗರಿಯಾದ ಮುಂಬೈನ ಹೆಸರಾಂತ ಕೀಬೋರ್ಡ್ ವಾದಕರಾದ ಪ್ರದೀಪ್ ಪಟ್ಕರ್ ರವರ ತಂಡದವರ ಪೂರ್ಣ ಪ್ರಮಾಣದ ವಾದ್ಯವ್ರಂದ ಹೊಂದಿರುತ್ತದೆ.

ಸಮರ್ಥವಾದ ಸಂಗೀತ ಹಾಗೂ ಕಲಾವಿದರ ಮಿಶ್ರಣವನ್ನು ಹೊಂದಿರುವ ಈ ಕಾರ್ಯಕ್ರಮವು ಬೆಂಗಳೂರಿನ ಬಾಲಿವುಡ್ ಸಂಗೀತಪ್ರೇಮಿಗಳಿಗೆ ಒಂದು ಸಂಗೀತ ರಸದೌತಣ ನೀಡುವುದರಲ್ಲಿ ಸಂದೇಹವಿಲ್ಲ.

English summary
“Chitrahaar” is a Bollywood musical evening showcasing blockbuster hit songs of 60s, 70s, 80s and 90s. This evening is in aid of Sri Ramachandra Grameena Vidya Vikasa Trust, which provides free education to children from below poverty line and under-privileged backgrounds. The event is on 11/06/2016 at Chowdaiah memorial hall, Bengalruu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X