ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೃತ ಪೌರಕಾರ್ಮಿಕ ಸುಬ್ರಮಣಿ ಸಾವಿನ ಹಿಂದಿದೆ ಮನಕಲಕುವ ಕತೆ

By Nayana
|
Google Oneindia Kannada News

ಬೆಂಗಳೂರು, ಜು.17: ಸತತ ಆರು ತಿಂಗಳ ಕಾಲ ಸಂಬಳ ಇಲ್ಲದೆ ಆತ್ಮಹತ್ಯೆಗೆ ಶರಣಾದ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕ ಸುಬ್ರಮಣಿ ಆರ್ಥಿಕ ಸ್ಥಿತಿಯಲ್ಲಿ ಸಿಲುಕಿದ್ದರಿಂದ ಆತನ ಮಕ್ಕಳನ್ನು ಶಾಲೆಯಿಂದ ಹೊರಹಾಕಿದ್ದರು ಎನ್ನುವ ಹೃದಯ ವಿದ್ರಾವಕ ವಿಚಾರ ಬೆಳಕಿಗೆ ಬಂದಿದೆ.

ಮೃತ ಸುಬ್ರಮಣಿ ಪತ್ನಿ ಕವಿತಾ ಈ ವಿಷಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ತಮ್ಮ ಮಕ್ಕಳಾಸ ದರ್ಶನ್‌ ಹಾಗೂ ಪವಿತ್ರ ಜೂನ್ ತಿಂಗಳಲ್ಲೇ ಶಾಲೆಗೆ ಸೇರಿಸಿದ್ದರೂ ಶುಲ್ಕ ಭರಸಿದ ಕಾರಣದಿಂದ ಶಾಲೆಯಿಂದ ಹೊರಹಾಕಿದ್ದರು ಹೀಗಾಗಿ ಪತಿ ಸುಬ್ರಮಣಿ ಮಕ್ಕಳ ಸ್ಥಿತಿಯನ್ನು ನೋಡಿ ಆಗಾಗ ಕಣ್ಣೀರಿಡುತ್ತಿದ್ದರು ಎಂದು ಕವಿತಾ ಹೇಳಿಕೊಂಡಿದ್ದಾರೆ.

ಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶಸಂಬಳವಿಲ್ಲದೆ ಸಾಯುತ್ತಿರುವ ಪೌರಕಾರ್ಮಿಕರು:ಸರ್ಕಾರದ ವಿರುದ್ಧ ಆಕ್ರೋಶ

ಪತ್ನಿ ಕವಿತಾ, ಸಹೋದರಿಯರು ಮಕ್ಕಳನ್ನು ಸಲಹುತ್ತಿದ್ದ ಪೌರಕಾಮಿಕ ಸುಬ್ಮಣಿ ಸಂಬಳವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದರು. ಬೆಂಗಳೂರಿನ ಮಲ್ಲೇಶ್ವರದ ಮುನೇಶ್ವರ ಬ್ಲಾಕ್‌ನಲ್ಲೀಗ ನೀರವ ಮೌನ, ಕಿರಿ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಪತ್ನಿ ಸಹೋದರನನ್ನೇ ಆಶ್ರಯಿಸಿದ್ದ ಇಬ್ಬರು ಸಹೋದರಿಯರು, ಇನ್ನೂ ಶಾಲೆಗೆ ಹೋಗುತ್ತಿರುವ ಹೋಗುತ್ತಿರುವ ಮಕ್ಕಳು.

Children of diceased Poura Karmika Subramanya are out of school

ಆ ಮನೆಯ ಒಡೆಯ ಅತ್ಮಹತ್ಯೆಗೆ ಶರಣಾಗಿದ್ದಾನೆ ಕಾರಣ, ಬೆಂಗಳೂರು ಮಹಾನಗರ ಪಾಲಿಕೆ ಸತತ ಏಳು ತಿಂಗಳ ಕಾಲ ಸಂಬಳ ಕೊಡದೆ ಸತಾಯಿಸಿರುವುದು, ಪೌರಕಾಮಿಕ ಸುಬ್ರಮಣಿ ಏಳು ತಿಂಗಳ ಕಾಲ ಸಂಬಳವಿಲ್ಲದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜುಲೈ 8 ರಂದು ಆತ್ಮಹತ್ಯೆ ಮಾಡಿಕೊಂಡ ಸುಬ್ರಮಣಿ ಕುಟುಂಬಕ್ಕೆ ಡಿಸಿಎಂ ಪರಮೇಶ್ವರ್‌ ಭೇಟಿ ನೀಡಿದ್ದರು, ಉಪಮುಖ್ಯಮಂತ್ರಿಯೇ ತಮ್ಮ ಮನೆಗೆ ಬಂದರೆಂಬ ನೆಮ್ಮದಿ ಒಂದೆಡೆಯಾದರೆ ಹೋದ ವ್ಯಕ್ತಿ ಮತ್ತೆಂದು ಬರಲಾರ ಎಂಬ ಬೇಸರ ಇನ್ನೊಂದೆಡೆ, ಸುಬ್ರಮಣಿ ಪತ್ನಿ ಕವಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಕಳೆದ ಆರು ತಿಂಗಳಿನಿಂದ ಸಂಬಳವಿಲ್ಲದೆ ಇಬ್ಬರು ಮಕ್ಕಳು ಕೂಡ ಶಾಲೆಗೆ ಶುಲ್ಕ ನೀಡದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಹಾಕಿದ ಕಾರಣಕ್ಕಾಗಿ ಸುಬ್ರಮಣಿ ಮನನೊಂದಿದ್ದ ಎನ್ನಲಾಗಿದೆ. ಸುಬ್ರಮಣಿ ಪತ್ನಿ ಕವಿತಾ, ಸಹೋದರಿಯರಾದ ವಿಜಯ ಹಾಗೂ ಲತಾ, ಏಳು ವರ್ಷದ ಮಗ ದರ್ಶನ್‌ ಮತ್ತು ಹತ್ತು ವರ್ಷದ ಮಗಳು ಪವಿತ್ರಾ ಅವರರೊಂದಿಗೆ ಮುನೇಶ್ವರ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದರು.

ಕಳೆದ ಆರು ತಿಂಗಳಿನಿಂದ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದ ತೀವ್ರ ತತ್ತರಿಸಿದ್ದ ಅವರು ಪತ್ನಿ ಜತೆ ಆಗಾಗ ತನ್ನ ನೋವುಗಳನ್ನು ಹಂಚಿಕೊಳ್ಳುತ್ತಿದ್ದರು. ಈ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಬ್ಬರನ್ನು ಶಾಲೆಗೆ ಸೇರಿಸಿದ್ದರಾದರೂ ಶುಲ್ಕ ತುಂಬದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗಿತ್ತು ಎನ್ನುವ ಘಟನೆ ತಿಳಿದುಬಂದಿದೆ.

ಪೌರಕಾರ್ಮಿಕರು, ಕೂಲಿ ಕಾರ್ಮಿಕರು, ಬಡವರ ಕಷ್ಟಗಳಿಗೆ ಬೆಲೆಯೇ ಇಲ್ಲವೇ ಎನ್ನುವುದು ನಮ್ಮ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಯಾಗಿದೆ, ಸತ್ತ ಮೇಲೆ ಲಕ್ಷ ಕೊಟ್ಟರೇನು ಬದುಕಿದ್ದಾಗಲೇ ಅವರಿಗೆ ಅವರ ಸಂಬಳ ದೊರೆತಿದ್ದರೆ ಈ ಸ್ಥಿತಿಯೇ ಬರುತ್ತಿರಲಿಲ್ಲ. ಇಷ್ಟಾದರೂ ಕೂಡ ಬಿಬಿಎಂಪಿ ಕೇವಲ 15 ಸಾವಿರ ಮಂದಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ, ಇನ್ನೆಷ್ಟು ಪೌರಕಾರ್ಮಿಕರ ಬಲಿಗೆ ಬಿಬಿಎಂಪಿ ಕಾಯುತ್ತಿದೆ ಎನ್ನುವುದು ಪೌರಕಾರ್ಮಿಕರ ಆಕ್ರೋಶದ ಮಾತಾಗಿದೆ.

English summary
Children of Poura Karmika Subramanya, who committed suicide recently were thrown out from school since they were unable to pay the fees of current academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X