ಕಲ್ಲಪ್ಪ ಪ್ರಾಮಾಣಿಕ, ಅವರ ತೇಜೋವಧೆ ಮಾಡಬೇಡಿ : ಪ್ರತಾಪ್ ಸಿಂಹ

Posted By:
Subscribe to Oneindia Kannada

ಬೆಂಗಳೂರು, ಜುಲೈ 05: ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ಕಲ್ಲಪ್ಪ ಹಂಡಿಭಾಗ ಪರವಾಗಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಮಂಗಳವಾರ ಬರೆದಿದ್ದಾರೆ. ಕಲ್ಲಪ್ಪ ಅವರು ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿದ್ದು, ಕುರುಬ ಜನಾಂಗಕ್ಕೆ ಸೇರಿದವರಾಗಿದ್ದರು. [ಕಲ್ಲಪ್ಪ ಪ್ರಕರಣದಲ್ಲಿ ಕಿಡ್ನಾಪ್ ಆಗಿದ್ದ ತೇಜಸ್ ಹೇಳಿದ್ದೇನು?]

Pratap Simha

ಆದರೆ, ಎಂದಿಗೂ ಜಾತಿಬಲವನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಮಾಧ್ಯಮಗಳು ಸತ್ಯವನ್ನು ಹೊರ ತೆಗೆಯಬೇಕು. ಸತ್ಯ ತಿಳಿಯದೆ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ. [ಕಲ್ಲಪ್ಪ ಸಾವಿಗೆ ಕಿರುಕುಳ ಕಾರಣವಲ್ಲ: ಎಸ್ಪಿ ಸಂತೋಷ್]

ಸತ್ಯ ತಿಳಿಯದೇ ಕಲ್ಲಪ್ಪನವರ ಚಾರಿತ್ರ್ಯವನ್ನು ಹರಣ ಮಾಡಬೇಡಿ ಎಂದು ಕೂಡಾ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕರೊಬ್ಬರು, ನೀವು ಕಲ್ಲಪ್ಪ ಬಗ್ಗೆ ಹೇಗೆ ಮಾತನಾಡುತ್ತೀರಿ, ನಿಮಗೆ ಗೊತ್ತೆ ಎಂದು ಪ್ರಶ್ನಿಸಿದ್ದಾರೆ.[ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]


ಇದಕ್ಕೆ ಉತ್ತರಿಸಿರುವ ಪ್ರತಾಪ್ ಸಿಂಹ, ನನ್ನ ಸ್ನೇಹಿತರೊಬ್ಬರಿಗೆ ಕಲ್ಲಪ್ಪ ಬಗ್ಗೆ ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲದೇ ಕಿಡ್ನಾಪ್ ಆದ ತೇಜಸ್ ತೌಡ ಕೂಡಾ ನನ್ನ ಸ್ನೇಹಿತೆ ಶ್ರುತಿ ಎಂಬುವರ ಸಹೋದರ ಎಂದು ಪ್ರತಿಕ್ರಿಯಿಸಿದ್ದಾರೆ. ಐನೂರಕ್ಕೂ ಹೆಚ್ಚು ಬಾರಿ ಹಂಚಿಕೆಯಾಗಿರುವ ಈ ಫೇಸ್ ಬುಕ್ ಪೋಸ್ಟ್ ಹಾಗೂ ಅದರಲ್ಲಿ ಬಂದಿರುವ ಕಾಮೆಂಟ್ ಗಳನ್ನು ಅಲ್ಲೇ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Chikkamagaluru DySP Kallappa Handibag suicide case: BJP MP Pratap Simha reacted with his Facebook post saying that Kallappa was honest and was from Kuruba community but never misused his caste for posting, Media should unearth truth before defaming any character.
Please Wait while comments are loading...