ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಬೆಂಗಳೂರು ರೌಂಡ್ಸ್‌, ಗುಂಡಿ ಮುಚ್ಚಲು 15 ದಿನದ ಗಡುವು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ಮಳೆಯಿಂದ ಹಾನಿಗೊಳಗಾದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಅವರು ಬಿಬಿಎಂಪಿ ಅಧಿಕಾರಿಗಳಿಗೆ 15 ದಿನದ ಗಡುವು ನೀಡಿದ್ದಾರೆ.

ರಸ್ತೆಯ ದುಸ್ಥಿತಿ ತೆರೆದಿಡುವ ಓದುಗರು ಕಳುಹಿಸಿದ ಚಿತ್ರಗಳುರಸ್ತೆಯ ದುಸ್ಥಿತಿ ತೆರೆದಿಡುವ ಓದುಗರು ಕಳುಹಿಸಿದ ಚಿತ್ರಗಳು

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಿದ್ದರಾಮಯ್ಯ ಜೊತೆಗಿದ್ದಾರೆ.

Chief Minister Siddaramaiah begins Bengaluru rounds

* ಸಿದ್ದರಾಮಯ್ಯ ಅವರು ನಾಯಂಡಹಳ್ಳಿ ಜಂಕ್ಷನ್‌ಗೆ ಭೇಟಿ ನೀಡಿ ಮಳೆ ಬಂದಾಗ ರಸ್ತೆ ತುಂಬಾ ನೀರು ತುಂಬಿಕೊಳ್ಳುವ ಸ್ಥಳಗಳನ್ನು ಪರಿಶೀಲಿಸಿದರು. ನಾಯಂಡಹಳ್ಳಿ ಬಳಿಯ ಪಂತರಪಾಳ್ಯದಲ್ಲಿ ರಸ್ತೆ ಗುಂಡಿಯಿಂದ ಆದ ಅಪಘಾತದಲ್ಲಿ ಭಾನುವಾರ ಮಹಿಳೆ ಮೃತಪಟ್ಟಿದ್ದಳು. ಮಹಿಳೆ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ಮೇಯರ್ ಘೋಷಣೆ ಮಾಡಿದ್ದಾರೆ.

ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್ ಹೀಗಿದೆ ನೋಡಿಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್ ಹೀಗಿದೆ ನೋಡಿ

* ಸಿದ್ದರಾಮಯ್ಯ ಅವರು ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲಿನ ಗುಂಡಿಗಳನ್ನು ಪರಿಶೀಲಿಸಿದರು. ಕಳೆದ ವಾರ ಈ ಗುಂಡಿಯಿಂದಾಗಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ದಂಪತಿ ರಸ್ತೆಗೆ ಬಿದ್ದಿದ್ದರು. ಅವರಿಗೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.

English summary
Karnataka Chief Minister Siddaramaiah on October 9, 2017 begins Bengaluru rounds. Siddaramaiah set a 15 days deadline to fill potholes in the city roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X