ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಧನ ಭದ್ರತೆ, ಬಳಕೆಯ ಲೆಕ್ಕಾಚಾರ ಇನ್ನು ಸಲೀಸು

|
Google Oneindia Kannada News

ಬೆಂಗಳೂರು, ಆಗಸ್ಟ್ 9: ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿರುವ 'ಕರ್ನಾಟಕ ಸ್ಟೇಟ್ ಎನರ್ಜಿ ಕ್ಯಾಲ್ಕ್ಯುಲೇಟರ್-2050' ವೆಬ್ ಟೂಲ್ ಅನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಬಿಡುಗಡೆ ಮಾಡಿದರು.

ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ ರೈತರ ಸಾಲ ಮನ್ನಾ ಯಾರಿಗೆ ಸಿಗುತ್ತೆ, ಯಾರಿಗೆ ಸಿಗಲ್ಲ? ಇಲ್ಲಿದೆ ವಿವರ

ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್ ಡಾಮಿನಿಕ್ ಆಸ್ಕ್ವಿತ್, ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು.

Chief minister hd kumaraswamy lauched energy calculator

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಕ್ವಿತ್, ಆಂಧ್ರಪ್ರದೇಶ, ಗುಜರಾತ್ ಹಾಗೂ ಅಸ್ಸಾಂ ನಂತರ ಎನರ್ಜಿ ಕ್ಯಾಲ್ಕ್ಯುಲೇಟರ್ ರೂಪಿಸಿದ ನಾಲ್ಕನೇ ರಾಜ್ಯ ಕರ್ನಾಟಕ. ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿಯೂ ಇದು ಸಿದ್ಧವಾಗುತ್ತಿದೆ. ಇದರಿಂದ ಇಂಧನ ಭದ್ರತೆ, ಇಂಧನ ಬಳಕೆ ಕುರಿತ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂದು ವಿವರಿಸಿದರು.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಇಂಧನ ಬಳಕೆ, ಇಂಗಾಲದ ಹೆಜ್ಜೆ ಗುರುತು ಲೆಕ್ಕಹಾಕಲು ಅನುಕೂಲವಾಗಲಿದೆ. ಇದನ್ನು ರಾಜ್ಯದ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿದೆ ಎಂದು ತಿಳಿಸಿದರು.

ಜೊತೆಗೆ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ ಎಂದು ಅಭಿನಂದಿಸಿದರು.

ಪಾವಗಡದಲ್ಲಿ ಸ್ಥಾಪಿಸಲಾಗಿರುವ ಸೋಲಾರ್ ಪಾರ್ಕ್‌ನಲ್ಲಿ ಯುಕೆ ಸಹಭಾಗಿತ್ವವನ್ನು ಸ್ಮರಿಸಿಕೊಂಡ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಇನ್ನಷ್ಟು ಯೋಜನೆಗಳಿಗೆ ಕೈಜೋಡಿಸುವುದಾಗಿ ತಿಳಿಸಿದರು.

ನೀತಿ ಆಯೋಗವು 2015 ರಲ್ಲಿ ಯುಕೆ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಇಂಡಿಯಾ ಎನರ್ಜಿ ಸೆಕ್ಯುರಿಟಿ ಸಿನಾರಿಯೋ-2047 ವೆಬ್ ಟೂಲ್‍ನ ಮಾದರಿಯಲ್ಲಿ ರಾಜ್ಯಮಟ್ಟದಲ್ಲಿ ಎನರ್ಜಿ ಕ್ಯಾಲ್ಕ್ಯುಲೇಟರ್ ರೂಪಿಸಲಾಗಿದೆ.

ಬ್ರಿಟಿಷ್ ಕೌನ್ಸಿಲ್‌ನ 70ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಯು.ಕೆ.ಯಲ್ಲಿ ಒಂದು ವರ್ಷದ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಶಾಸ್ತ್ರ) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ನ ವಿದ್ಯಾರ್ಥಿ ವೇತನ ನೀಡುವ ಯೋಜನೆಯಡಿ ಆಯ್ಕೆಯಾದ 100 ಅಭ್ಯರ್ಥಿಗಳಲ್ಲಿ 15 ಯುವತಿಯರು ಕರ್ನಾಟಕದವರು. ಈ ಯುವತಿಯರನ್ನು ಮುಖ್ಯಮಂತ್ರಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಡಾಮಿನಿಕ್ ಮ್ಯಾಕ್‍ಅಲಿಸ್ಟರ್, ಬ್ರಿಟಿಷ್ ಕೌನ್ಸಿಲ್‌ ಅಧಿಕಾರಿಗಳು, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತಿತರರು ಹಾಜರಿದ್ದರು.

English summary
Chief Minister HD Kumaraswamy launched the State Energy Calculator which helps to energy security and usage with the collaboration of UK government on August 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X