ಚಿಕ್ಕಪೇಟೆ ಅಗ್ನಿ ದುರಂತಕ್ಕೆ ತಿರುವು, ಮಾಲೀಕನ ಬಂಧನ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 17 : ಚಿಕ್ಕಪೇಟೆ ಮಾಯಾ ಎಲೆಕ್ಟ್ರಿಕ್‌ ಶಾಪ್‌ಗೆ ಬೆಂಕಿ ಬಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಶುಕ್ರವಾರ ಗೋಡಾನ್‌ಗೆ ಬೆಂಕಿ ಬಿದ್ದು, ಒಬ್ಬರು ಸಜೀವವಾಗಿ ದಹನವಾಗಿದ್ದರು ಮತ್ತು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು.

ವಿಮೆ ಹಣದ ಆಸೆಗಾಗಿ ಮಾಯಾ ಎಲೆಕ್ಟ್ರಿಕ್‌ ಶಾಪ್‌ ಮಾಲೀಕ ನರೇಂದ್ರ ಲಾಲ್ ಚೌಧರಿ ಸ್ನೇಹಿತರ ಜೊತೆ ಸೇರಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕ್ಕಪೇಟೆ ಪೊಲೀಸರು ಶನಿವಾರ ನರೇಂದ್ರ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.[ಚಿಕ್ಕಪೇಟೆ : ಎಲೆಕ್ಟ್ರಿಕಲ್ ಗೆ ಬೆಂಕಿ]

Chickpet

ಅಗ್ನಿ ದುರಂತದಲ್ಲಿ ಸಾವನ್ನಪ್ಪಿದವರನ್ನು ಮಂಡ್ಯ ಮೂಲಕ ಗಜೇಂದ್ರ (27) ಎಂದು ಗುರುತಿಸಲಾಗಿದೆ. ನರೇಂದ್ರ ಲಾಲ್ ಚೌಧರಿ ಗಜೇಂದ್ರ ಮತ್ತು ಅರುಣ್ ಕುಮಾರ್ ಸೇರಿ, ವಿಮೆ ಹಣದ ಆಸೆಗಾಗಿ ಅಂಗಡಿಗೆ ಬೆಂಕಿ ಹಚ್ಚುವ ಸಂಚು ರೂಪಿಸಿದ್ದರು. ಅದರಂತೆ ಅಂಗಡಿಗೆ ಬೆಂಕಿ ಇಟ್ಟ ಬಳಿಕ ಗಜೇಂದ್ರ ಅವರು ಹೊರಬರಲಾರದೆ ಅಲ್ಲೇ ಸಜೀವವಾಗಿ ದಹನವಾಗಿದ್ದರು.

ಈ ಅಗ್ನಿ ದುರಂತದಲ್ಲಿ ಗಜೇಂದ್ರ ಜೊತೆ ಬಂದಿದ್ದ ಅರುಣ್ ಕುಮಾರ್ ಅವರು ಗಾಯಗೊಂಡಿದ್ದಾರೆ. ಕಟ್ಟಡದ ಗೋಡಾನ್‌ನಲ್ಲಿ ಶಾರ್ಟ್ ಸರ್ಕಿಟ್ ಆಗುವಂತೆ ಮಾಡಿ ಬೆಂಕಿ ಹೊತ್ತಿಸಲಾಗಿತ್ತು. ಶನಿವಾರ ಎಲೆಕ್ಟ್ರಿಕಲ್ ಮಾಲೀಕರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru Chickpet police arrested maya electricals owner Rajendra in connection with the fire accident at electricals on September 16, 2016. Man was burnt alive in the accident.
Please Wait while comments are loading...