ನಮ್ಮ ಮೆಟ್ರೋ ರೈಲಿನಲ್ಲಿ ಚ್ಯೂಯಿಂಗ್‌ ಗಮ್ ಅಗಿಯುವಂತಿಲ್ಲ!

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ನಮ್ಮ ಮೆಟ್ರೋ ನಿಲ್ದಾಣದೊಳಗೆ, ರೈಲಿನೊಳಗೆ ಚ್ಯೂಯಿಂಗ್ ಗಮ್, ಗುಟ್ಕಾ ಜಗಿಯುವುದನ್ನು ಬಿಎಂಆರ್‌ಸಿಎಲ್ ನಿಷೇಧಿಸಿದೆ. ಚ್ಯೂಯಿಂಗ್ ಗಮ್ ಅಗಿಯುವಾಗ ಸಿಕ್ಕಬಿದ್ದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ನಮ್ಮ ಮೆಟ್ರೋ ಟೋಕನ್ ಕಳೆದುಕೊಂಡರೆ 500 ರೂ. ದಂಡ

ನಮ್ಮ ಮೆಟ್ರೋ ಬೋಗಿ ಸ್ವಚ್ಛ ಮಾಡುವ ಕಾರ್ಮಿಕರು ಸೀಟಿನ ಕೆಳೆಗೆ ಕೆಲವು ಪ್ರಯಾಣಿಕರು ಚ್ಯೂಯಿಂಗ್ ಗಮ್ ಅಂಟಿಸಿದ್ದನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Chewing gums banned on Namma Metro trains

ಆದ್ದರಿಂದ, ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ರೈಲಿನೊಳಗೆ, ನಿಲ್ದಾಣದಲ್ಲಿ ಚ್ಯೂಯಿಂಗ್‌ ಗಮ್ ಅಗಿಯುವುದನ್ನು ನಿಷೇಧಿಸಿದೆ. ಗುಟ್ಕಾ, ಪಾನ್ ಮಸಾಲಾವನ್ನು ಅಗಿಯಬಾರದು ಎಂದು ಸೂಚನೆ ನೀಡಿದೆ.

ನಮ್ಮ ಮೆಟ್ರೋದಲ್ಲಿ ವಿಕಲಚೇತನಿರಿಗೂ ಪ್ರತ್ಯೇಕ ಬೋಗಿ ಸಾಧ್ಯತೆ

ಒಂದು ವೇಳೆ ಪ್ರಯಾಣಿಕರು ಚ್ಯೂಯಿಂಗ್ ಗಮ್, ಗುಟ್ಕಾ ಅಗಿಯುವಾಗ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಎಚ್ಚರಿಕೆ ನೀಡಿದೆ.

ಬಿಎಂಟಿಸಿ ಬಸ್ಸಲ್ಲೂ ಜಾರಿಗೆ ತನ್ನಿ : ಬಿಎಂಟಿಸಿ ಬಸ್ಸುಗಳಲ್ಲಿನ ಸೀಟುಗಳ ಅಡಿ, ಸೀಟಿನ ಮೇಲೆ ಚ್ಯೂಯಿಂಗ್ ಗಮ್ ಅಂಟಿಸಲಾಗಿರುತ್ತದೆ. ಈ ನಿಷೇಧವನ್ನು ಬಸ್ಸುಗಳಲ್ಲಿಯೂ ಜಾರಿಗೆ ತನ್ನಿ ಎಂದು ನಿತ್ಯ ಸಂಚಾರ ನಡೆಸುವ ಪ್ರಯಾಣಿಕರು ಬೇಡಿಕೆ ಮುಂದಿಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bangalore Metro Rail Corporation Limited (BMRCL) banned chewing gum on the Namma metro trains and stations. The Metro also prohibits paan and gutka on its premises.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ