ನೈಸ್ ರಸ್ತೆಯಲ್ಲಿ ಟ್ಯಾಂಕರ್ ಪಲ್ಟಿ, ಟ್ರಾಫಿಕ್ ಜಾಮ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09 : ರಾಸಾಯನಿಕ ಸಾಗಣೆ ಮಾಡುತ್ತಿದ್ದ ಟ್ಯಾಂಕರ್ ನೈಸ್ ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಮೈಸೂರು-ತುಮಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಮ್ಮಘಟ್ಟ ಸಮೀಪ ಥಯೋನಿಲ್ ರಾಸಾಯನಿಕ ಸಾಗಣೆ ಮಾಡುತ್ತಿದ್ದ ಬೃಹತ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಮಂಗಳವಾರ ತಡರಾತ್ರಿ ಟ್ಯಾಂಕರ್ ಉರುಳಿ ಬಿದಿದ್ದರೂ ಅದನ್ನು ಇನ್ನೂ ತೆರವುಗೊಳಿಸಿಲ್ಲ. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

road accident

ಟ್ಯಾಂಕರ್‌ನಿಂದ ರಾಸಾಯನಿಕ ಸೋರಿಕೆಯಾಗುತ್ತಿದ್ದು 200 ಮೀಟರ್ ಸುತ್ತಮುತ್ತಲೂ ದುರ್ವಾಸನೆ ಹಬ್ಬಿದೆ. ಮಧ್ಯಪ್ರದೇಶದ ಕಂಪನಿಯೊಂದಕ್ಕೆ ಸೇರಿದ ರಾಸಾಯನಿಕವಿದಾಗಿದ್ದು, ಅವರು ಸ್ಥಳಕ್ಕೆ ಬಂದ ನಂತರ ಟ್ಯಾಂಕರ್ ತೆರವುಗೊಳಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. [ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]

ಟ್ಯಾಂಕರ್ ಉರುಳಿ ಬಿದ್ದ ಸ್ಥಳಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಅಗ್ನಿಶಾಮಕದಳವ ವಾಹನಗಳನ್ನು ಕಳುಹಿಸಲಾಗಿದೆ. ಈ ಅಪಘಾತದಿಂದಾದಿ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. [ಹೆಂಗಿತ್ತು ಸೋಂಪುರ ಗ್ರಾಮ ಹೇಗಾಯ್ತು ಗೊತ್ತಾ?]

MP 09, HG 1610 ನೋಂದಣಿ ಸಂಖ್ಯೆಯ ಟ್ಯಾಂಕರ್ ಮಧ್ಯಪ್ರದೇಶದಿಂದ ರಾಸಾಯನಿಕ ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಟ್ಯಾಂಕರ್ ಉರುಳಿ ಬಿದ್ದಿರುವುದರಿಂದ ಕೆಂಗೇರಿಯಿಂದ ಮಾಗಡಿ ರಸ್ತೆ ವರೆಗೆ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಾಗಡಿಯಿಂದ ಕೆಂಗೇರಿಗೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chemical loaded with Tylenol overturned at Nandi Infrastructure Corridor Enterprises (NICE) Bengaluru.
Please Wait while comments are loading...