ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮಾನ ತೆಗೆಯುತ್ತಿದೆ ವರ್ತೂರು ಕೆರೆಯ ಈ ವಿಡಿಯೋ

ವರ್ತೂರು ಕೆರೆಯ ನೊರೆ ಮುಖ್ಯಮಂತ್ರಿಯವರನ್ನು ಮುಟ್ಟಲು ಮೇಲೇಳುತ್ತಿದೆ ಎಂದು ವರ್ತೂರು ಕೆರೆಯ ಇಂದಿನ ಸ್ಥಿತಿ ಕಂಡು ನಿರಾಸೆಗೊಂಡವರೊಬ್ಬರು ಟ್ವೀಟ್ ಮಾಡಿದ್ದಾರೆ.

|
Google Oneindia Kannada News

ಬೆಂಗಳೂರು, ಮೇ 29: ಇಡಿ ರಾಜ್ಯವೂ ಮಳೆಗಾಗಿ ಪರಿತಪಿಸುತ್ತಿದ್ದರೆ, ಯಾಕಾದ್ರೂ ಶುರುವಾಯ್ತೋ ಮಳೆಗಾಲ ಎಂದು ಪರಿತಪಿಸುವ ಒಂದಷ್ಟು ಜನರು ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ. ಅದಕ್ಕೆ ಕಾರಣ ಅವರ ಮನೆ ವರ್ತೂರು ಮತ್ತು ಬೆಳ್ಳಂದೂರು ಕೆರೆಯ ಭಾಗದಲ್ಲಿರುವುದು!

ನಿಜಕ್ಕೂ ಹೌದು, ಮಳೆಗಾಲ ಶುರುವಾಗುತ್ತಿದ್ದಂತೆಯೇ ಈ ಎರಡು ಕೆರೆಯ ಭಾಗದಲ್ಲಿರುವ ಮನೆಯ ಜನರದು ನರಕದ ಪಾಡು! ಈಗಾಗಲೇ ಉದ್ಯಾನನಗರಿಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ವರ್ತೂರು ಕೆರೆಯಲ್ಲಿ ಮಾಲಿನ್ಯಯುಕ್ತ ನೊರೆ ತುಂಬಿದ್ದು, ರಸ್ತೆಯ ಮೇಲೆಲ್ಲ ಹಾರಿ ದಾರಿಹೋಕರಿಗೂ, ವಾಹನ ಸವಾರರಿಗೂ ಅಸಹ್ಯವನ್ನುಂಟುಮಾಡುತ್ತಿದೆ.[ವರ್ತೂರು ಕೆರೆಯಿಂದ ಹಾರಿ ಬಂತು ನೊರೆ ನೊರೆ]

ವರ್ತೂರು ಕೆರೆಯಲ್ಲಿ ಮುಗಿಲೆತ್ತರಕ್ಕೆ ಹಾರುತ್ತಿರುವ ಮಾಲಿನ್ಯಯುಕ್ತ ನೊರೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿ ಬೆಂಗಳೂರಿನ ಮಾನವನ್ನೇ ಹರಾಜುಮಾಡುತ್ತಿದೆ. ಇಷ್ಟಾದರೂ ಪ್ರತೀ ಮಳೆಗಾಲದಲ್ಲೂ ಸರ್ಕಾರ ಮಾತ್ರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದರ ಬಗ್ಗೆ ಬೆಂಗಳೂರಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಸರ್ಕಾರ ಬಂದರೂ, ಬೆಂಗಳೂರಿಗರ ಈ ಸಮಸ್ಯೆ ಮಾತ್ರ ಪರಿಹಾರ ಕಾಣುತ್ತಿಲ್ಲ![ಬೆಳ್ಳಂದೂರು ಪರಿಸರದ ಕಾರ್ಖಾನೆಗಳ ನೀರು, ವಿದ್ಯುತ್ ಕಡಿತಕ್ಕೆ ಆದೇಶ]

ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿದ್ದರೂ ಆ ಕಾಮಗಾರಿ ಸಂಪೂರ್ಣ ಮುಗಿಯುವುದಕ್ಕೆ ವರುಷವೇ ಬೇಕು ಎಂದು ಸರ್ಕಾರವೇ ಹೇಳಿದೆ. ಅದಕ್ಕಾಗಿಯೇ ರಾಷ್ಟ್ರೀಯ ಹಸಿರು ಪ್ರಾಧಿಕಾರದ ಬಳಿ ಕಾಲಾವಕಾಶವನ್ನೂ ಸರ್ಕಾರ ಕೇಳಿತ್ತು. ಇದೀಗ ವರ್ತೂರು ಕೆರೆಯಲ್ಲೂ ನೊರೆ ಏಳುವುದಕ್ಕೆ ಆರಂಭವಾಗಿ ದ್ವಿಚಕ್ರವಾಹನ ಸವಾರರಿಗೆ ದುಸ್ವಪ್ನ ಎನ್ನಿಸಿದೆ.[ಶುರುವಾಗುತ್ತಿದೆ ಬೆಂಗಳೂರು ಕೆರೆ ಉಳಿಸುವ ಅಭಿಯಾನ]

ಸಾಂಕ್ರಾಮಿಕ ರೋಗದ ಭಯ

[ಬೆಳ್ಳಂದೂರು ಕೆರೆ ಸ್ವಚ್ಛವಾಗೋದು 2020 ಕ್ಕೆ!][ಬೆಳ್ಳಂದೂರು ಕೆರೆ ಸ್ವಚ್ಛವಾಗೋದು 2020 ಕ್ಕೆ!]

ಮುಖ್ಯಮಮಂತ್ರಿಯನ್ನು ಮುಟ್ಟುವುದಕ್ಕೆ ಮೇಲೇಳುತ್ತಿದೆ ನೊರೆ!

[ಬೆಳ್ಳಂದೂರು ಕೆರೆಯಲ್ಲಿ ಶುರು ಬಿರುಸಿನ ಸ್ವಚ್ಛತಾ][ಬೆಳ್ಳಂದೂರು ಕೆರೆಯಲ್ಲಿ ಶುರು ಬಿರುಸಿನ ಸ್ವಚ್ಛತಾ]

ಬೆಂಗಳೂರಿನಲ್ಲಿ ರಾಸಾಯನಿಕ ಮಂಜಿನ ಮಳೆ!

ಬೆಂಗಳೂರಿನಲ್ಲಿ ಸುರಿದ ಮಳೆಗೆ ವರ್ತೂರು ಕೆರೆಯಲ್ಲಿ ರಾಸಾಯನಿಕ ಮಂಜಿನ ಮಳೆಯಾಗುತ್ತಿದೆ!

ಮಾನ ಹರಾಜು!

ಈ ವಿಡಿಯೋ ನೋಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯಾನನಗರಿಯ ಮಾನ ಹರಾಜಾಗದೆ ಇರುತ್ತದೆಯೇ?

ಮಳೆಯ ನಂತರದ ಮಂಜು!

ಭಾರಿ ಮಳೆಯ ನಂತರ ಬೆಂಗಳೂರಿನಲ್ಲಿ ಸುರಿದ ಮಂಜು ಎಂದು ವ್ಯಂಗ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವರ್ತೂರು ಕೆರೆಯ ಸ್ಥಿತಿಯನ್ನು ಟೀಕಿಸಲಾಗುತ್ತಿದೆ.

English summary
Chemical snowfall in varthur lake, Bengaluru, become a nightmare to the people who reside in this region. The heavy rains in weekend resulted in the lake foaming again and spilling out on to the roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X