ವಿಡಿಯೋ : ಈ-ಶೌಚಾಲಯ ಕಾಯಿನ್ ನುಂಗಿತ್ತ

Posted By: Nayana
Subscribe to Oneindia Kannada
   ಬೆಂಗಳೂರಿನಲ್ಲಿ ಇ ಟಾಯ್ಲೆಟ್ ನಲ್ಲೂ ಮೋಸ | Oneindia Kannada

   ಬೆಂಗಳೂರು, ನವೆಂಬರ್ 14 : ಬೆಂಗಳೂರಿನ ಇ ಟಾಯ್ಲೆಟ್ ಗಳಲ್ಲೂ ಮೋಸ ನಡೆಯುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ. ಬೆಂಗಳೂರಿನಲ್ಲಿ ಯಾವ ಯಾವ ರೀತಿಯಲ್ಲಿ ಸಾರ್ವಜನಿಕರನ್ನು ಮೋಸ ಮಾಡಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

   ಇ- ಟಾಯ್ಲೆಟ್ ಗಳು ಡಿಜಿಟಲ್ ತಂತ್ರಜ್ಞಾನದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಜನರು 2ರೂ. , 5ರೂ. ನಾಣ್ಯಗಳನ್ನು ಬಳಸಿ ಟಾಯ್ಲೆಟ್ ಗಳನ್ನು ಬಳಸಬಹುದಾಗಿದೆ. ಇ-ಟಾಯ್ಲೆಟ್ ನಲ್ಲಿ ಕನಿಷ್ಠ ನೀರಿನ ಬಳಕೆ, ನಿಗದಿಪಡಿಸಿದ ಸಮಯ ಹಾಗೂ ಸಮರ್ಪಕವಾದ ನಿರ್ವಹಣೆ ಇರುತ್ತದೆ. ಇದು ಒಳ್ಳೆಯ ತಂತ್ರಜ್ಞಾನವಾಗಿದ್ದರೂ ಕೂಡ ಸಮರ್ಪಕವಾದ ನಿರ್ವಹಣೆ ಇಲ್ಲದಂತಾಗಿದೆ.

   E-toilets goes blocked despite pay

   ಬೆಂಗಳೂರು ಸುತ್ತ ಮುತ್ತ ಇರುವ ಸಾಕಷ್ಟು ಟಾಯ್ಲೆಟ್ ಗಳಲ್ಲಿ ನಾಣ್ಯವನ್ನು ಅಲ್ಲಿ ನೀಡಲಾದ ಜಾಗದಲ್ಲಿ ಹಾಕಿದಾಗ ಟಾಯ್ಲೆಟ್ ನ ಬಾಗಿಲುಗಳು ತೆರೆದುಕೊಳ್ಳುವುದಿಲ್ಲ. ಎಷ್ಟು ಬಾರಿ ನಾಣ್ಯಗಳನ್ನು ಬಳಸಿದರೂ ಕೂಡ ಬಾಗಿಲು ತೆರೆಯುವದಿಲ್ಲ. ನಾಣ್ಯಗಳು ಪುನಃ ಜನರ ಕೈಸೇರುವುದಿಲ್ಲ. ಹೀಗಿರುವಾಗ ಈ- ಟಾಯ್ಲೆಟ್ ಗಳು ಜನರಿಗೆ ಸಹಾಯಕಾರಿಯಾಗಲು ಸಾಧ್ಯವಿಲ್ಲ. ಅಸಮರ್ಪಕವಾಗಿರುವ ಇ-ಟಾಯ್ಲೆಟ್ ಗಳ ಬಳಕೆ ಸಾರ್ವಜನಿಕರಿಗೆ ಕುಂದುಂಟು ಮಾಡಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   In India, lack of toilets has resulted in defecation in open places, which has created a major sanitary problem. With increased awareness among the people, the government and a number of organizations have come up with public urinals and toilets in various areas.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ