420ಕೇಸ್ :ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮತ್ತೊಮ್ಮೆ ಬಂಧನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 19: ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಅವರನ್ನು ರಾಜರಾಜೇಶ್ವರಿ ನಗರ ಪೊಲೀಸರು ಮತ್ತೊಮ್ಮೆ ಬಂಧಿಸಿದ್ದಾರೆ. ತರಬೇತಿ ವೇಳೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈ ಮೊದಲು ಬಂಧಿತರಾಗಿದ್ದ ಆರ್ಯವರ್ಧನ್ ಅವರಿಗೆ ಶುಕ್ರವಾರದಂದು ಮಧ್ಯಂತರ ಜಾಮೀನು ಸಿಕ್ಕಿತ್ತು.

ನಗರದ 51ನೇ ಸಿಟಿ ಸಿವಿಲ್ ಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ ಬಿಎಸ್ ರೇಖಾ ಅವರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರು. [ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗೆ ಮಧ್ಯಂತರ ಜಾಮೀನು]

Cheating Case : Numerologist Aryavardhan Arrested Rajarajeshwari Nagar Police

ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಆರ್ಯವರ್ಧನ್ ಮೇಲೆ ಲೈಂಗಿಕ ಕಿರುಕುಳ, ವಂಚನೆ, ಪ್ರಾಣ ಬೆದರಿಕೆ ಆರೋಪ ಹೊರೆಸಿ,ರಾಜರಾಜೇಶ್ವರಿ ನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರ್ಯವರ್ಧನ್ ವಿರುದ್ಧ ಐಪಿಸಿ ಸೆಕ್ಷನ್ 354, 420, 506 ಹಾಗೂ 506ರಂತೆ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿದ್ದ ಆರ್ಯವರ್ಧನ್ ರನ್ನುಕಳೆದ ಶುಕ್ರವಾರ ಪೊಲೀಸರು ಬಂಧಿಸಿದ್ದರು. ಶನಿವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು.

ಘಟನೆ ಹಿನ್ನಲೆ: ಜ್ಯೋತಿಷಿ ಆರ್ಯವರ್ಧನ್ ಕೆಲದಿನಗಳ ಹಿಂದೆ ಜ್ಯೋತಿಷ್ಯ ತರಬೇತಿ ನೀಡುವುದಾಗಿ ಜಾಹೀರಾತು ನೀಡಿದ್ದರು. 5 ದಿನಗಳ ತರಗತಿ ಪ್ರವೇಶಾತಿಗೆ 24 ಸಾವಿರ ನಿಗದಿ ಮಾಡಲಾಗಿತ್ತು. ಹೆಚ್ಚಿನ ತರಗತಿಗಾಗಿ 1.5ಲಕ್ಷ ಹಣವನ್ನು ಆಕೆಯಿಂದ ಆರ್ಯವರ್ಧನ್ ಪಡೆದಿದ್ದರು. ತಮ್ಮ ತರಗತಿ ಉಪಯೋಗವಾಗದಿದ್ದರೆ ಹಣ ವಾಪಸ್ ನೀಡುವುದಾಗಿ ಹೇಳಿದ್ದರು.

ಕೆಲವು ದಿನ ತರಬೇತಿ ಭಾಗವಹಿಸಿದ ನಂತರ ಸಂಖ್ಯಾಶಾಸ್ತ್ರ ಪ್ರಯೋಜನವಿಲ್ಲವೆಂದು ತಿಳಿದು ಆಕೆ ಹಣ ವಾಪಸ್ ಕೇಳಿದ್ದರು. ಇದರಿಂದ ಇಬ್ಬರ ನಡುವೆ ವಾಗ್ವಾದಗಳು ನಡೆದಿದ್ದವು. ಆಗಸ್ಟ್ 21ರಂದು ಆರ್ಯವರ್ಧನ್ ಆಕೆಯ ಮನೆಗೆ ತೆರಳಿ ಹಣ ನೀಡುವಂತೆ ಕೇಳಿದ್ದು ಈ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cheating Case: Rajarajeshwari Nagar police arrested Numerologist Aryavardhan who recently got interim bail by 51st City civil court in Bengaluru.
Please Wait while comments are loading...