ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂಚನೆಗೊಳಗಾದ ಟೆಕ್ಕಿ: ಬೆಂಕಿಹಚ್ಚಿಕೊಂಡು ಆತ್ಮಹತ್ಯೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 06 : ಖಾಸಗಿ ಟುಟೋರಿಯಲ್ ನಿಂದ 1.25 ಲಕ್ಷ ರೂ. ವಂಚನೆಗೊಳಗಾದ ಸಾಫ್ಟ್ ವೇರ್ ಎಂಜಿನಿಯರ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಜೆಪಿನಗರದಲ್ಲಿ ನಡೆದಿದೆ.

ಗೆಳತಿಯ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡ ಹಾಕಿ ಆಟಗಾರ?

ರಿತೇಶ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡವರು, ಟುಟೊರಿಯಲ್ ಮಾಲೀಕ ಆದಿತ್ಯ ಬಜಾಜ್ ಎಂಬುವರು ರಿತೇಶ್ ಅವರ ಏಳು ವರ್ಷದ ಮಗುವಿಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಸೀಟು ಕೊಡಿಸಲು 1.25 ಲಕ್ಷ ರೂ. ಹಣ ಪಡೆದಿದ್ದರು. ಆದರೆ ಸೀಟು ಸಿಕ್ಕಿರಲಿಲ್ಲ. ಹಣವನ್ನೂ ವಾಪಾಸ್ ಮಾಡಿರಲಿಲ್ಲ.

Cheated of Rs1.25 lakh Techie immolates himself

ಮಾರತ್ ಹಳ್ಳಿಯ ಖಾಸಗಿ ಕಂಪನಿಯ ಸಾಫ್ಟವೇರ್ ಎಂಜಿನಿಯರ್ ಆಗಿದ್ದ ರಿತೇಶ್ ಹಣ ವಸೂಲಿ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಬಜಾಜ್ ಹಣ ನೀಡಿರಲಿಲ್ಲ. ಹೀಗಾಗಿ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಬೆದರಿಕೆ ಒಡ್ಡಿದ ರಿತೇಶ್ ಕೊನೆಗೆ ಅಚಾತುರ್ಯದಿಂದ ಸಾವಿಗೀಡಾಗಿದ್ದಾರೆ.

ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣುಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ ಆದಿತ್ಯ ಬಜಾಜ್ ಅವರಿಗೂ ಬೆಂಕಿಯಿಂದ ಸುಟ್ಟಗಾಯಗಳಾಗಿದ್ದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿತೇಶ್ ಕುಮಾರು ಅವರು 2.5 ಲಕ್ಷ ಕೊಡುವುದಾಗಿ ಹೇಳಿ1.25 ಲಕ್ಷ ಅಷ್ಟೇ ನೀಡಿದ್ದರು ಎಂದು ಬಜಾಜ್ ಹೇಳಿದ್ದಾರೆ. ರಿತೇಶ್ ಅವರು ವಾರ್ಷಿಕವಾಗಿ ೧೫ಲಕ್ಷ ವೇತನ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

English summary
Asoftware engineer, cheated of Rs.1.25 lakh allegedly by a private tutorial owner, died after setting himself a fire in JP Nagar in South Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X