ಬೆಂಗಳೂರು: ಮುಂದಿನ 48 ಗಂಟೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ

Posted By:
Subscribe to Oneindia Kannada

ಬೆಂಗಳೂರು, ಅ 27: ದೀಪಾವಳಿ ಹಬ್ಬಕ್ಕೂ ಮುನ್ನ ಬೆಂಗಳೂರು ಜೀವನವನ್ನು ನರಕಸದೃಶ ಮಾಡಿದ್ದ ಮಳೆ, ಮುಂದಿನ 48 ಗಂಟೆಯಲ್ಲಿ ಮತ್ತೆ ಅಬ್ಬರಿಸುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಇಂದು (ಅ 27) ಮತ್ತು ನಾಳೆ ( ಅ 28) ಮಹಾನಗರಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 28ರವರೆಗೆ ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮಳೆ

Chances of rain again in Bengaluru on Oct 27 and 28, as per KSNDMC report

ನಗರದಲ್ಲಿ ಶುಕ್ರವಾರ ಮೋಡಕವಿದ ವಾತಾವರಣವಿರಲಿದ್ದು, ಕೋರಮಂಗಲ, ಯಶವಂತಪುರ, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.

ನೈರುತ್ಯ ಮುಂಗಾರು ಮಾರುತ ಬುಧವಾರ ನಿರ್ಗಮಿಸಿದ್ದು, ಹಿಂಗಾರು ಮಾರುತ ಪ್ರವೇಶವಾಗಲಿದೆ. ಈ ಅವಧಿಯಲ್ಲಿ ಮಳೆ ಬರುವುದು ಸಾಮಾನ್ಯ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಅಕ್ಟೋಬರ್ 28ರವರೆಗೆ ಹಗುರವಾಗಿ ಮಳೆ ಬೀಳಲಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿಯೂ ತುಂತುರು ಮಳೆ ಬೀಳಬಹುದು ಎಂದು ಸ್ಕೈಮೆಟ್ ವೆದರ್
ವೆಬ್ಸೈಟ್ ಕೂಡಾ ವರದಿ ಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KSNDMC alerted, chances of normal to heavy rainfall in Bengaluru from Oct 27th and 28th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ