ಟ್ವಿಟ್ಟರ್ ಪಾರ್ಟಿ ಸೇರಿದ ಶಾಸಕ ಜಮೀರ್ ಅಹಮದ್ ಖಾನ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 07 : ಜೆಡಿಎಸ್ ಪಕ್ಷದಲ್ಲಿ ಸದಾ ಸುದ್ದಿಯಲ್ಲಿರುವವರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್. ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವ ಜಮೀರ್ ಅಹಮದ್ ಖಾನ್, ಜನರಿಗೆ ಮತ್ತಷ್ಟು ಹತ್ತಿರವಾಗಲು ಈಗ ಟ್ವಿಟ್ಟರ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಜೆಡಿಎಸ್ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಜಮೀರ್ ಅಹಮದ್ ಖಾನ್, 'ನಾನು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಅದನ್ನು ಸ್ವೀಕರಿಸುತ್ತೇನೆ' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ['ಜೆಡಿಎಸ್ ಪಕ್ಷ ತಾಯಿ ಇದ್ದಂತೆ, ತಾಯಿ ಮರೆತರೆ ಅನ್ನ ಸಿಗುವುದಿಲ್ಲ']

ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು ಜಮೀರ್ ಅಹಮದ್ ಖಾನ್ ಟ್ವಿಟ್ಟರ್‌ಗೆ ಬಂದಿದ್ದಾರೆ. @BZZameerAhmed ಖಾತೆ ಆರಂಭಿಸಿರುವ ಅವರು, ಸದ್ಯ 24 ಜನರನ್ನು ಫಾಲೋ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಇರುವ ಫೋಟೋವನ್ನು ಮೊದಲು ಟ್ವಿಟ್ ಮಾಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ['ಜಮೀರ್ ಅವರನ್ನು ಸದ್ಯಕ್ಕೆ ಪಕ್ಷದಿಂದ ಉಚ್ಛಾಟನೆ ಮಾಡುವುದಿಲ್ಲ']

ಮೂರು ಬಾರಿ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಜಮೀರ್ ಅಹಮದ್ ಖಾನ್, ಹಜ್ ಮತ್ತು ವಕ್ಫ್ ಖಾತೆಯ ಮಾಜಿ ಸಚಿವರು. ಜಮೀರ್ ಅಹಮದ್ ಖಾನ್ ಟ್ವಿಟ್ಟರ್ ಖಾತೆ ಹೇಗಿದೆ? ನೋಡೋಣ ಬನ್ನಿ..... [ಫೇಸ್ ಬುಕ್ ಪುಟ]

ಟ್ವಿಟ್ಟರ್‌ಗೆ ಕಾಲಿಟ್ಟ ಜಮೀರ್ ಅಹಮದ್

ಟ್ವಿಟ್ಟರ್‌ಗೆ ಕಾಲಿಟ್ಟ ಜಮೀರ್ ಅಹಮದ್

ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಮಹದ್ ಖಾನ್ ಟ್ವಿಟ್ಟರ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿರುವ ಕರ್ನಾಟಕದ ಕೆಲವೇ ರಾಜಕಾರಣಿಗಳ ಸಾಲಿಗೆ ಜಮೀರ್ ಸೇರಿದ್ದಾರೆ.

ಸಿದ್ದರಾಮಯ್ಯ ಅವರ ಜೊತೆಗಿರುವ ಫೋಟೋ ಟ್ವಿಟ್

ಜಮೀರ್ ಅಹಮದ್ ಖಾನ್ ಮೊದಲ ಟ್ವೀಟ್

ಪಕ್ಷದ ಖಾತೆಯನ್ನು ಫಾಲೋ ಮಾಡುತ್ತಿಲ್ಲ

ಪಕ್ಷದ ಖಾತೆಯನ್ನು ಫಾಲೋ ಮಾಡುತ್ತಿಲ್ಲ

ಟ್ವಿಟ್ಟರ್‌ಗೆ ಬಂದಿರುವ ಜಮೀರ್ ಅಹಮದ್ ಖಾನ್ ಜೆಡಿಎಸ್ ಪಕ್ಷದ @JdsKarnataka, ಕುಮಾರಸ್ವಾಮಿ ಅವರ @hdk_jds ಖಾತೆಗಳನ್ನು ಫಾಲೋ ಮಾಡುತ್ತಿಲ್ಲ.

ಯಾರನ್ನು ಫಾಲೋ ಮಾಡುತ್ತಿದ್ದಾರೆ?

ಯಾರನ್ನು ಫಾಲೋ ಮಾಡುತ್ತಿದ್ದಾರೆ?

ಜಮೀರ್ ಅಹಮದ್ ಖಾನ್ @CMofKarnataka, @MNReddi_IPS, @AddlCPEast, @CPBlr, @CCBBangalore, @AddlCPTraffic, @KarnatakaVarthe ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಕರ್ನಾಟಕ ವಾರ್ತೆ, ಸಿಎಂ ಆಫ್ ಕರ್ನಾಟಕ, ಜಿಓಕೆ ಅಪ್‌ಡೇಟ್ಸ್‌ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ.

24 ಜನರು ಫಾಲೋ ಮಾಡುತ್ತಿದ್ದಾರೆ

24 ಜನರು ಫಾಲೋ ಮಾಡುತ್ತಿದ್ದಾರೆ

ಟ್ವಿಟ್ಟರ್‌ಗೆ ಬಂದ ಜಮೀರ್ ಅಹಮದ್ ಖಾನ್ ಅವರನ್ನು 24 ಜನರು ಫಾಲೋ ಮಾಡುತ್ತಿದ್ದಾರೆ. ರಾಜ್ಯಪಾಲ ವಜುಭಾಯಿವಾಲಾ, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಜೊತೆಗಿರುವ ಫೋಟೋವನ್ನು ತಮ್ಮ ಖಾತೆಯ ಕವರ್ ಫೋಟೋಗೆ ಹಾಕಿದ್ದಾರೆ.

ಟ್ವಿಟ್ಟರ್‌ನಲ್ಲಿರುವವ ರಾಜಕಾರಣಿಗಳು

ಟ್ವಿಟ್ಟರ್‌ನಲ್ಲಿರುವವ ರಾಜಕಾರಣಿಗಳು

ಅಂದಹಾಗೆ ಕರ್ನಾಟಕದ ಹಲವು ರಾಜಕಾರಣಿಗಳು ಟ್ವಿಟ್ಟವರ್‌ನಲ್ಲಿ ಸಕ್ರಿಯರಾಗಿದ್ದಾರೆ. @krishnabgowda, @dineshgrao, @srpatilbagalkot, @CTRavi_BJP, @BSYBJP ಸೇರಿದಂತೆ ಹಲವು ರಾಜಕೀಯ ನಾಯಕರು ಟ್ವಿಟ್ಟರ್‌ನಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Chamrajpet constituency JDS MLA Zameer Ahmed Khan (@BZZameerAhmed ) joined micro blogging site twitter on March 4, 2016.
Please Wait while comments are loading...