ಇಂದಿರಾ ಕ್ಯಾಂಟೀನ್ ಗಾಗಿ ಐತಿಹಾಸಿಕ ದೇಗುಲದ ಭಾಗ ಧ್ವಂಸ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 01: ಬೆಂಗಳೂರಿನ ಐತಿಹಾಸಿಕ ಹೆಗ್ಗುರುತಾಗಿರುವ 300 ವರ್ಷ ಪುರಾತನ ಹಿಂದೂ ಮಂದಿರದ ಆವರಣದಲ್ಲಿ 'ಇಂದಿರಾ ಕ್ಯಾಂಟೀನ್' ಏಕೆ ನಿರ್ಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರ ಮೇಲೆ ಹಲ್ಲೆ ಮಾಡಲಾಯಿತೆ?

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯಿರುವ ರಾಮೇಶ್ವರ ದೇಗುಲದ ಗೋಡೆಯನ್ನು ಸೋಮವಾರ ರಾತ್ರಿಯೇ ಕೆಡವಲಾಗಿದೆ, ಹಳೆಯ ಮರಗಳನ್ನು ಕೂಡ ಕತ್ತರಿಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ರಕರ್ತರ ಮೇಲೆ ಕಾರ್ಪೊರೇಟರ್ ಕೋಕಿಲಾ ಅವರ ಪತಿ ಮಾಜಿ ಬಿಬಿಎಂಪಿ ಸದಸ್ಯ ಚಂದ್ರಶೇಖರ್ ಅವರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದು ರಾಜಕೀಯ ದುರಂಕಾರವಲ್ಲದೆ ಮತ್ತೇನೂ ಅಲ್ಲ. ರಾಜಕಾರಣಿಗಳು ಈರೀತಿ ಸಂವೇದನೆ ಕಳೆದುಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ರಾಮಕೃಷ್ಣ ಉಪಾಧ್ಯ ಅವರು, ಸರಕಾರದ ಕ್ರಮದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರಿನ ನಾಗರಿಕರನ್ನು ಕೋರಿದ್ದಾರೆ.

Chamarajpet Canteen Controversy ː Senior Journalist Ramakrishna Upadhya attacked

ಆದರೆ, ಸಮಯಕ್ಕೆ ಸರಿಯಾದ ಪೊಲೀಸರು ಮಧ್ಯ ಪ್ರವೇಶಿಸಿ, ರಾಮಕೃಷ್ಣ ಅವರನ್ನು ಬಚಾವ್ ಮಾಡಿದ್ದಾರೆ.ವಿಜಯ್ ಟೈಮ್ಸ್ ನ ಸಂಪಾದಕರಾಗಿದ್ದ ರಾಮಕೃಷ್ಣ ಅವರು 2014ರಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ಬಿನ ಅಧ್ಯಕ್ಷರಾಗಿದ್ದರು.

Rameshwar Temple


ಚಾಮರಾಜಪೇಟೆಯ ಐತಿಹಾಸಿಕ ರಾಮೇಶ್ವರ ದೇಗುಲದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳು, ಕಾರ್ಪೊರೇಟರ್ ಕೋಕಿಲಾ ಅವರು ಮುಂದಾಗಿದ್ದರು. ಸೋಮವಾರದಂದು ದೇಗುಲದ ಒಂದು ಭಾಗದ ಗೋಡೆ ಹಾಗೂ ಕಾಂಪೌಂಡ್ ನೆಲಸಮಗೊಳಿಸಲಾಗಿತ್ತು.
All set to run Namma Appaji canteens from JDS | Oneindia Kannada

ಕ್ಯಾಂಟೀನ್ ಕಾಮಗಾರಿಯನ್ನು ವಿರೋಧಿಸಿಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪಾರಂಪರಿಕ, ಐತಿಹಾಸಿಕ ಕಟ್ಟಡ, ದೇಗುಲಗಳನ್ನು ಹಾಳುಗೆಡವಿದ್ದೇಕೆ ಎಂದು ರಾಮಕೃಷ್ಣ ಅವರು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಬಿಬಿಎಂಪಿಯ ಅಧಿಕಾರಿಗಳ ಬೇಜವಾಬ್ದಾರತನದಿಂದ 300 ವರ್ಷಗಳ ಇತಿಹಾಸ ಹೊಂದಿರುವ ದೇಗುಲದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chamarajpet Canteen Controversy ː Senior Journalist Ramakrishna Upadhya allegedly attacked by Former BBMP corporator Chandrashekar. Ramakrishna has questioned about using historical Rameshwara temple premises for construction of Indira Canteen.
Please Wait while comments are loading...