ಬೆಂಗಳೂರಿಗರ ನೆಚ್ಚಿನ ಚೆಲುವೆ ಚಾಮರಾಜಪೇಟೆಗೆ 125ರ ಸಂಭ್ರಮ

Subscribe to Oneindia Kannada

ಬೆಂಗಳೂರು, ಜನವರಿ 24: ಉಮಾ ಟಾಕೀಸು, ಕೋಟೆ ವೆಂಕರಮಣ ದೇವಸ್ಥಾನ, ಮಕ್ಕಳ ಕೂಟ, ಕನ್ನಡ ಸಾಹಿತ್ಯ ಪರಿಷತ್.. ಹೀಗೆ ಒಂದೊಂದೇ ಹೆಸರು ಹೇಳಿದರೆ ನಿಮ್ಮ ಕಣ್ಣ ಮುಂದೆ ಬರುವುದು ಚಾಮರಾಜಪೇಟೆ. ಈಗ ಅದೇ ಚಾಮರಾಜಪೇಟೆಗೆ 125 ವರ್ಷದ ಸಂಭ್ರಮ.

ಬೆಂಗಳೂರಿನ ಪ್ರಮುಖ ಬಡಾವಣೆಯಾದ ಚಾಮರಾಜನಗರಕ್ಕೆ125 ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಸ್ಥಳೀಯ ನಿವಾಸಿಗಳು ಎರಡು ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜನವರಿ 28 ಮತ್ತು 29ರಂದು ಈ ಕಾರ್ಯಕ್ರಮ ನಡೆಯಲಿದೆ.

Chamarajpet – 125, Celebration on Jan 28 and 29

'ಚಾಮರಾಜಪೇಟೆ 125' ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಸಂಭ್ರಮ ಸಮಿತಿಯ ಅಧ್ಯಕ್ಷ ಕೆ. ರಾಜ್ ಕುಮಾರ್ ಹೇಳಿದ್ದಾರೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಇನ್ನು ಮೈಸೂರು ರಾಜಮನೆತನದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತಾಯಿ ಪ್ರಮೋದಾ ದೇವಿ ಮತ್ತು ಪತ್ನಿ ತ್ರಿಷಿಕಾ ಕುಮಾರಿ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.[ಲಾಲ್ ಬಗ್ ನಲ್ಲಿ ಚಾಮರಾಜ ನಗರ ಈ ಪ್ರಕೃತಿ ಮಕ್ಕಳಿಗೇನು ಕೆಲಸ?]

Chamarajpet – 125, Celebration on Jan 28 and 29

ಈ ಸಂದರ್ಭದಲ್ಲಿ 'ಚಾಮರಾಜಪೇಟೆ ದರ್ಶನ' ಎನ್ನುವ 200 ಪುಟಗಳ ಪುಸ್ತಕವೂ ಬಿಡುಗಡೆಯಾಗಲಿದೆ. ಇದನ್ನು ಇತಿಹಾಸ ತಜ್ಞ ಸುರೇಶ್ ನೂನಾ ಸಂಪಾದಿಸಿದ್ದಾರೆ. ಇನ್ನು ನೃತ್ಯ, ಸಂಗೀತ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿನ ಕೋಟೆ ಹೈ ಸ್ಕೂಲ್ ಮೈದಾನದಲ್ಲಿ ಸಂಭ್ರಮಾಚರಣೆ ನಡೆಯಲಿದೆ..[ವಿಧಾನಸೌಧಕ್ಕೆ 60: ಸಂಭ್ರಮಕ್ಕೆ ಅಣಿಯಾಗಿ, ಸಿದ್ದರಾಮಯ್ಯ]

Chamarajpet – 125, Celebration on Jan 28 and 29

ಚಾಮರಾಜಪೇಟೆಯ ಇತಿಹಾಸ ಸಾರುವ ಪ್ರಮುಖ ಸ್ಥಳಗಳ ಪಟ್ಟಿ ಹೀಗಿದೆ,

1. ಟಿಪ್ಪು ಬೇಸಿಗೆ ಅರಮನೆ
2. ಮಿಂಟೋ ಆಸ್ಪತ್ರೆ
3. ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ
4. ಕೋಟೆ ಹೈಸ್ಕೂಲ್
5. ಕನ್ನಡ ಸಾಹಿತ್ಯ ಪರಿಷತ್
6. ಮಕ್ಕಳ ಕೂಟ
7. ಎಸ್.ಎಲ್.ಎನ್ ಶಾಲೆ
8. ಕೋಟೆ ವೆಂಕಟ್ರಮಣ ದೇವಸ್ಥಾನ

9. ಉಮಾ ಟಾಕೀಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To commemorate the 125th anniversary of Chamarajapet, local residents have decided to organize a two-day event on January 28 and 29 at Fort High school ground.
Please Wait while comments are loading...