ಸರಗಳ್ಳರಿಗೆ ಭಾನುವಾರದ ರಜೆ ಇಲ್ಲ, 3 ಕಡೆ ಸರಗಳವು

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 07 : ಉದ್ಯಾನ ನಗರಿ ಬೆಂಗಳೂರಿಗೆ ಇಂದು ಮತ್ತೆ ಸರಗಳ್ಳರು ಬಂದಿದ್ದು ಬೆಳಗ್ಗೆ 2 ಕಡೆ ಮತ್ತು ಸಂಜೆ 1 ಕಡೆ ಸರಗಳ್ಳತನ ನಡೆದಿದೆ. ಶನಿವಾರವೂ ನಗರದ ಐದು ಕಡೆ ಸರಗಳ್ಳತನ ನಡೆದಿತ್ತು.

ಯಶವಂತಪುರ, ಅಮೃತಹಳ್ಳಿ, ವಿಜಯಗನರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸರಗಳ್ಳತನ ನಡೆದಿದೆ. ಬ್ಲಾಕ್ ಪಲ್ಸರ್‌ನಲ್ಲಿ ಬಂದ ದುಷ್ಕರ್ಮಿಗಳು ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. [ಬೆಂಗಳೂರು : 1 ಗಂಟೆಯಲ್ಲಿ 10 ಕಡೆ ಸರಗಳ್ಳತನ]

gold

ವಿಜಯನಗರ : ಭಾನುವಾರ ಸಂಜೆ ವಿಜಯನಗರ ಸಮೀಪದ ವಿನಾಯಕ ಲೇಔಟ್‌ಗೆ ಸರಗಳ್ಳರು ಬಂದಿದ್ದು, ವಿಳಾಸ ಕೇಳುವ ನೆಪದಲ್ಲಿ ಜಯಲಕ್ಷಮ್ಮ ಎಂಬುವವರನ್ನು ಮಾತನಾಡಿಸಿ 65 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]

ಯಶವಂತಪುರ : ಭಾನುವಾರ ಬೆಳಗ್ಗೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಿವಾನರಪಾಳ್ಯ ಬಳಿ ಮನೆಯ ಮುಂದೆ ನಿಂತಿದ್ದ ಅನುಸೂಯಮ್ಮ ಅವರ ಬಳಿ ವಿಳಾಸ ಕೇಳಿದ ದುಷ್ಕರ್ಮಿಗಳು ಅವರ ಕೊರಳಿನಲ್ಲಿದ್ದ 55 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಅಮೃತಹಳ್ಳಿ : ಅಮೃತಹಳ್ಳಿಯ ಕಾಫಿಬೋರ್ಡ್‌ ಬಡಾವಣೆಯಲ್ಲಿ ಬೆಳಗ್ಗೆ ರಜನಿ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 80 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾಗಿಯಾಗಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಶನಿವಾರ ಜ್ಞಾನಭಾರತಿ, ಕೆ.ಆರ್.ಪುರಂ, ಚನ್ನಮ್ಮನಕೆರೆ ಅಚ್ಚುಕಟ್ಟು, ಚಂದ್ರಾಲೇಔಟ್ ಪೊಲೀಸ್ ಠಾಣೆ ಸೇರಿದಂತೆ 5 ಕಡೆ ಸರಗಳ್ಳತನ ನಡೆದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
3 chain snatching incidents reported in Bengaluru city on Sunday, February 7, 2016. Case registered in Yeshwanthpur, Amruthahalli and Vijayanagar police station.
Please Wait while comments are loading...