ಸರ ದೋಚಲು ಯತ್ನ: ನಿರಾಕರಿಸಿದವನ ಕಿವಿ ಕೊಯ್ದ ದುಷ್ಕರ್ಮಿಗಳು

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 13: ದಿನದಿಂದ ದಿನಕ್ಕೆ ನಗರದಲ್ಲಿ ಕೊಲೆ, ದರೋಡೆ, ಸರಗಳ್ಳತನ ಹೆಚ್ಚಾಗುತ್ತಲೇ ಇದೆ. ಪೊಲೀಸರು ಎಷ್ಟೋ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಪೊಲೀಸರು ಗಸ್ತು ತಿರುಗುತ್ತಿದ್ದರೂ ಕೂಡ ಸರಗಳ್ಳತನ ಕಡಿಮೆಯಾಗಿಲ್ಲ.

ಯಾರ ಮೇಲೂ ಭಯವಿಲ್ಲದೆ ಹಗಲಿನಲ್ಲಿಯೇ ರಾಜಾರೋಷವಾಗಿ ಬಂದು ಆಭರಣಗಳನ್ನು ದೋಚುತ್ತಿದ್ದಾರೆ.

ಸರಗಳ್ಳನನ್ನು ಸಿನಿಮೀಯ ರೀತಿ ಚೇಸ್ ಮಾಡಿ ಹಿಡಿದ ಪೊಲೀಸರು

ಅಂತೆಯೇ ಬೆಂಗಳೂರಿನಲ್ಲಿ ಸರಗಳ್ಳತನ ಮುಂದುವರೆದಿದೆ, ಬೈಕ್ ನಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು ಸರವನ್ನು ದೋಚಲು ಹೋಗಿ ವ್ಯಕ್ತಿಯ ಕಿವಿ ಕತ್ತರಿಸಿದ ಘಟನೆ ಗೋವಿಂದರಾಜನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ನಿಖಿಲ್ ಎನ್ನುವವರ ಕಿವಿಯನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ.

Chain snatchers cut ear instead gold chain

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಳಗ್ಗೆ ರಸ್ತೆಯಲ್ಲಿ ನಿಖಿಲ್ ತೆರಳುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು, ನಿಖಿಲ್ ಬಳಿ ಚಿನ್ನದ ಸರ ನೀಡುವಂತೆ ಒತ್ತಾಯಿಸಿದ್ದಾರೆ, ಸರ ನೀಡಲು ನಿರಾಕರಿಸಿದ ನಿಖಿಲ್ ನ ಕಿವಿಯನ್ನು ಕತ್ತರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ, ಸ್ಥಳೀಯರು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In strange incident chain snatchers cut ear of a lady instead gold chain who failed to snatch the chain at Govindarajanagar of Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ