ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀನಾಸಂ ತಿರುಗಾಟ, ಬೆಂಗಳೂರಿಗರಿಗೆ ರಸದೌತಣ

By Mahesh
|
Google Oneindia Kannada News

ಬೆಂಗಳೂರು, ಅ.17: ಕೆ. ವಿ. ಸುಬ್ಬಣ್ಣನವರು ಸ್ಥಾಪಿಸಿದ ನೀಲಕಂಠೇಶ್ವರ ನಾಟಕ ಸಂಸ್ಥೆ (ನೀನಾಸಂ), ರಾಜ್ಯದ ಅತ್ಯುನ್ನತ ರಂಗ ತರಬೇತಿ ಕೇಂದ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪ್ರತಿ ವರ್ಷವೂ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಾದ ನಟ, ನಟಿಯರು, ಪ್ರತಿ ವರ್ಷ ಜುಲೈ ಯಿಂದ ಅಕ್ಟೋಬರ್ ವರೆಗೆ 2 ನಾಟಕಗಳನ್ನು ಸಿದ್ಧಪಡಿಸಿ, ರಾಜ್ಯದಾದ್ಯಂತ, ಎಲ್ಲ ಜಿಲ್ಲೆಗಳಲ್ಲೂ ಪ್ರದರ್ಶನ ನೀಡುತ್ತದೆ.

ಪ್ರಪಂಚದ ಶ್ರೇಷ್ಠ ನಾಟಕ ಕೃತಿಗಳನ್ನು ನಮ್ಮ ರಂಗಭೂಮಿಗೆ ತರುವುದು; ಶಾಸ್ತ್ರೀಯ ಸಂಸ್ಕೃತ ಮತ್ತು ಭಾರತೀಯ ನಾಟಕಗಳನ್ನು ಕನ್ನಡಕ್ಕೆ ಪರಿಚಯಿಸುವುದು; ಹೊಸ ನಾಟಕಗಳ ರಚನೆಯನ್ನು ಪ್ರೇರೇಪಿಸುವುದು ಮತ್ತು ಹೊಸ ಪ್ರಯೋಗಗಳ ಮೂಲಕ ಹಳೆಯ ನಾಟಕಗಳ ಪುನರ್ ಮೌಲ್ಯಮಾಪನವಾಗುವಂತೆ ಪ್ಯಯತ್ನಿಸುವುದು ನೀನಾಸಂ ತಿರುಗಾಟದ ಮುಖ್ಯ ಉದ್ದೇಶವಾಗಿದೆ.

ಪ್ರತಿ ವರ್ಷವೂ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಾದ ನಟ, ನಟಿಯರು ಮತ್ತು ಹಿಂದಿನ ವರ್ಷದ ತಿರುಗಾಟದಲ್ಲಿ ಪಾಲ್ಗೊಂಡ ಕೆಲ ನಟ,ನಟಿಯರ ತಂಡವನ್ನು ಆರಿಸಲಾಗುತ್ತದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಲಭ್ಯವಾಗುವ ರಂಗ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ತಿರುಗಾಟ ತಂಡದ ಶಕ್ತಿ-ಸಾಮರ್ಥ್ಯದ ವಿತಿಯಲ್ಲಿ ಸಾಧ್ಯವಾಗುವಷ್ಟು ವ್ಯವಸಾಯಿ ಶಿಸ್ತಿನ ರಂಗ ಪ್ರದರ್ಶನವನ್ನು ಕೊಡುವುದು ತಂಡದ ಗುರಿ.

ಇದೇ ಅಕ್ಟೋಬರ್ 18 2014, ಶನಿವಾರ ಮತ್ತು ಅಕ್ಟೋಬರ್ 19 2014, ಭಾನುವಾರ ದಂದು ನಗರದ ಸೆಕ್ರೆಟಾರಿಯೆಟ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್ ನಲ್ಲಿ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನವಿದೆ.

ಈ ನಾಟಕದ ವಿವರಗಳು ಈ ಕೆಳಗಿನಂತಿವೆ.

ನಾಟಕ : ಉತ್ತರ ರಾಮಚರಿತ
ರಚನೆ : ಭವಭೂತಿ
ಅನುವಾದ : ಬನ್ನಂಜೆ ಗೀವಿಂದಾಚಾರ್ಯ
ವಿನ್ಯಾಸ ಮತ್ತು ನಿರ್ದೇಶನ : ಬಿ.ಆರ್. ವೆಂಕಟರಮಣ ಐತಾಳ್
ಸ್ಥಳ : ಸೆಕ್ರೆಟಾರಿಯೆಟ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್
ದಿನಾಂಕ ಮತ್ತು ಸಮಯ : 18/10/2014; ಸಂಜೆ 5:30 ಕ್ಕೆ

ಶಿವಬಿಕ್ಖು ಮತ್ತು ಬುದ್ಧಮಾಧವ ಎಂಬ ಈ ಎರಡು ನಾಟಕಗಳ ಪ್ರಯೋಗ

Ninasam Tirugata

ಶಿವಬಿಕ್ಖು ರಚನೆ : ರಘುನಂದನ್ ಎಸ್.
ಬುದ್ಧಮಾಧವ ರಚನೆ : ಓಂಚೆರಿ ನಾರಾಯಣಪಿಳ್ಳೆ
ನಾಟಕ : ನಮ್ಮ ಸಂಸಾರ
ವಿನ್ಯಾಸ ಮತ್ತು ನಿರ್ದೇಶನ : ರಘುನಂದನ್ ಎಸ್.
ಸ್ಥಳ : ಸೆಕ್ರೆಟಾರಿಯೆಟ್ ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್
ದಿನಾಂಕ ಮತ್ತು ಸಮಯ : 19/10/2014; ಸಂಜೆ 6:30 ಕ್ಕೆ
ಟಿಕೆಟ್ ದರ : ರೂ. 100/-
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 99001 82400 ; 94498 50802
ಟಿಕೆಟ್ ಗಳಿಗೆ : www.bookmyshow.com

English summary
CFD presents NINASAM TIRUGATA 2014 at Karnataka Government SECRETARIAT CLUB AUDITORIUM Cubbon Park,Bangalore on Oct 18 and 19. Bhavabhuti's UTTARARAMA CHARITA and Double bill of 'Shivabikshu', a verse play by Raghunandana S, and 'Buddha Madhava' by Omchery Narayana Pillai will be staged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X