ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.18ರಿಂದ ಸಿಇಟಿ ಆರಂಭ : 2 ಲಕ್ಷ ವಿದ್ಯಾರ್ಥಿಗಳು ಭಾಗಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ವೃತ್ತಿಪರ ಕೋರ್ಸ್​ಗಳ ಪ್ರವೇಶ ಪರೀಕ್ಷೆ ಏ. 18ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಏಪ್ರಿಲ್ 30ರಂದು ಪಿಯು ಫಲಿತಾಂಶಏಪ್ರಿಲ್ 30ರಂದು ಪಿಯು ಫಲಿತಾಂಶ

ಏ 18,19ಮತ್ತು 20ಕ್ಕೆ ಸಿಇಟಿ ನಡೆಯಲಿದ್ದು ಇದು ಕೇವಲ‌ ಎಂಜಿನೀರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ಆಯುಶ್, ನ್ಯಾಚುರೋಪತಿ, ಯೋಗ, ಯುನಾನಿ ಕೋರ್ಸ್ ಗಳು ನೀಟ್ ಅಡಿಯಲ್ಲಿ ಬರಲಿದ್ದು, ಇದಕ್ಕೆ ನೀಟ್​ ಪರೀಕ್ಷೆ ನಡೆಸುತ್ತದೆ ಎಂದು ಸಿಇಟಿ ನಿರ್ದೇಶಕಿ ವಿನೋದ ಪ್ರಿಯಾ ತಿಳಿಸಿದ್ದಾರೆ

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ರಾಜ್ಯಾದ್ಯಂತ ಒಟ್ಟು 430 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 86 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 18 ರಂದು ಜೀವಶಾಸ್ತ್ರ, ಗಣಿತ, 19ಕ್ಕೆ ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ಪರೀಕ್ಷೆ ನಡೆಯಲಿದೆ. 20ಕ್ಕೆ ಹೊರರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ.

CET for engineering course from April 18

1,98, 639 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ತೆಗೆದುಕೊಳ್ಳಲಿದ್ದು, 1,00,071 ಪುರುಷ ಮತ್ತು 98,568 ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 430 ಪರೀಕ್ಷಾ ವೀಕ್ಷಕರು,860ವಿಶೇಷ ಜಾಗೃತಿ ದಳ ಸದಸ್ಯರು,430ಪ್ರಶ್ನೆ ಪತ್ರಿಕೆ ಪಾಲಕರು,12440ಕೊಠಡಿ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಸಿಇಟಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಎಸ್ಪಿಗಳಿಗೆ ಖಜಾನೆಗಳಿಗೆ ಹೆಚ್ಚಿನ ಭದ್ರತೆ ಜವಾಬ್ದಾರಿ ವಹಿಸಲಾಗಿದೆ.

English summary
Common Entrance test for engineering courses will be held from April 18 to 20. Around two lakhs students will attend at 430 exam centers across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X