ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಕಾರ್ಮಿಕ ಆಯುಕ್ತರ ಜತೆ ಮೆಟ್ರೋ ನೌಕರರ ಸಭೆ ವಿಫಲ

By Nayana
|
Google Oneindia Kannada News

ಬೆಂಗಳೂರು, ಮೇ 31: ನಮ್ಮ ಮೆಟ್ರೋ ನೌಕರರ ಮುಷ್ಕರದ ವಿಚಾರವಾಗಿ ಕೇಂದ್ರ ಕಾರ್ಮಿಕ ಆಯುಕ್ತರು ಕರೆದಿದ್ದ ಸಂಧಾನ ಸಭೆ ವಿಫಲವಾಗಿದೆ. ಮೆಟ್ರೋ ನೌಕರರು ಮತ್ತು ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ನಡುವಿನ ಸಂಘರ್ಷ ನಿವಾರಿಸುವಲ್ಲಿ ಕೇಂದ್ರ ಕಾರ್ಮಿಕ ಆಯುಕ್ತರು ನಡೆಸಿದ ಪ್ರಯತ್ನ ವಿಫಲವಾಗಿದೆ.

ಜೂ.4ರ ಮೆಟ್ರೋ ಮುಷ್ಕರ ಕೈಬಿಟ್ಟ ನೌಕರರು ಜೂ.4ರ ಮೆಟ್ರೋ ಮುಷ್ಕರ ಕೈಬಿಟ್ಟ ನೌಕರರು

ಮೆಟ್ರೋ ನೌಕರರು ವೇತನ ಪರಿಷ್ಕರಣೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ 4 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದರು. ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಈ ಕುರಿತು ಚರ್ಚೆಯಾಗಿತ್ತು. ಜೂ.4ರಂದು ಮತ್ತೆ ಹೈಕೋರ್ಟ್ ವಿಚಾರಣೆ ನಡೆಯಲಿರುವುದರಿಂದ ಮುಷ್ಕರದ ತೀರ್ಮಾನದಿಂದ ನೌಕರರು ಹಿಂದೆ ಸರಿದಿದ್ದರು.

Central labor commissionaire talks with metro employees fails

ಈ ನಡುವೆ ಸಂಧಾನ ನಡೆಸಲು ಮುಂದಾಗಿರುವ ಕೇಂದ್ರ ಕಾರ್ಮಿಕ ಆಯುಕ್ತರು ಬುಧವಾರ ಸಭೆ ನಡೆಸಿ ತೊಂದರೆಗಳ ಕುರಿತು ಚರ್ಚೆ ನಡೆಸಿದರು. ಅಂತಿಮವಾಗಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ವೇತನ ಪರಿಷ್ಕರಣೆ, ನೌಕರರ ಸಂಘಕ್ಕೆ ಕಾನೂನು ಮಾನ್ಯತೆ, ಪಾಳಿ ವ್ಯವಸ್ಥೆಯಲ್ಲಿ ಬದಲಾವಣೆ, ಗುತ್ತಿಗೆ ಪದ್ಧತಿಯನ್ನು ರದ್ದು ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ನೌಕರರು ಆಗ್ರಹಿಸಿದರು.

English summary
Central labor commissionaire has discussed with BMRCL employees on Wednesday and ended with no solution. The commissionaire has tried to solve differences between employees and BMRCL management regarding many issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X