ಬೆಂಗಳೂರು ಕೆರೆಗಳ ಮೇಲೆ 24/7 ಕಣ್ಗಾವಲು

Written By:
Subscribe to Oneindia Kannada

ಬೆಂಗಳೂರು, ಜೂನ್ 15: ಬೆಂಗಳೂರ ಜಲಮಾಲಿನ್ಯ ತಡೆ ಮತ್ತು ಕೆರೆಗಳ ಸಂರಕ್ಷಣೆಗೆ ಗಮನ ಹರಿಸಿರುವ ಕೇಂದ್ರ ಸರ್ಕಾರ ಪರಿಹಾರ ಕ್ರಮಗಳ ಕುರಿತು ನವದೆಹಲಿಯಲ್ಲಿ ಸಮಾಲೊಚನೆ ನಡೆಸಿತು.

ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್, ರಾಜ್ಯ ಪರಿಸರ ಖಾತೆ ಸಚಿವ ರಮಾತಾಥ ರೈ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.[ಬೆಂಗಳೂರು ಕೆರೆ ತೊಳೆಯುವುದಕ್ಕೆ ಕೇಂದ್ರದಿಂದ 800 ಕೋಟಿ ರು.]

lake

ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ನಿಗಾ ವಹಿಸಬೇಕಿದೆ. ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಆರು ತಿಂಗಳಿಗೊಮ್ಮೆ ಅವಲೋಕನ ಮಾಡಬೇಕು ಎಂದು ಜಾವಡೇಕರ್ ಅಧಿಕಾರಿಗಳಿಗೆ ತಿಳಿಸಿದರು.

ನೀರಿನ ಸಂರಕ್ಷಣೆ ಬಗ್ಗೆ ಸ್ಥಳೀಯ ಆಡಳಿತವೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಹದ್ದು ಮೀರಿ ಹೋಗಿದ್ದು ಸರ್ಕಾರಗಳು ಮುಂದೇ ನಿಂತು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂಬ ಅಭಿಪ್ರಾಯ ಕೇಳಿ ಬಂತು. [ಗೂಗಲ್ ಮ್ಯಾಪ್ ನಲ್ಲಿ 'ಬೆಳ್ಳಂದೂರು ಲೇಕ್' ಹುಡುಕಬೇಡಿ!]

ಕಳೆದ ಒಂದು ವರ್ಷದಿಂದ ಬೆಂಗಳೂರು ಕೆರೆಗಳ ಮಾಲಿನ್ಯ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಬೆಳ್ಳಂದೂರು ಕೆರೆ ವಿಷದ ತೊಟ್ಟಿಯಾಗಿದ್ದರೆ, ಹಲಸೂರು, ವರ್ತೂರು ಮತ್ತು ಹೆಬ್ಬಾಳದ ಕೆರೆಗಳಲ್ಲೂ ಜಲಚರಗಳು ಸಾವನ್ನಪ್ಪುತ್ತಿವೆ.

lake

ಸಭೆಯಲ್ಲಿ ಕೇಳಿಬಂದಿದ್ದು
* ಬೆಂಗಳೂರು ಕೊಳಚೆ ನಿರ್ವಹಣೆಗೆ 887 ಕೋಟಿ ರು. ಅಗತ್ಯ
* ಸರಿಯಾದ ಯೋಜನೆಗಳ ಮೂಲಕ ಇಂದಿನಿಂದಲೇ ಕೊಳಚೆ ನಿರ್ವಹಣೆ ಆರಂಭ ಮಾಡಬೇಕು
* 2020ರ ವೇಳೆಗೆ ಪರಿಸ್ಥಿತಿ ಹತೋಟಿಗೆ ತರುವುದು ಎಲ್ಲರ ಜವಾಬ್ದಾರಿ[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]
* ಸರ್ಕಾರದಿಂದ ಹೆಚ್ಚುವರಿ ಅನುದಾನ ಬಳಸಿಕೊಂಡರೂ ಪರವಾಗಿಲ್ಲ.
* ಕೆರೆ ಅಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿಯಾಗುವಂಥ ಕ್ರಮ ತೆಗೆದುಕೊಳ್ಳಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister for Environment and Forests Prakash Javadekar on Tuesday promised to extend all help to rejuvenate the lakes in Bengaluru and asked the Karnataka government to complete the task in a time-bound manner. In the meeting attended by Union Chemicals and Fertilisers Minister Ananth Kumar and Karnataka Forest and Environment Minister Ramanath Rai, state officials made a detailed presentation on the steps taken to rejuvenate the lakes.
Please Wait while comments are loading...