ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಮುಷ್ಕರ: ನೌಕರರ ಮೇಲೆ ಎಸ್ಮಾ ಜಾರಿಗೆ ಕೇಂದ್ರ ಚಿಂತನೆ

By Nayana
|
Google Oneindia Kannada News

ಬೆಂಗಳೂರು ಜೂನ್ 1: ಮೆಟ್ರೋ ನೌಕರರಿಗೆ ಎಸ್ಮಾ ಕಾಯ್ದೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೆಟ್ರೋ ನೌಕರರು ಮುಷ್ಕರ ನಡೆಸುವುದಾಗಿ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದಾರೆ ಹಾಗಾಗಿ ಈ ಹೋರಾಟವನ್ನು ಇಲ್ಲಿಯೇ ಕೈಬಿಡುವಂತೆ ಎಚ್ಚರಿಸಲು ಕೇಂದ್ರ ಸರ್ಕಾರ ಎಸ್ಮಾ ಜಾರಿಗೆ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೇಂದ್ರ ಕಾರ್ಮಿಕ ಆಯುಕ್ತರ ಜತೆ ಮೆಟ್ರೋ ನೌಕರರ ಸಭೆ ವಿಫಲ ಕೇಂದ್ರ ಕಾರ್ಮಿಕ ಆಯುಕ್ತರ ಜತೆ ಮೆಟ್ರೋ ನೌಕರರ ಸಭೆ ವಿಫಲ

ಜೂ 4 ರಂದು ಮೆಟ್ರೋ ಸಿಬ್ಬಂದಿಗಳು ಮುಷ್ಕರ ನಡೆಸಲು ಮುಂದಾಗಿದ್ದರು, ಹೈಕೋರ್ಟ್ ಜೂನ್ 4 ರಂದು ವಿಚಾರಣೆ ಮುಂದೂಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಅಂದು ಕೈಬಿಟ್ಟಿದ್ದಾರೆ. ಆದರೆ ಇನ್ನೊಂದು ದಿನ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಇವರ ನಿರ್ಧಾರಗಳಿಗೆ ಬಿಸಿ ಮುಟ್ಟಿಸಲು ಈ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Center to impose ESMA on metro employees

ಅಗತ್ಯ ಸೇವೆಗಳಡಿ ಮೇಟ್ರೋ ಸೇವೆ ಬರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವ ಯಾವುದೇ ಸೇವೆಯನ್ನು ಎಸ್ಮಾ ಕಾಯ್ದೆಯಡಿಯಲ್ಲಿ ತರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಈ ಹಿನ್ನಲೆಯಲ್ಲಿ ಮೆಟ್ರೋ ನೌಕರರ ಪ್ರತಿಭಟನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಸ್ಮಾ ಕಾಯ್ದೆಯನ್ನು ನೌಕರರ ಪ್ರತಿಭಟನೆ ವೇಳೆ ಜಾರಿಗೊಳಿಸಲು ಮುಂದಾಗಿವೆ.

ಬಿಎಂಆರ್'ಸಿಎಲ್ ಎಂಡಿ ಮಹೇಂದ್ರ ಜೈನ್ ಅವರು ಮಾತನಾಡಿ, ಮೆಟ್ರೋ ಸೇವೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗಿದೆ. ಮೆಟ್ರೋ ಸೇವೆಗಳನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತರಲುವ ಅಗತ್ಯವಿದೆ. ನಗರದ ಜೀವನದಲ್ಲಿ ಚಲನಶೀಲತೆ ಎಂಬುದು ಅತ್ಯಂತ ಮುಖ್ಯವಾದದ್ದು. ಇಂತಹ ಚಲನಶೀಲತೆಯನ್ನು ಪ್ರತಿಬಂಧಿಸುವ ಶಕ್ತಿಗಳನ್ನು ನಿಯಂತ್ರಸಬೇಕು ಎಂದು ಹೇಳಿದ್ದಾರೆ.

ಎಸ್ಮಾ (ಅಗತ್ಯ ಸೇವೆ ನಿರ್ವಹಣೆ ಕಾಯ್ದೆ) ಎನ್ನುವುದು ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸ್ಥಾಪಿಸಲಾದ ಭಾರತದ ಸಂಸತ್ತಿನ ಒಂದು ಕಾರ್ಯವಾಗಿದೆ. ಸರ್ಕಾರ ನೌಕರರ ಮೇಲೆ ಅಂಕುಶ ಹಾಕುವ ಕಾಯ್ದೆ ಇದಾಗಿದ್ದು, 1968ರಲ್ಲಿ ಜಾರಿಗೆ ತರಲಾಗಿತ್ತು.

English summary
Central government thinking of impose Essential Services Management Act (ESMA) on BMRCL employees who were holding strike from June 4 seeking salary revision and other benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X