ಹೊಸ ವರ್ಷ ಆಚರಣೆ ಹಿನ್ನೆಲೆ ಭದ್ರತೆಗೆ ಮೇಯರ್ ಸೂಚನೆ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 28 : ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಎಂ.ಜಿ. ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ನೂತನ ತಂತ್ರಜ್ಞಾನ ಬಳಸಿ ಸಿಸಿಟಿವಿ, ಹೆಲ್ಪ್ ಲೈನ್ ಸೆಂಟರ್ ಅಳವಡಿಸುವಂತೆ ಮೇಯರ್ ಸಂಪತ್ ರಾಜ್ ಆಯುಕ್ತ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.

ಬೆಂಗಳೂರು : ರೈಲು ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕ ಹೆಚ್ಚಳ

ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 31ರಂದು ಹೊಸ ವರ್ಷ ಆಚರಣೆಗೆ ಎಲ್ಲೆಲ್ಲಿ ಹೆಚ್ಚು ಜನ ಸೇರುತ್ತಾರೋ ಅಲ್ಲಿ ಸಿಸಿ ಟಿವಿ ಅಳವಡಿಸಿ ಹೆಚ್ಚು ಭದ್ರತೆ ಒದಗಿಸುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

CCTV, Helpline in MG raod during New year celebration

ಜಿಎಸ್ ಟಿ ಜಾರಿ ವಿಚಾರದಲ್ಲಿ ಸಾಕಷ್ಟು ಗೊಂದಲವಿದೆ. ಜಲ ಮಂಡಳಿ ಹೊರಡಿಸಿರುವ ಆದೇಶ ನನಗೆ ಪೂರ್ಣವಾಗಿ ಗೊತ್ತಿಲ್ಲ. ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತರ ಕೊಡುತ್ತೇನೆ ಎಂದ ಅವರು ಮಾರ್ಕೆಟ್, ಕೇಂದ್ರ ಕಚೇರಿ ಮತ್ತಿತರೆಡೆ ವೈಫೈ ಅಳವಡಿಸಿ ಎಂದು ಸೂಚಿಸಿದರು.

ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೆಂಟ್ರಲ್ ಕಮಾಂಡೆಂಟ್ ಕಂಟ್ರೋಲ್ ರೂಂ ಸಿಸ್ಟಮ್ ಮಾಡಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಇದಕ್ಕೆ ಹೊಸ ಸಾಫ್ಟ್‍ವೇರ್ ಅಳವಡಿಸಬೇಕಿದೆ. ಪೊಲೀಸ್ ಕಂಟ್ರೋಲ್ ರೂಂ ಮಾದರಿಯಲ್ಲೇ ನಮ್ಮ ಕಂಟ್ರೋಲ್ ರೂಂ ಕಾರ್ಯ ನಿರ್ವಹಿಸಲಿದೆ. ಈ ಯೋಜನೆ 3 ತಿಂಗಳೊಳಗೆ ಜಾರಿಯಾಗಲಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP Mayor Sampath Raj has given instructions to officials that CCTV and Helpline should be installed during new year celebrations in MG road, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ