ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಹೊಯ್ಸಳ ಜೀಪಿಗೂ ಬಂತು ಸಿಸಿಟಿವಿ

|
Google Oneindia Kannada News

ಬೆಂಗಳೂರು, ಮೇ 15 : ಬೆಂಗಳೂರು ಪೊಲೀಸರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ರಾತ್ರಿ ಗಸ್ತು ತಿರುಗುವ ಸಿಬ್ಬಂದಿ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಹೊಯ್ಸಳ ಜೀಪುಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಪ್ರಾಯೋಗಿಕವಾಗಿ ಈ ಯೋಜನೆ ಆಗ್ನೇಯ ವಿಭಾಗದಲ್ಲಿ ಜಾರಿಗೆ ಬಂದಿದೆ. ವಿಭಾಗದ ವ್ಯಾಪ್ತಿಯ ಒಟ್ಟು 13 ಪೊಲೀಸ್ ಠಾಣೆಗಳಲ್ಲಿರುವ 15 ಹೊಯ್ಸಳ ಜೀಪುಗಳಿಗೆ ಸಿಸಿಟಿವಿಯನ್ನು ಆಳವಡಿಸಲಾಗಿದೆ. ಹಿರಿಯ ಅಧಿಕಾರಿಗಳು ಇದನ್ನು ನಿರ್ವಹಣೆ ಮಾಡಲಿದ್ದು, ತಮ್ಮ ಫೋನ್‌ ಮೂಲಕ ಅವರು ಸೆರೆಯಾಗಿರುವ ದೃಶ್ಯವನ್ನು ನೇರವಾಗಿ ವೀಕ್ಷಿಸಬಹುದಾಗಿದೆ. [ಗುಪ್ತಚರ ಇಲಾಖೆಗೆ ಶೀಘ್ರ ಎಸ್ ಐಗಳ ನೇಮಕ]

Hoysala patrol vehicles

ಆಗ್ನೇಯ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪೆಟ್ ಅವರು ಈ ಯೋಜನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಗಸ್ತು ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದವು. ಗುಂಪು ಘರ್ಷಣೆ ಸಮಯದಲ್ಲಿಯೂ ಅಲ್ಲಿನ ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ. [ಬೆಂಗಳೂರಲ್ಲಿ 24x7 ರಕ್ಷಣೆ ಸ್ಮಾರ್ಟ್ ಸಿಟಿ ಯೋಜನೆ]

14 ಸಾವಿರ ಖರ್ಚು : ಜೀಪುಗಳಿಗೆ ಅಳವಡಿಸಿರುವ ಕ್ಯಾಮರಾಗಳ ಬೆಲೆ 14 ಸಾವಿರ ರೂ. 12 ಗಂಟೆಗೊಮ್ಮೆ ಈ ಜೀಪುಗಳು ಪೊಲೀಸ್ ಠಾಣೆಗೆ ಆಗಮಿಸಲಿದ್ದು, ಆಗ ಅದರಲ್ಲಿರುವ ದೃಶ್ಯಗಳನ್ನು ಡೌನ್ ಲೋಡ್ ಮಾಡಿಕೊಳ್ಳಲಾಗುತ್ತದೆ. ಹಿರಿಯ ಅಧಿಕಾರಿಗಳು ಸ್ಮಾರ್ಟ್‌ ಫೋನ್‌ ಮೂಲಕ ನೇರವಾಗಿ ಸೆರೆಯಾಗಿರುವ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆಗ್ನೇಯ ವಿಭಾಗದಲ್ಲಿ ಜಾರಿಗೆ ತರಲಾಗಿದೆ. ಯೋಜನೆ ಫಲಪ್ರದವೆನಿಸಿದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಸಂಚರಿಸುವ ಹೊಯ್ಸಳ ಗಸ್ತು ವಾಹನಗಳಿಗೆ ಇದನ್ನು ಆಳವಡಿಸಲು ಪೊಲೀಸರು ನಿರ್ಧರಿಸಿದ್ದಾರೆ.

English summary
CCTV cameras installed in Hoysala patrol vehicles said, Rohini Katoch Sepat, deputy commissioner of police (south east) Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X