ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅಕ್ರಮ ಗ್ಯಾಸ್, ರೆಗ್ಯುಲೇಟರ್ ಮಾರಾಟಗಾರನ ಬಂಧನ

ಗ್ಯಾಸ್ ಮತ್ತು, ಗ್ಯಾಸ್ ರೆಗ್ಯುಲೇಟರ್ ಗಳನ್ನು ಅಕ್ರಮವಾಗಿ ಮಾರಾಟ ಮಾಡಿ, ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನಿಂದ 3,03,700ರು.ಮತ್ತು 1524 ರೆಗ್ಯುಲೇಟರ್ ಗಳನ್ನು ಜಪ್ತಿ ಮಾಡಿದ್ದಾರೆ.

By Ramesh
|
Google Oneindia Kannada News

ಬೆಂಗಳೂರು, ನವೆಂಬರ್. 16 : ಹೆಚ್.ಪಿ, ಇಂಡೇನ್. ಭಾರತ್ ಕಂಪನಿಗಳ ಗೃಹಬಳಕೆಯ ಗ್ಯಾಸ್ ರೆಗ್ಯುಲೇಟರ್ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯಯನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ದಂಧೆಯಲ್ಲಿ ತೊಡಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪಿ.ವಿನೋದ್ ಬಿನ್ ಬಾಬಯ್ಯ (21)ವರ್ಷ ಎಂಬಾತನನ್ನು ವಶಕ್ಕೆ ಪಡೆದಿದುಕೊಂಡಿದ್ದಾರೆ. ಬಂಧಿತನಿಂದ 1524 ರೆಗ್ಯುಲೇಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ, ಚಿಕ್ಕಪೇಟೆ, ಎ.ಎಸ್. ಚಾರ್ ಸ್ಟ್ರೀಟ್, ಟಂಕಸಾಲ್ ಟವರ್ಸ್, 4ನೇ ಮಹಡಿಯಲ್ಲಿರುವ ಎಲ್.ಪಿ.ಜಿ.ಗ್ಯಾಸ್ ಬಿಡಿಭಾಗಗಳ ಗೋದಾಮಿನಲ್ಲಿ ಹೆಚ್.ಪಿ, ಇಂಡೇನ್, ಭಾರತ್ ಕಂಪನಿಗಳ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ರೆಗ್ಯುಲೇಟರ್ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ.

Illegally Gas, Regulator Seller's arrested ccb police

ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ವಂಚನೆ ಮತ್ತು ದುರುಪಯೋಗದಳದ ಪೊಲೀಸರು ಗೋದಾಮಿನ ಮೇಲೆ ದಾಳಿ ಮಾಡಿದ್ದಾರೆ.

ಸುಮಾರು 57,600 ರು ಬೆಲೆ ಬಾಳುವ 1524 ರೆಗ್ಯುಲೇಟರ್ ಗಳನ್ನು ಹಾಗೂ ಇವುಗಳ ಮಾರಾಟದಿಂದ ಸಂಪಾದಿಸಿದ ಅಕ್ರಮ ಹಣ 3,03,700 ರುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಮಾರು 1 ವರ್ಷದಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ಅನುಮತಿ ಪಡೆದ ಗ್ಯಾಸ್ ಏಜೆನ್ಸಿಗಳ ಮುಖಾಂತರ ಈ ದಂಧೆ ತೊಡಗಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದು ವಿಚಾರಣೆಯಿಂದ ದೃಢಪಟ್ಟಿರುತ್ತದೆ.

ಮಾಲಿಕರಾದ ಮಹಾವೀರ್ ಚಂದ್ ಮತ್ತು ಆನಂದ್ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ. 420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

English summary
The CCB Police have arrested Illegally Gas, Regulator Seller's in Bengaluru, and recovered 1524 Regulators and 3 lakh illegal cash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X