ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಸಹಚರರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 15: ಮಾರಕಾಸ್ತ್ರಗಳೊಂದಿಗೆ ದರೋಡೆ ಮಾಡಲು ಸಜ್ಜಾಗಿದ್ದ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಸಹಚರರನ್ನು ಸಿಸಿಬಿ ಪೊಲೀಸರು ಗುರುವಾರ ಮುಂಜಾನೆ ಬಂಧಿಸಿದ್ದಾರೆ

ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ರಾಜಾಜಿನಗರ 1ನೇ ಬ್ಲಾಕ್‌, ನಾಗಪುರ ವಾರ್ಡ್‌, 10ನೇ ಕ್ರಾಸ್‌ನಲ್ಲಿರುವ ಆಟದ ಮೈದಾನದ ಬಳಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕಾಯುತ್ತಿರುವ ಸುಳಿವು ದೊರೆತ ಕಾರಣ ದಾಳಿ ಮಾಡಿದ ಪೊಲೀಸರು 5 ಮಂದಿ ರೌಡಿಗಳನ್ನು ಬಂಧಿಸಿದ್ದಾರೆ.

ರೌಡಿ ಶೀಟರ್ ಅಲೀಂ ಮೇಲೆ ಗುಂಡು ಹಾರಿಸಿದ ಪೊಲೀಸರು!

ಬಂಧನಕ್ಕೊಳಗಾದ ರೌಡಿಗಳು ಸ್ಲಂ ಭರತ ಎಂಬುವನ ಸಹಚರರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇರುವ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಲು ಸಜ್ಜಾಗಿದ್ದರು ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕಿದ್ದಾರೆ.

CCB police arrested goons who planing to robery

ಲಕ್ಷ್ಮೀನಾರಾಯಣ ಅಲಿಯಾಸ್ ಲಕ್ಕಿ, ಮಂಜುನಾಥ್ ಅಲಿಯಾಸ್ ಕಿರಿಕ್ ಮಂಜ, ಪ್ರವೀಣ್ ವಿಕ್ಕಿ ಅಲಿಯಾಸ್ ವಿಕ್ಕಿ, ಚಂದ್ರಶೇಖರ್ ಹಾಗೂ ಹೇಮಂತ ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ಇವರೆಲ್ಲರೂ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ಸಹಚರರು ಎನ್ನಲಾಗಿದೆ.

ಬಂಧನಕ್ಕೊಳಗಾಗಿರುವರೆಲ್ಲರ ಮೇಲೂ ಕೊಲೆ, ಸುಲಿಗೆ, ದರೋಡೆ, ಕೊಲೆ ಯತ್ನದಂತಹಾ ಗಂಭೀರ ಪ್ರಕರಣಗಳು ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru CCB police arrested some goons who were said to be Natorious rowdy Silent Sunils gang members. They were planing to rob some on in Rajajinagar today morning, in right time CCB police arrested them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ