ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ನಾಲ್ವರ ಬಂಧನ

Posted By:
Subscribe to Oneindia Kannada
ಬೆಂಗಳೂರು, ಫೆಬ್ರವರಿ 15: ಸಿಸಿಬಿ ಪೊಲೀಸರ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಹಾಗೂ ಬ್ಲಾಕ್ ಅಂಡ್ ವೈಟ್ ನೆಪದಲ್ಲಿ ಹಣವನ್ನು ದೋಚುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿ ಆರೋಪಿಗಳನ್ನು ಮತ್ತು ರು 24.49 ಲಕ್ಷ ಹಣ, ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ರಮೇಶ್(33), ರೂಪೇಶ್(37), ಪುಟ್ಟರಾಜು(47) ಮತ್ತು ಮುತ್ತರಾಯ ಶೆಟ್ಟಿ(42) ಬಂಧಿತರು. ಆರೋಪಿಗಳಿಂದ ರು.500 ರು.1000 ಮುಖಬೆಲೆಯ ರು.17.49 ಲಕ್ಷ ಹಳೆಯ ನೋಟುಗಳು ಹಾಗೂ ರು.500, ರು. 2000 ಮುಖಬೆಲೆಯ 9 ಲಕ್ಷ ಹೊಸ ನೋಟುಗಳು ಸೇರಿ ಒಟ್ಟು ರು. 26.49 ಲಕ್ಷಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು, ಆಕ್ಟಿವಾ ಹೋಂಡಾ ವಾಹನ ವಶಪಡಿಸಿಕೊಳ್ಳಲಾಗಿದೆ.[ಖೈದಿಗಳಿಗೆ ಮಾದಕ ವಸ್ತು ಮಾರಲು ಯತ್ನಿಸುತ್ತಿದ್ದ 7 ಜನರ ಬಂಧನ]

CCB Police arrested 4 accused. Who run the black and white roket in bengaluru

ರಮೇಶ್ ಸೇರಿದಂತೆ ಬಂಧಿತರು ಹಣವಂತರ ಮೇಲೆ ನಿಗಾ ಇರಿಸಿ ಅವರ ಬಳಿ ಧಾವಿಸಿ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗುವಂತೆ ಮಾಡಿ ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಖಚಿತ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ.

ಇನ್ನು ಆರೋಪಿಗಳ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಜಾಲದಲ್ಲಿ ಯಾರು ಯಾರು ಅಡಗಿದ್ದಾರೆ ಎಂದು ಹೊರಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CCB Police arrested 4 accused. Who run the black and white roket network in Bengaluru. CCB officials seized total of 26.49 lakh and Innova car, the Honda Activa
Please Wait while comments are loading...