ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಹುಕೋಟಿ ಮೋಸ ಪ್ರಕರಣ: ಸಿಸಿಬಿಯಿಂದ ಜನಾರ್ದನ ರೆಡ್ಡಿ ಹುಡುಕಾಟ

|
Google Oneindia Kannada News

Recommended Video

ಜನಾರ್ಧನ ರೆಡ್ಡಿ ನಾಪತ್ತೆ | ಸಿಸಿಬಿ ಪೊಲೀಸರಿಂದ ಹುಡುಕಾಟ | Oneindia Kannada

ಬೆಂಗಳೂರು, ನವೆಂಬರ್ 7: ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹುಡುಕಾಟದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದೀಪಾವಳಿ ವಿಶೇಷ ಪುರವಣಿ

ಜನಾರ್ದನ ರೆಡ್ಡಿ ಅವರು ದೀಪಾವಳಿಯಲ್ಲಿಯೇ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ, ಸಿಸಿಬಿ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿದೆ. ಜನಾರ್ದನ ರೆಡ್ಡಿಯವರು ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪ ಇದೀಗ ಕೇಳಿಬರುತ್ತಿದೆ.

ತಮ್ಮಲ್ಲಿರುವ ರದ್ದಾದ ನೋಟುಗಳನ್ನು ಹೊಸ ನೋಟುಗಳನ್ನಾಗಿ ಬದಲಾವಣೆ ಮಾಡಲು ಜನಾರ್ದನ ರೆಡ್ಡಿ ಡೀಲ್ ಮಾಡಿಕೊಂಡಿದ್ದರು. ಹಳೆ ನೋಟುಗಳಿಗೆ ಹೊಸ ನೋಟುಗಳನ್ನು ನೀಡಿದರೆ ಅವರಿಗೆ 57 ಕೆಜಿ ಚಿನ್ನ ಕೊಡುವುದಾಗಿ ನಂಬಿಸಿದ್ದರು. ಬಳಿಕ ಹಣವನ್ನೂ ಪಡೆದಿದ್ದರು ನಂತರದಲ್ಲಿ ಚಿನ್ನ ಕೊಡದೆ ನಕಲಿ ರಶೀದಿಯೊಂದನ್ನು ತಯಾರಿಸಿ ಕಣ್ಣಿಗೆ ಮಣ್ಣೆರೆಚುವ ನಾಟಕವಾಡಿದ್ದರು. ಇದರ ವಿರುದ್ಧ ಇದೀಗ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ.

ಜನಾರ್ದನ ರೆಡ್ಡಿ ಪಿಎ ಅಲಿಖಾನ್ ಮೂಲಕ 57 ಕೆಜಿ ಚಿನ್ನದ ಗಟ್ಟಿಯನ್ನು ವರ್ಗಾವಣೆ ಮಾಡಿದ್ದರು. ಎನೋಬಲ್ ಕಂಪನಿ ಮೂಲಕ ವರ್ಗಾವಣೆ ಮಾಡಿದ್ದಾರೆ ಹಾಗೂ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ನೋಟು ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

ಈ ಕುರಿತು ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿಯವರ ಹುಡುಕಾಟದಲ್ಲಿದ್ದಾರೆ ಆದರೆ ಅವರು ತಲೆ ಮರೆಸಿಕೊಂಡಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನುವ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ.

CCB eyes on former minister Janardhan Reddy

ಬೆಂಗಳೂರು ಸಿಸಿಬಿ ವಿಶೇಷ ತಂಡವು ಜನಾರ್ದನ ರೆಡ್ಡಿ ಅವರನ್ನು ಭೇಟಿ ಆಗಲಿದೆ ಹಾಗೂ ಅವರನ್ನು ವಿಚಾರಣೆ ಒಳಪಡಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗು ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗು

ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನೀಕರಣಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಪಿಎಗಾಗಿ ಸಿಸಿಬಿ ತಂಡ ತೀವ್ರ ಶೋಧ ನಡೆಸುತ್ತಿದೆ. ದೇವನಹಳ್ಳಿ ರೇಸಾಲ್ಟ್ ಬಳಿಯೂ ಸಿಸಿಬಿ ದಂಡ ತೆರಳಿದೆ ಮಾಹಿತಿ ಇದೆ.

ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್ ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್

ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್ ಪತ್ತೆಗಾಗಿ ಸಿಸಿಬಿ ತಂಡ ಚುರುಕು ಕಾರ್ಯಾಚರಣೆ ನಡೆಸಿದೆ. ಇತ್ತ ಜನಾರ್ದನ ರೆಡಿ ಮೊಬೈಲ್ ಕೂಡ ಸ್ವೀಜ್ ಆಫ್ ಆಗಿದೆ. ಹೀಗಾಗಿ ಅವರು ಪತ್ತೆ ಆಗುತ್ತಿದ್ದಂತೆ ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

English summary
CCB police of Bengaluru have searching former minister Janardhan Reddy who allegedly involved in Ambident company cheating case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X