ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುರಾತನ ವಿಗ್ರಹ ಕಳ್ಳಸಾಗಣೆ ಜಾಲ ಪತ್ತೆ ಹಚ್ಚಿದ ಸಿಸಿಬಿ

|
Google Oneindia Kannada News

ಬೆಂಗಳೂರು, ಅ.4 : ಪುರಾತನ ವಿಗ್ರಹಗಳನ್ನು ವಿದೇಶಗಳಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, 32 ಕೋಟಿ ಮೌಲ್ಯದ 3 ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಗ್ರಹಗಳನ್ನು ಕೊಂಡು ಕೊಳ್ಳುವವರಂತೆ ನಟಿಸಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ವಿಗ್ರಹ, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆದಿದೆ. [ಉತ್ತರಹಳ್ಳಿಯಲ್ಲಿ ರಾಮ, ಸೀತೆ ಪ್ರತ್ಯಕ್ಷ!]

CCB police

ಓಎಲ್​ಎಕ್ಸ್​ ನಲ್ಲಿ ಹಕ್ಕಿ ಮಾರಾಟ : ಗೀಜಗದ ಹಕ್ಕಿ ಗೂಡಿನ ಫೋಟೋವನ್ನು ಓಎಲ್​ಎಕ್ಸ್​ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕಬ್ಬನ್​ ಪಾರ್ಕ್​ ಪೊಲೀಸರು ಬಂಧಿಸಿದ್ದಾರೆ. ಗಗನ್​ ಎಂಬುವವರು ಚಿಕ್ಕಮಗಳೂರಿನಿಂದ ಹಕ್ಕಿ ಗೂಡನ್ನು ತಂದು ತಲಾ 400 ರೂ.ಗಳಿಗೆ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಗೂಡು ಹಸಿಯಾಗಿರುವಾಗಲೇ ಅದನ್ನು ಕಿತ್ತು ತರುವುದರಿಂದ ಆ ಹಕ್ಕಿಗಳ ಸಂತಾನೋತ್ಪತಿಗೆ ತೊಂದರೆಯಾಗುತಿತ್ತು. ಈ ವಿಷಯದ ಬಗ್ಗೆ ಮಾಹಿತಿ ತಿಳಿದ ಬಿಬಿಎಂಪಿ ಅರಣ್ಯ ಇಲಾಖೆ ಅಧಿಕಾರಿಗಳು ಕಬ್ಬನ್​ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಅನ್ವಯ ದಾಳಿ ನಡೆಸಿದ ಅಧಿಕಾರಿಗಳು ಗಗನ್ ಅನ್ನು ಬಂಧಿಸಿ ಪಡೆದುಕೊಂಡು 43 ಗೂಡುಗಳನ್ನು ವಶಕ್ಕೆ ಪಡೆದಿದ್ದಾರೆ.

English summary
Bangalore CCB police busts racket of international smuggling of ancient Indian idols and seized 3 idols worth of 32 cores, Arrested 3 smugglers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X