ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಸಿಬಿಯು ರೆಡ್ಡಿ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿಎಸ್‌ವೈ

|
Google Oneindia Kannada News

ಬೆಂಗಳೂರು, ನವೆಂಬರ್ 17: ಸಿಸಿಬಿಯು ಜನಾರ್ದನ ರೆಡ್ಡಿ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

ಶನಿವಾರ ಯಡಿಯೂರಪ್ಪ ನಿವಾಸದಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿಯವರನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಅವರ ಪರವಾಗೂ ಮಾತನಾಡುತ್ತಿಲ್ಲ ಅವರ ಜಾಗದಲ್ಲಿ ಯಾರೇ ಇದ್ದರೂ ಹೀಗೆಯೇ ಮಾತಣಾಡುತ್ತಿದ್ದೆ, ಅವರ ಪ್ರಕರಣದಲ್ಲಿ ಸಿಸಿಬಿ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ

ಇದೆಲ್ಲಕ್ಕೂ ನ್ಯಾಯಾಲಯದಲ್ಲೇ ಉತ್ತರ ದೊರೆಯಲಿದೆ. ಮಹದಾಯಿ ಸಭೆಗೆ ಹೋಗುವುದಿಲ್ಲ, ನಮ್ಮ ಮನೆಯಲ್ಲೊ ಮದುವೆ ಇದೆ ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ, ಪಕ್ಷದ ಪರವಾಗಿ ಬಸವರಾಜ ಬೊಮ್ಮಾಯಿ ಹೋಗುತ್ತಾರೆ ಎಂದು ಹೇಳಿದರು. ಜನಾರ್ದನ ರೆಡ್ಡಿಯವನ್ನು ಭೇಟಿಯಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲಿಲ್ಲ.

ಜನಾರ್ದನ ರೆಡ್ಡಿಗೆ ಜಾಮೀನು

ಜನಾರ್ದನ ರೆಡ್ಡಿಗೆ ಜಾಮೀನು

ಆಂಬಿಡೆಂಟ್‌ ಪ್ರಕರಣದಲ್ಲಿ ಲಂಚ ಪಡೆದ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಸಿಸಿಬಿಯಿಂದ ಬಂಧಿಸಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇಂದು ಜಾಮೀನು ದೊರೆತಿದೆ. ಸಿಸಿಬಿ ಮುಂದೆ ನವೆಂಬರ್ 10 ರಂದು ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿಯು ಭಾನುವಾರ ನವೆಂಬರ್ 11 ರಂದು ಬಂಧಿಸಿತ್ತು. ಒಂದನೇ ಎಸಿಎಂಎಂ ನ್ಯಾಯಾಲಯವು ರೆಡ್ಡಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902 ಜನಾರ್ದನ ರೆಡ್ಡಿಗೆ ಮತ್ತೆ ಜೈಲುವಾಸ ಶುರು, ಖೈದಿ ನಂ 10902

ಮಂಜುನಾಥ್ ಚೌಧರಿ ಬಳ್ಳಾರಿಯ ರೆಡ್ಡಿ ಮನೆ ಮೇಲೆ ದಾಳಿ ಮಾಡಿದ್ದರು

ಮಂಜುನಾಥ್ ಚೌಧರಿ ಬಳ್ಳಾರಿಯ ರೆಡ್ಡಿ ಮನೆ ಮೇಲೆ ದಾಳಿ ಮಾಡಿದ್ದರು

ಎಸಿಪಿಗಳಾದ ಪಿಟಿ ಸುಬ್ರಹ್ಮಣ್ಯ, ಎಂಎಚ್ ಮಂಜುನಾಥ್ ಚೌಧರಿ ಹಾಗೂ ಮರಿಯಪ್ಪ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ಕಾರ್ಯಾಚರಣೆಗೆ ರಚಿಸಲಾಗಿದ್ದ ದಳಗಳ ನೇತೃತ್ವವಹಿಸಿದ್ದರು. ಈ ಪೈಕಿ ಮಂಜುನಾಥ್ ಚೌಧರಿ ಅವರು ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು.

ಹಣ ವಂಚನೆ ಪ್ರಕರಣ: ಸಿಸಿಬಿ ಕಚೇರಿಯತ್ತ ಜನಾರ್ದನ ರೆಡ್ಡಿ ಹಣ ವಂಚನೆ ಪ್ರಕರಣ: ಸಿಸಿಬಿ ಕಚೇರಿಯತ್ತ ಜನಾರ್ದನ ರೆಡ್ಡಿ

ಎರಡು ಕಾಲಿನ ಪುಣ್ಯಕೋಟಿ ಮಣ್ಣು ಅಗೆದು ತಿಂದಿದೆ: ರೆಡ್ಡಿ ವಿರುದ್ಧ ಲೇವಡಿ

ಎರಡು ಕಾಲಿನ ಪುಣ್ಯಕೋಟಿ ಮಣ್ಣು ಅಗೆದು ತಿಂದಿದೆ: ರೆಡ್ಡಿ ವಿರುದ್ಧ ಲೇವಡಿ

ಎರಡು ಕಾಲಿನ ಪುಣ್ಯಕೋಟಿ ಮಣ್ಣು ಅಗೆದು ತಿಂದಿದೆ ಹೀಗಾಗಿ ನಾಡಿನ ಸಂಪತ್ತು ಲೂಟಿ ಮಾಡಿದ ಪುಣ್ಯಕೋಟಿಯಿಂದ ನಿಜವಾದ ಪುಣ್ಯಕೋಟಿಯಾದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಪಾಠ ಕಲಿಯಬೇಕಿಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ತನ್ನನ್ನೇ ತಾನು ಪುಣ್ಯಕೋಟಿ ಎಂದು ಕರೆದುಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ನಾಡಿನ ಅಪಾರ ಸಂಪತ್ತನ್ನು ಇಂಚಿಂಚು ಅಗೆದು ತಿಂದು ರಾಜಕಾರಣ ಮಾಡಿದ ಜನಾರ್ದನ ರೆಡ್ಡಿ ದೆಹಲಿಗೆ ಹೋಗಿ ಬಂದ ಮೇಲಾದರೂ ಬುದ್ಧಿ ಕಲಿಯಬೇಕಿತ್ತು. ಆದರೆ ಈಗಲೂ ಕೂಡ ಮಣ್ಣು ತಿನ್ನುವ ಹಳೆಯ ಚಾಳಿ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜನಾರ್ದನ ರೆಡ್ಡಿಗೆ ಪ್ರತಿ ದೀಪಾವಳಿ ಅಮಾವಾಸ್ಯೆ ಕಂಟಕ ಪ್ರಾಯವೇ? ಹೀಗೊಂದು ಜಿಜ್ಞಾಸೆ ಜನಾರ್ದನ ರೆಡ್ಡಿಗೆ ಪ್ರತಿ ದೀಪಾವಳಿ ಅಮಾವಾಸ್ಯೆ ಕಂಟಕ ಪ್ರಾಯವೇ? ಹೀಗೊಂದು ಜಿಜ್ಞಾಸೆ

ಸಿಸಿಬಿಗೆ ಕೋರ್ಟ್ ತರಾಟೆ

ಸಿಸಿಬಿಗೆ ಕೋರ್ಟ್ ತರಾಟೆ

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜನಾರ್ದನ ರೆಡ್ಡಿ ಮತ್ತು ಕಂಪನಿಗೆ ನೇರ ನಂಟು ಇದೆಯಾ? ರೆಡ್ಡಿಗೆ ನೇರವಾಗಿ ಲಿಂಕ್ ಇದೆಯಾ, ದೂರು ಇರುವುದೇ ಒಂದು, ನೀವು ಮಾಡುತ್ತಿರುವ ತನಿಖೆಯೇ ಮತ್ತೊಂದು, ಗ್ರಾಹಕರು ಅಥವಾ ದೂರುದಾರರು ರೆಡ್ಡಿ ವಿರುದ್ಧ ಕೇಸ್ ಕೊಟ್ಟಿಲ್ಲ, ಹಾಗಿದ್ದರೂ ಸಂಬಂಧ ಇದೆ ಎಂದು ಹೇಗೆ ಹೇಳುತ್ತೀರಾ ಎಂದು ತರಾಟೆ ತೆಗೆದುಕೊಂಡರು.

English summary
BJP state president BS Yeddyurappa that CCB actoi over Janardhana reddy is not legal. everything will be clearedin court soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X