ಇಬ್ಬರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 5 ವರ್ಷ ಜೈಲು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03 : ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸಿಬಿಐ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಕಮೀಷನರ್ ಆಗಿದ್ದ ಧೀರೇಂದ್ರ ಕುಮಾರ್ ಝಾ ಮತ್ತು ಆದಾಯ ತೆರಿಗೆ ಕಮಿಷನರ್ ಯು.ಎ.ಚಂದ್ರಮೌಳಿ ಶಿಕ್ಷೆಗೊಳಗಾದವರು. ಇಬ್ಬರೂ ಅಧಿಕಾರಿಗಳಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಮತ್ತು 7.50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.[ಐಟಿ ರಿಟರ್ನ್ಸ್ ಕೊನೆ ದಿನಾಂಕ ಮತ್ತೆ ವಿಸ್ತರಣೆ]

CBI court sentenced 5 years of jail for two income tax officers

ಸರ್ಕಾರದ ಬೊಕ್ಕಸಕ್ಕೆ 4.16 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಸಾಬೀತಾಗಿದ್ದು, ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬೆಂಗಳೂರಿನ ಜೆ.ಪಿ.ನಗರದ ಮಕ್ಕಳ ಶಿಕ್ಷಣ ಸಂಸ್ಥೆಗೆ ಸೇರಿದ ಹಣಕಾಸು ವ್ಯವಹಾರದಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡಲಾಗಿತ್ತು.[ಕಪ್ಪು ಹಣ ಘೋಷಣೆಗೂ ಅವಕಾಶ, ಮಾಹಿತಿ ಗೌಪ್ಯವಾಗಿರುತ್ತೆ]

ಮಕ್ಕಳ ಶಿಕ್ಷಣ ಸಂಸ್ಥೆಗೆ ಸೇರಿದ 2003-2004ರ ಆರ್ಥಿಕ ವರ್ಷದ ಆಯವ್ಯಯ ಪತ್ರವನ್ನು 2006ರಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು. [ತೆರಿಗೆ ಟೋಪಿ ತಪ್ಪಿಸಲು ಇಲಾಖೆ ಮಾಸ್ಟರ್ ಪ್ಲ್ಯಾನ್]

2008ರಲ್ಲಿ ಈ ಬಗ್ಗೆ ಸಿಬಿಐ ಧೀರೇಂದ್ರ ಕುಮಾರ್ ಝಾ, ಯು.ಎ.ಚಂದ್ರಮೌಳಿ ಮತ್ತು ಸೊಸೈಟಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿತ್ತು. ಸೊಸೈಟಿ ಅಧ್ಯಕ್ಷರು ವಿಚಾರಣೆ ಅವಧಿಯಲ್ಲಿ ಮೃತಪಟ್ಟಿದ್ದು, ಉಳಿದ ಇಬ್ಬರಿಗೆ ಶಿಕ್ಷೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The special Central Bureau of Investigation (CBI) court Bengaluru has passed an order sentencing 2 officials of the Income tax department to five years of imprisonment in a case of loss of Rs 4.16 crore to the government.
Please Wait while comments are loading...