ಸಿಬಿಐನಿಂದ ಮಲ್ಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜನವರಿ 23: ಖಾಲಿ ಕೈ ಕುಬೇರ ಮಲ್ಯ ಒಡೆತನದ ಯುಬಿ ಸಮೂಹ ಸಂಸ್ಥೆ ಮೇಲೆ ಸೋಮವಾರ ಸಿಬಿಐ ದಾಳಿ ನಡೆಸಿದ ಸುದ್ದಿ ಓದಿರಬಹುದು. ಈಗ ಪೂರಕ ಮಾಹಿತಿ ಇಲ್ಲಿದೆ. ಐಡಿಬಿಐ ಸಾಲ ವಸೂಲಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದ್ದು, ಮಲ್ಯ ಅವರ ಕಿಂಗ್ ಫಿಶರ್ ಸಂಸ್ಥೆಯ ನಾಲ್ವರು ಅಧಿಕಾರಿಗಳು ಹಾಗೂ ಐಡಿಬಿಐಯ ನಾಲ್ವರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.

ಸೋಮವಾರ ಬೆಳಗ್ಗೆಯಿಂದ ಯುಬಿ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಸುಮಾರು 15ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ, 12ಕ್ಕೂ ಅಧಿಕ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಕಿಂಗ್ ಫಿಶರ್ ಸಂಸ್ಥೆ ದಿವಾಳಿ ಎದ್ದಿದ್ದರೂ ಐಡಿಬಿಐನಿಂದ ಮಲ್ಯ ಅವರು 900 ಕೋಟಿ ರು ಸಾಲ ಪಡೆದಿದ್ದರು. ಆದರೆ, ಸಾಲ ಹಿಂತಿರುಗಿಸಿರಲಿಲ್ಲ. ಈ ಪ್ರಕರಣದ ತನಿಖೆ ಜಾರಿಯಲ್ಲಿದೆ.

CBI arrests 4 in Mallya's IDBI loan default case

ಆರ್ಥಿಕವಾಗಿ ದಿವಾಳಿಯಾಗಿರುವ ಮಲ್ಯ ಅವರು ಯುಬಿ ಸಮೂಹದ ಮುಖ್ಯಸ್ಥನ ಸ್ಥಾನ ತೊರೆದ ಬಳಿಕ ಸಿಕ್ಕ ಮೊತ್ತವನ್ನು ಏನು ಮಾಡಿದರು ಎಂಬ ಪ್ರಶ್ನೆ ಇತ್ತೀಚೆಗೆ ಎದ್ದಿತ್ತು. ಗುಟ್ಟಾಗಿ ಮಕ್ಕಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಂದಿತ್ತು. ಈ‌ ಹಿನ್ನೆಲೆ ಯುಬಿಸಿಟಿ ಬ್ಯಾಂಕ್ ಅಕೌಂಟ್ ‌ಗಳ ಮೇಲೆ ಸಿಬಿಐ ನಿಗಾವಹಿಸಿದ್ದು, ಸರ್ಚ್ ‌ ವಾರೆಂಟ್ ‌ಪಡೆದು ದಾಳಿ ನಡೆಸಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Central Bureau of Investigation has arrested 4 Kingfisher officials in connection with the IDBI loan default case. The CBI also arrested 4 officials of the IBDI ban in connection with this case.
Please Wait while comments are loading...